ಕಾಫಿಡೇ ಮಾಲಕ ಸಿದ್ಧಾರ್ಥ್ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ



(ನ್ಯೂಸ್ ಕಡಬ) newskadaba.com ಮಂಗಳೂರು, ಜು.31. ಸೋಮವಾರ ರಾತ್ರಿ ಮಂಗಳೂರಿನ ಜಪ್ಪಿನಮೊಗರು ನೇತ್ರಾವತಿ ಸೇತುವೆ ಬಳಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಕೆಫೆ ಕಾಫಿಡೇ ಮಾಲಕ ಸಿದ್ದಾರ್ಥ್‌ ಅವರ ಮೃತದೇಹ ಬುಧವಾರ ಮುಂಜಾನೆ ಪತ್ತೆಯಾಗಿದೆ.





ಸುಮಾರು 36 ಗಂಟೆಗಳ ತೀವ್ರ ಶೋಧದ ನಂತರ ಹೊಯಿಗೆ ಬಜಾರ್‌ನ ಅಳಿವೆ ಬಾಗಿಲು ಬಳಿ ಬುಧವಾರ ಬೆಳಗ್ಗೆ 6.30ಕ್ಕೆ ಸಿದ್ದಾರ್ಥ್‌ ಅವರ ದೇಹ ಪತ್ತೆಯಾಗಿದೆ. ಸ್ಥಳೀಯ ಮೀನುಗಾರರು ಬೆಳಗ್ಗೆ ಮೀನುಗಾರಿಕೆಗೆಂದು ತೆರಳಿದ್ದಾಗ ನದಿ ದಡದಲ್ಲಿ ಮೃತದೇಹ ಕಂಡುಬಂದಿದೆ.






ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ರವರ ಅಳಿಯನಾದ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಪ್ರತಿಷ್ಠಿತ ಉದ್ಯಮಿ ಸಿದ್ಧಾರ್ಥ್ ಸೋಮವಾರದಂದು ಮಂಗಳೂರಿಗೆ ಆಗಮಿಸಿ ರಾತ್ರಿ ವೇಳೆ ನೇತ್ರಾವತಿ ಸೇತುವೆಯ ಬಳಿ ನಿಗೂಢವಾಗಿ ಕಣ್ಮರೆಯಾಗಿದ್ದರು. ಸಾಲದ ಸುಳಿಯಲ್ಲಿ ಸಿಲುಕಿದ್ದ ಅವರ ನಾಪತ್ತೆಯ ಹಿಂದೆ ಹಲವು ಸಂಶಯಗಳು ವ್ಯಕ್ತವಾಗಿತ್ತು. ಆದರೆ ಇದೀಗ ಮೃತದೇಹ ಪತ್ತೆಯಾಗುವುದರೊಂದಿಗೆ ನಾಪತ್ತೆ ಪ್ರಕರಣಕ್ಕೆ ತೆರೆ ಬಿದ್ದಿದೆ.

error: Content is protected !!
Scroll to Top