ಕರ್ನಾಟಕ ಋಣ ಪರಿಹಾರ ಕಾಯ್ದೆಯಡಿ ಸಾಲ ಮನ್ನಾಕ್ಕೆ ಅರ್ಜಿ ಆಹ್ವಾನ ➤ ಸಾಲ‌ ಮನ್ನಾದ ಬಗ್ಗೆ ಸಂಪೂರ್ಣ ವೀಡಿಯೋ ಮಾಹಿತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.13. ಕರ್ನಾಟಕ ರಾಜ್ಯ ಋಣ ಪರಿಹಾರ ವಿಧೇಯಕ – 2018 ಜುಲೈ 23 ರಿಂದ ಜಾರಿಗೆ ಬಂದಿರುತ್ತದೆ. ಅದರಂತೆ ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರು, ಮತ್ತು ದುರ್ಬಲ ವರ್ಗದ ಜನರು (ವಾರ್ಷಿಕ ಆದಾಯ ರೂ.1.20.000/- ಗಳ ಮೀರದಿರುವ) ಖಾಸಗಿ ಲೇವಾದೇವಿಗಾರರು ಮತ್ತು ಗಿರವಿದಾರರಿಂದ ಸಾಲ ಪಡೆದಿದ್ದಲ್ಲಿ ಕಾಯ್ದೆಯ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ.

ಕರ್ನಾಟಕ ಋಣ ಪರಿಹಾರ ಕಾಯ್ದೆಯು ಸಾಲಗಾರನೇ ಬಿಟ್ಟುಕೊಟ್ಟ ಕೃಷಿ ಭೂಮಿಯ ಸ್ವತ್ತಿನಿಂದ ಬಾಕಿ ಇರುವ ಬಾಡಿಗೆ, ಭೂಕಂದಾಯದ ಹಿಂಬಾಕಿ ವಸೂಲಿ, ನ್ಯಾಯಾಲಯದ ಬಿಕರಿ, ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಕ್ಕೆ ಪಾವತಿಸಬೇಕಾದ ಯಾವುದೇ ಕಂದಾಯ, ತೆರಿಗೆ, ಉಪಕಾರ ನಂಬಿಕೆ ದ್ರೋಹದ ಯಾವುದೇ ಹೊಣೆಗಾರಿಕೆಗೆ ಸಲ್ಲಿಸಿದ ಸೇವೆಗಾಗಿ ಸಂಬಳ, ಸರ್ಕಾರಿ ಕಂಪನಿ, ಭಾರತೀಯ ಜೀವಾ ವಿಮಾ ನಿಗಮ, ಸಹಕಾರ ಸಂಘಗಳು, ಸೌಹಾರ್ದ ಸಹಕಾರ ಸಂಘಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು ಕರ್ನಾಟಕ ಸಂಘಗಳ ನೋಂದಣೆ ಕಾಯ್ದೆ 1960 ರಡಿಯಲ್ಲಿ ನೋಂದಾಯಿತವಾಗಿರುವ ಅತೀ ಸಣ್ಣ ಹಣಕಾಸು ಸಂಸ್ಥೆಗಳು, ಚಿಟ್ ಫಂಡ್ ಕಾಯ್ದೆಯಡಿ ನೋಂದಾವಣೆಗೊಂಡ ಚಿಟ್ ಕಂಪನಿಗಳು ಇವುಗಳು ಕರ್ನಾಟಕ ಋಣ ಪರಿಹಾರ ಕಾಯ್ದೆ 2018 ರ ವ್ಯಾಪ್ತಿಗೆ ಒಳಪಡುವುದಿಲ್ಲ.

Also Read  ಮರಳು : ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಉಸ್ತುವಾರಿ ಸಚಿವರ ಸೂಚನೆ

ಈ ವಿಚಾರದಲ್ಲಿ ಮಂಗಳೂರು ಉಪವಿಭಾಗದ ವ್ಯಾಪ್ತಿಯಲ್ಲಿ ಮಂಗಳೂರು, ಮೂಡಬಿದ್ರೆ, ಬಂಟ್ವಾಳ, ಮುಲ್ಕಿ, ತಾಲೂಕುಗಳಲ್ಲಿನ ಅರ್ಹ ಸಾರ್ವಜನಿಕರು ನಿಗದಿತ ನಮೂನೆ-02 ರ ಅಗತ್ಯ ದಾಖಲಾತಿಯೊಂದಿಗೆ ಋಣ ಪರಿಹಾರ ಅಧಿಕಾರಿಯಾದ ಸಹಾಯಕ ಆಯುಕ್ತರು, ಸಹಾಯಕ ಆಯುಕ್ತರ ಕಛೇರಿ, ಮಂಗಳೂರು ಉಪವಿಭಾಗ, ಮಂಗಳೂರು ಈ ಕಚೇರಿಗೆ ಸಲ್ಲಿಸಬೇಕು. ಸಾಲಗಾರರು ಅರ್ಜಿಯೊಂದಿಗೆ ಆಧಾರಕಾರ್ಡ್, ಲೇವಾದೇವಿದಾರರು ನೀಡಿರುವ ರಶೀದಿ ಪ್ರತಿ, ಪಡಿತರ ಚೀಟಿ, ತಹಸೀಲ್ದಾರರಿಂದ ಪಡೆದ ಸಣ್ಣಹಿಡುವಳಿದಾರ ದೃಡೀಕರಣ/ಭೂ ರಹಿತ ಕೃಷಿ ಕಾರ್ಮಿಕರ ದೃಡೀಕರಣ/ ಆದಾಯ ದೃಡೀಕರಣ ಇತ್ಯಾದಿ ದಾಖಲೆಗಳೊಂದಿಗೆ ಸೆಪ್ಟೆಂಬರ್ 22 ರೊಳಗಾಗಿ ಅರ್ಜಿ ಸಲ್ಲಿಸಬೇಕು.

Also Read  'ಕೇರಳಂ' ಎಂದು ಮರುನಾಮಕರಣಕ್ಕೆ ಕೇಂದ್ರಕ್ಕೆ ಕೇರಳ ಸರ್ಕಾರ ಆಗ್ರಹ..!

ಹೆಚ್ಚಿನ ಮಾಹಿತಿಗಾಗಿ ಸಹಾಯಕ ಆಯುಕ್ತರ ಕಛೇರಿ, ಮಂಗಳೂರು ಉಪವಿಭಾಗ ದೂರವಾಣಿ ಸಂಖ್ಯೆ: 0824-2220569 ಸಂಪರ್ಕಿಸಬಹುದು ಎಂದು ಸಹಾಯಕ ಆಯುಕ್ತರು ಉಪವಿಭಾಗ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top