ವಿದ್ಯುತ್ ತಂತಿ ಸ್ಪರ್ಶಿಸಿ ಮೂವರ ಸಾವು



(ನ್ಯೂಸ್ ಕಡಬ) newskadaba.com ಹಾಸನ,ಸಪ್ಟೆಂಬರ್.11.ಚೆನ್ನರಾಯಪಟ್ಟಣ ತಾಲೂಕು ಅಗಸರಹಳ್ಳಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ.







ವಿದ್ಯುತ್ ಕಂಬಕ್ಕೆ  ಕಟ್ಟಿದ್ದ ತಂತಿ ಮೇಲೆ ಬಟ್ಟೆ ಒಣ ಹಾಕಲು ತೆರಳಿದ್ದಾಗ ಭಾಗ್ಯಮ್ಮ ಅವರಿಗೆ ವಿದ್ಯುತ್ ಸ್ಪರ್ಶಿಸಿದೆ.ಇದನ್ನು ಕಂಡು ರಕ್ಷಿಸಲು ತೆರಳಿದ್ದ ದಾಕ್ಷಾಯಿಣಿ ಮತ್ತು ದಯಾನಂದ ಅವರಿಗೂ ವಿದ್ಯುತ್ ಸ್ಪರ್ಶಿಸಿದ್ದು ಮೂವರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.ಮೃತಪಟ್ಟವರನ್ನು ಭಾಗ್ಯಮ್ಮ(55), ದಾಕ್ಷಾಯಿಣಿ (35), ದಯಾನಂದ (31) ಎಂದು ಗುರುತಿಸಲಾಗಿದೆ.ಮತ್ತೋರ್ವನ  ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಚೆನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.






 

error: Content is protected !!
Scroll to Top