ಸಾಪಿಯೆನ್ಶಿಯಾ ಪ್ರಥಮ ದರ್ಜೆ ಕಾಲೇಜು ನೆಲ್ಯಾಡಿ ➤ ಮಾಹಿತಿ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ನೆಲ್ಯಾಡಿ,ಸಪ್ಟೆಂಬರ್.11.ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಎಸ್ ಬಿ ಕಾಲೇಜು ನೆಲ್ಯಾಡಿಯಲ್ಲಿ ರ್ಯಾಗಿಂಗ್, ಮಾದಕ ವಸ್ತುಗಳ ಸೇವೆನೆ, ಲೈಂಗಿಕ ದೌರ್ಜನ್ಯ ಇವುಗಳ ತೊಂದರೆ ಹಾಗೂ ಇದಕ್ಕೆ ಕಾನೂನು ಸಲಹೆ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

Gems


ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ವಿಭಾಗದ ಡಿವೈಎಸ್‍ಪಿ ದಿನಕರ ಶೆಟ್ಟಿಯವರು ಮಾತನಾಡಿ ಅವರು ರ್ಯಾಗಿಂಗ್, ಮಾದಕ ವಸ್ತುಗಳ ಸೇವೆನೆ, ಲೈಂಗಿಕ ದೌರ್ಜನ್ಯ ಇವುಗಳ ತೊಂದರೆ ಹಾಗೂ ಇದಕ್ಕೆ ಕಾನೂನು ಸಲಹೆ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದ 2ನೇ ವಿಷಯವಾದ ಪರಸರ ಸಂರಕ್ಷಣೆಯ ಬಗ್ಗೆ ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕøತ ವಿಭಾಗದ ಪ್ರಾಧ್ಯಾಪಕರದ ಡಾ| ಶ್ರೀಶ ಕುಮಾರ್ ಮಾತನಾಡಿ ಪರಿಸರ ಸಂರಕ್ಷಣೆ ಜಲಜಾಗೃತಿ ಬಗ್ಗೆ ಯಾವ ರೀರಿಯಲ್ಲಿ ಹೆಜ್ಜೆಯನ್ನು ಇಡಬೇಕು ಎಂದರು.

Also Read  ಕಡಬ: ನಿಲ್ಲಿಸಿದ್ದ ಬೋರ್ ವೆಲ್ ಲಾರಿಯಿಂದ ಡ್ರಿಲ್ಲಿಂಗ್ ಬಿಟ್ ಕಳವು - ದೂರು ದಾಖಲು


ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕಾಲೇನಿನ ಪ್ರಾಂಶುಪಾಲರಾದ ರೆ| ಡಾ| ಫಾ| ವರ್ಗೀಸ್ ಕೈಪನಡುಕ್ಕ ಒಐಸಿ ವಹಿಸಿದ್ದರು. ವೇದಿಕೆಯಲ್ಲಿ ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒಐಸಿ, ಉಪ ಪ್ರಾಂಶುಪಾಲರಾದ ಗೀತಾ ವಿನಯ್ , ಸಂಯೋಜಕರಾದ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು. ಬೇರೆ ಬೇರೆ ಕಾಲೇಜಿನ ಹಲವು ವಿದ್ಯಾರ್ಥಿಗಳು ಕಾರ್ಯಕ್ರಮದ ಫಲಾನುಭವಿಗಳಾದರು. ಕಾರ್ಯಕ್ರಮದಲ್ಲಿ ವೀದಿಶಾ ವಂದಿಸಿದರು. ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು.ಜಿಲ್‍ಶಿತಾ ಮತ್ತು ಬಳಗ ಪ್ರಾರ್ಥನೆಗೈದರು.

error: Content is protected !!
Scroll to Top