ಅನುಭವಗಳಿಂದ ಕಲಿಯುವ ಪಾಠವು ನೈಜ ಶಿಕ್ಷಣ ➤ ಶ್ರೀ ಕೃಷ್ಣ ಮೋಹನ್

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.22.ಜೀವನದಲ್ಲಿ ಸ್ಪಷ್ಟ ಗುರಿ ಇಟ್ಟುಕೊಂಡು ಸವಾಲುಗಳನ್ನು ಮೆಟ್ಟಿಲಾಗಿಸುವ ಕಲೆಯನ್ನು ಮೈಗೂಡಿಸಿಕೊಂಡಲ್ಲಿ ಯಶಸ್ಸು ಸಾಧ್ಯ. ಅನುಭವಗಳಿಂದ ಕಲಿಯುವ ಪಾಠವು ನೈಜ ಶಿಕ್ಷಣವಾಗಿರುತ್ತದೆ ಎಂದು ಜೇಸಿಐ ರಾಷ್ಟ್ರೀಯ ತರಬೇತುದಾರರಾದ ಶ್ರೀಕೃಷ್ಣ ಮೋಹನ್ ಹೇಳಿದರು.

ಅವರು ಸರಸ್ವತೀ ಪದವಿಪೂರ್ವ ವಿದ್ಯಾಲಯ ಕಡಬ ಇಲ್ಲಿ ಸಿಸ್ಕೋ ಸಂಭ್ರಮ ತಂಡ ಬೆಂಗಳೂರು ಹಾಗೂ ರಾಮಕುಂಜೇಶ್ವರ ಪದವಿ ವಿದ್ಯಾಲಯ ಇದರ ಸಹಯೋಗದೊಂದಿಗೆ ವಾಣಿಜ್ಯ ವಿದ್ಯಾರ್ಥಿಗಳಿಗೆ ಆಯೋಜಿಸಲ್ಪಟ್ಟ ಮಾಹಿತಿ ಕಾರ್ಯಗಾರ “ಉತ್ಕರ್ಷ-2019” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಯಾವುದೇ ವೃತ್ತಿಯನ್ನು ಆಯ್ಕೇ ಮಾಡಿಕೊಂಡರು ಸೂಕ್ತ ಯೋಜನೆ ಮಾಡಿ, ಆ ವಿಷಯಕ್ಕೆ ಸಂಬಂಧಿಸಿದ ಜ್ಞಾನವನ್ನು ನಿರಂತರ ಹೆಚ್ಚಿಸಿಕೊಳ್ಳುತ್ತಿರಬೇಕು ಯಾವುದೇ ಸಂಧರ್ಭದಲ್ಲೂ ಗುರಿಯಿಂದ ವಿಚಲಿತರಾಗಬಾರದು ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿ ಶ್ರೀ ಕೃಷ್ಣ ಶೆಟ್ಟಿ ಕಡಬ, ಸಂಸ್ಥೆಯ ಸಂಚಾಲಕರಾದ ಶ್ರೀ ವೆಂಕಟ್ರಮಣ ರಾವ್ ಮಂಕುಡೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಶ್ರೀ ರವಿರಾಜ್ ಶೆಟ್ಟಿ ಕಡಬ, ವಿದ್ಯಾಲಯದಲ್ಲಿ ಜೀವನ ಶಿಕ್ಷಣದ ಜೊತೆ ಜೊತೆಗೆ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ತಯಾರಿಗೊಳಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ ಎಂದರು.ಬೆಂಗಳೂರಿನ ಕಂಪೆನಿ ಸೆಕ್ರಟರಿ ಶ್ರೀ ರಮೇಶ್ ಭಟ್, ಭರತ್ ಭಟ್.

Also Read  ಮನೆಮಂದಿಗೆಲ್ಲ ಕೊರೊನಾ ಪಾಸಿಟಿವ್ ➤ ಕಡಬ,ಪುತ್ತೂರು ಉಭಯ ತಾಲೂಕಿನಲ್ಲಿ 11 ಮಂದಿಗೆ ಸೋಂಕು

ಹಾಗೂ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸಂಕೀರ್ತ್ ಹೆಬ್ಬಾರ್, ಸಂಸ್ಥೆಯ ಆಡಳಿತ ಮಂಡಳಿಯ ಕೋಶಾಧಿಕಾರಿಗಳಾದ ಶ್ರೀ ಲಿಂಗಪ್ಪ ಜೆ, ಸದಸ್ಯರುಗಳಾದ ಶ್ರೀ ಶಿವಪ್ರಸಾದ್ ಮೈಲೇರಿ, ಶ್ರೀ ಎ.ಸೀತರಾಮ ಗೌಡ, ರಾಮಕುಂಜೇಶ್ವರ ಮಹಾವಿದ್ಯಾಲಯದ ವಾಣಿಜ್ಯ ಉಪನ್ಯಾಸಕರಾದ ಶ್ರೀ ಚೇತನ್ ಎಂ ಉಪಸ್ಥಿತರಿದ್ದರು.ಕಾರ್ಯಗಾರದಲ್ಲಿ ಸರಸ್ವತೀ ವಿದ್ಯಾಲಯ ಪ್ರೌಢಶಾಲೆ, ಸರಸ್ವತೀ ಪದವಿಪೂರ್ವ ವಿದ್ಯಾಲಯ ಕಡಬ, ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯ ರಾಮಕುಂಜ, ಶ್ರೀ ದುರ್ಗಾಂಬ ಪದವಿಪೂರ್ವ ವಿದ್ಯಾಲಯ ಆಲಂಕಾರು ಮತ್ತುಶ್ರೀ ಕುಕ್ಕೆ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯದಿಂದ ಒಟ್ಟು 120 ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಾಲೇಜಿನ ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಕ್ರಪಾಣಿ ವಂದಿಸಿ, ವಾಣಿಜ್ಯ ಉಪನ್ಯಾಸಕ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

Also Read  CPIM ಹಿರಿಯ ಸದಸ್ಯ ಕಾಂ.ರಾಘವ ಅಂಚನ್ ಮೃತ್ಯು

error: Content is protected !!
Scroll to Top