ಬಂಟ್ವಾಳ ➤ ಮಾರುಕಟ್ಟೆ ದರ ನಿಗದಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.24.ದ.ಕ ಜಿಲ್ಲೆ ಬಂಟ್ವಾಳ ನೋಂದಾಣಿ ಉಪಜಿಲ್ಲೆಯ ವ್ಯಾಪ್ತಿಯೊಳಗಿನ ಹೊಸ ಯೋಜನೆಯಾದ Crystal Plaza ಎಂಬ ವಾಣಿಜ್ಯ ಸಂಕೀರ್ಣದಲ್ಲಿರುವ ವಾಣಿಜ್ಯ ಕೋಣೆಗಳಿಗೆ ಚ.ಮೀ. ಗೆ ರೂ.40,000/- ದಂತೆ ನಿಗದಿಗೊಳಿಸಲಾಗಿದೆ.

ಹಾಗೂ ವಾಸ್ತವ್ಯ ಪ್ಲ್ಯಾಟ್‍ಗಳಿಗೆ ಚ.ಮೀ. ಗೆ ರೂ. 30,000/- ಮಾರುಕಟ್ಟೆ ದರಗಳನ್ನು ನಿಗದಿಪಡಿಸಲಾಗಿದೆ. ಪರಿಷ್ಕೃತ ದರಪಟ್ಟಿ ಕರಡು ಪ್ರತಿಯನ್ನು ಸಾರ್ವಜನಿಕರ ಅವಗಾಹನೆಗೆ ತರಲು ಬಂಟ್ವಾಳ ವ್ಯಾಪ್ತಿಯ ಉಪನೋಂದಣಿ ಕಚೇರಿಗಳ ಸೂಚನಾ ಫಲಕಗಳಲ್ಲಿ ಜುಲೈ 23 ರಂದು ಪ್ರಕಟಿಸಲಾಗಿದೆ. ಸಾರ್ವಜನಿಕರು ಪ್ರಕಟಗೊಂಡ ದಿನಾಂಕದಿಂದ 15 ದಿನಗಳ ಒಳಗೆ ಸದಸ್ಯ ಕಾರ್ಯದರ್ಶಿಗಳು, ಮಾರುಕಟ್ಟೆ ಮಾಲ್ಯಮಾಪನ ಉಪಸಮಿತಿ ಬಂಟ್ವಾಳ, ಹಾಗೂ ಉಪನೋಂದಣಾಧಿಕಾರಿಗಳು ಬಂಟ್ವಾಳ ಇವರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

Also Read  ಎಚ್ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

error: Content is protected !!
Scroll to Top