(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಜುಲೈ.31.
ಬ್ಲ್ಯಾಕ್ ಟೀಯ ಉಪಯುಕ್ತತೆಗಳು: ದಿನನಿತ್ಯದ ಆರೋಗ್ಯಯುತ ಆಹಾರದೊಂದಿಗೆ ಬ್ಲ್ಯಾಕ್ ಟೀ ಯನ್ನು ಕುಡಿಯುವುದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.ಈ ಟೀಯಲ್ಲಿರುವ ಆಕ್ಸಿಡೆಶನ್ ನ ಅಧಿಕ ಪ್ರಮಾಣ ಓದನು ಫ್ಲೇವರ್ ಅನ್ನು ಹೆಚ್ಚಿಸುತ್ತದೆ. ಇತರ ಟೀಗಳಿಗೆ ಹೋಲಿಸಿದರೆ ಬ್ಲ್ಯಾಕ್ ಟೀಯಲ್ಲಿರುವ ಫ್ಲೇವರ್ ಹೆಚ್ಚು ಸಮಯ ಉಳಿಯುತ್ತದೆ. ಕೆಮೆಲಿಯಾ ಸೈನೆನ್ಸಿಸ್ ಎಂಬ ಸಸ್ಯದಿಂದ ಹುಟ್ಟಿಕೊಳ್ಳುವ ಈ ಕಪ್ಪು ಚಹಾ ಹಸಿರು ಬಿಳಿ ಪ್ರಭೇದಗಳನ್ನು ಕೂಡ ಹೊಂದಿದೆ. ಇದು ಸ್ವಲ್ಪ ಕೇಸರಿ ಮಿಶ್ರಿತ ಕಪ್ಪು ಬಣ್ಣವನ್ನು ಹೊಂದಿರುತ್ತದೆ. ಚೀನೀಯರು ಇದನು ರೆಡ್ ಟೀ ಎಂದು ಕೂಡ ಕರೆಯುತ್ತಾರೆ. ಇದರಲ್ಲಿರುವ ಕೆಫೈನ್ ಇದರ ಮುಖ್ಯ ಗಮನಾರ್ಹ ಅಂಶ. ಒಂದು ಲೋಟ ಕಾಫಿಯಲ್ಲಿರುವ ಕೆಫೈನ್ ಗಿಂತ ಚಹಾದಲ್ಲಿ ಅರ್ಧದಷ್ಟು ಕಡಿಮೆ ಇರುತ್ತದೆ.
ದೇಹಾರೋಗ್ಯದಲ್ಲಿ ಬ್ಲ್ಯಾಕ್ ಟೀಯ ಪಾತ್ರ
ಕ್ಯಾನ್ಸರ್ ನಿಂದ ಪಾರು : ಟೀಯಲ್ಲಿ ಕಂಡು ಬರುವ ಟಿ ಎಫ್ 2 ಎಂಬ ಸಂಯುಕ್ತವು ಕ್ಯಾನ್ಸರ್ ಕಣಗಳನ್ನು ಕೊಳ್ಳುತ್ತದೆ. ಜೊತೆಗೆ ಸಿಗರೇಟ್ ಮತ್ತು ತಂಬಾಕನ್ನು ಬಳಸುವವರಿಗೆ ಸಂಭವಿಸುವ ಬಾಯಿ ಕ್ಯಾನ್ಸರ್ ಅನ್ನು ಕೂಡ ತಡೆಗಟ್ಟುತ್ತದೆ. ಬ್ಲ್ಯಾಕ್ ಟೀಯಲ್ಲಿ ಕಂಡುಬರುವ ಪೋಲಿಪೆನಾಲ್ ಎಂಬ ಉತ್ಕರ್ಷಣವು ಕೊಲೊರೆಕ್ಟಲ್, ಪ್ರಾಸ್ಟೇಟ್, ಅಂಡಾಶಯ, ಶ್ವಾಸಕೋಶ ಮತ್ತು ಮೂತ್ರಕೋಶದ ಕ್ಯಾನ್ಸರ್ ಬರದಂತೆ ತಡೆಯುತ್ತದೆ.ಬ್ಲ್ಯಾಕ್ ಟೀ ಸ್ತನ ಮತ್ತು ಕರುಳು ಕ್ಯಾನ್ಸರ್ ಅನ್ನು ಕೂಡ ತಡೆಯಬಲ್ಲದು. ಬ್ಲ್ಯಾಕ್ ಟೀ ಕುಡಿಯುವದರಿಂದ ಗಡ್ಡೆಗಳಾಗುವುದನ್ನು ತಡೆಯಬಹುದು.
ಹೃದಯದ ಕಾಳಜಿ : ಬ್ಲ್ಯಾಕ್ ಟೀಯಲ್ಲಿರುವ ಫ್ಲೇವನಾಯಿಡ್ಸ್ ಎಂಬ ಉತ್ಕರ್ಷಣ ಅಂಶ ಕೊಲೆಸ್ಟ್ರಾಲ್ ತಡೆಯಲು ಸಹಾಯಕ. ರಕ್ತ ಪ್ರವಾಹದಿಂದ ಅಪದಮನಿಗಳಿಗೆ ಹಾನಿಯಾಗುವುದನ್ನು ತಡೆದು,ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತನಾಳ ಕುಗ್ಗಿಸುವ ಅಥವಾ ಹಿಗ್ಗಿಸುವ ಎಂಡೊಥಿಲಿಯಲ್ ಸರಿಯಾಗಿ ಕೆಲಸ ಮಾಡದೆ ಸಂಭವಿಸುವ ಪರಿಧಮನಿ ಕಾಯಿಲೆಯನ್ನು ಕಪ್ಪು ಚಹಾ ಸೇವಿಸುವುದರಿಂದ ತಡೆಯಬಹುದು. ಇದರಲ್ಲಿರುವ ಫ಼್ಲೆಯನೋಯಿಡ್ಸ್ ಅಂಶ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.ಮ್ಯಾಂಗನೀಸ್ ಮತ್ತು ಪೋಲಿಪೆನಾಲಗಳು ಸ್ನಾಯುಗಳನ್ನು ಆರೋಗ್ಯಯುತವಾಗಿ ಇರಿಸುವುದರ ಮೂಲಕ ಹೃದಯ ರೋಗಗಳು ಬರದಂತೆ ತಡೆಯುತ್ತವೆ.
ಮೂಳೆ ಮತ್ತು ಮೆದುಳಿನ ಆರೋಗ್ಯ : ಬ್ಲ್ಯಾಕ್ ಟೀಯಲ್ಲಿರುವ ಅಮೈನೊ ಆಕ್ಸೈಡ್ ಏಕಾಗ್ರತೆ ಹೆಚ್ಚಿಸಲು ಸಹಾಯಕವಾಗುತ್ತದೆ. ಪ್ರತಿದಿನ ನಾಲ್ಕು ಲೋಟದಂತೆ ಒಂದು ತಿಂಗಳು ಬ್ಲ್ಯಾಕ್ ಟೀ ಸೇವಿಸಿದರೆ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಕಡಿಮೆ ಪ್ರಮಾಣದ ಕೆಫಿನ್ ಅಂಶ ಮೆದುಳಿಗೆ ರಕ್ತ ಸಂಚಲನ ಸರಿಯಾಗಿ ಆಗಲು ಸಹಾಯಕ. ಕೆಫೈನ್ ನೆನಪಿನ ಶಕ್ತಿ ಹೆಚ್ಚಿಸಿ,ಮಾನಸಿಕ ತಳಮಳ ಕಡಿಮೆ ಮಾಡುತ್ತದೆ.
ಬಾಯಿ ಅರೋಗ್ಯ ಕಾಪಾಡುತ್ತದೆ : ಎರಡು ಲೋಟ ಬ್ಲ್ಯಾಕ್ ಟೀ ಸೇವನೆ ಬಾಯಿಯ ಆರೋಗ್ಯಕ್ಕೆ ಬೇಕಾಗುವ ಫ್ಲೋರೈಡ್ ಅನ್ನು ಒದಗಿಸುತ್ತದೆ. ಕ್ಯಾತೆಚಿನ್ ಅಂಶ ಓರಾಲ್ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ದಂತ ಕ್ಷಯವನ್ನು ನೀಡುವ ಬ್ಯಾಕ್ಟೀರಿಯವನ್ನು ಬ್ಲ್ಯಾಕ್ ಟೀಯಲ್ಲಿರುವ ಟೆನಿನ್ ಮತ್ತು ಪೊಲಿಪೆನಾಲ್ಸ್ ತಡೆಯುತ್ತದೆ. ಜೊತೆಗೆ ಇದರಲ್ಲಿರುವ ಫ್ಲೋರೈಡ್ ಅಂಶ ಬಾಯಿಯ ದುರ್ಗಂಧ ಹೋಗಲಾಡಿಸುತ್ತದೆ.
ಬೊಜ್ಜು ಕರಗಿಸುವಿಕೆ : ಹೃದಯ ರೋಗಗಳನ್ನು ನೀಡಬಹುದಾದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆಯುತ್ತದೆ. ಅಪಧಮನಿಗಳ ಕಾರ್ಯವನ್ನು ಕೂಡ ಸುಲಭವಾಗಿಸುತ್ತದೆ.
ಜೀರ್ಣಕ್ರಿಯೆಗೆ ಸಹಾಯಕ : ಗ್ಯಾಸ್ ಮುಂತಾದ ಸಣ್ಣ ಪುಟ್ಟ ತೊಂದರೆಗಳನ್ನು ಕೂಡ ನಿವಾರಿಸುವ ಅಂಶ ಇದರಲ್ಲಿದೆ. ಹೊಟ್ಟೆ ತೊಳೆಸುವಂತೆ ಮಾಡುವ ಕರುಳಿನ ಉರಿಯೂತವನ್ನು ಕೂಡ ಬ್ಲ್ಯಾಕ್ ಟೀಯಲ್ಲಿರುವ ಪೋಲಿಪೆನಾಲ್ಸ್ ಅಂಶದಿಂದ ಕಡಿಮೆಮಾಡಿಕೊಳ್ಳಬಹುದು. ಬ್ಲ್ಯಾಕ್ ಟೀಯಲ್ಲಿರುವ ಟೆನಿನ್ ಜೀರ್ಣಕ್ರಿಯೆಗೆ ಸಹಾಯಕ.