ರಾಷ್ಟ್ರೀಯ ಶಿಕ್ಷಣ ಕರಡು ನೀತಿ-2019 ➤ ಸಂವಾದ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.23.ರಾಷ್ಟ್ರೀಯ ಶಿಕ್ಷಣ ನೀತಿಯು ಖಾಸಗೀಕರಣ, ಜಾಗತೀಕರಣ ಬಂಡವಾಳಶಾಹಿಗಳ ಪರವಾಗಿದೆ ಇದು ರಚನಾತ್ಮಕ ಕ್ರಿಯೆ ಮಾತ್ರ ಎಂದು ಶಿಕ್ಷಣ ಚಿಂತಕ, ಮಂಗಳೂರು ವಿವಿಯ ನಿವೃತ್ತ ಆಂಗ್ಲ ಬಾಷೆ ಪ್ರಾದ್ಯಾಪಕ ಪ್ರೊ. ಸುಕುಮಾರ ಗೌಡ ಆರೊಪಿಸಿದರು.

ಇಂದು ಮಂಗಳೂರು ವಿಶ್ವವಿದ್ಯಾನಿಲಯ, ಮತ್ತು ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನಗಳ ಕೇಂದ್ರ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ”ರಾಷ್ಟ್ರೀಯ ಶಿಕ್ಷಣ ಕರಡು ನೀತಿ”ಯ ಉನ್ನತ ಶಿಕ್ಷಣದ ಕಾಳಜಿಗಳು ಮತ್ತು ಸವಾಲುಗಳ ಬಗ್ಗೆ ಮುಕ್ತ ಸಂವಾದ ಕಾರ್ಯಕ್ರಮವು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಈ ಶಿಕ್ಷಣ ನೀತಿಯು ನಮಗೆ ಹೊಸದಲ್ಲ ಈ ಹಿಂದೆ 1948 ರಲ್ಲಿ ವಿಶ್ವವಿದ್ಯಾನಿಲಯ ಶಿಕ್ಷಣ ಆಯೋಗದ ವರದಿ, ಮೊದಲಿಯಾರ್ ಶಿಕ್ಷಣ ನೀತಿ ಆಯೋಗ ಹಾಗೂ ಕೋಟಾರೆ ಶಿಕ್ಷಣ ನೀತಿ ಆಯೋಗ ವರದಿಗಳು ಬಂದಿದ್ದು, ಅವುಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯೂ ಒಂದಾಗಿದೆ.

ಈ ಎಲ್ಲಾ ಶಿಕ್ಷಣ ನೀತಿಗಳು ಒಂದಲ್ಲಾ ಒಂದು ರೀತಿಯಲ್ಲಿ ಖಾಸಗೀಕರಣ, ಜಾಗತೀಕರಣ ಬಂಡವಾಳಶಾಹಿಗಳಿಗೆ ಪೂರಕವಾಗಿದೆ ಎಂದರು.ಮುಖ್ಯ ಅತಿಥಿಗಳಾದ ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನಗಳ ಕೇಂದ್ರ, ಬೆಂಗಳೂರು, ಇಲ್ಲಿನ ಉಪನಿರ್ದೇಶಕರಾದ ಗೌರೀಶ್ ಜೋಷಿ ಮಾತನಾಡಿ, ಮುಂದಿನ 25 ವರ್ಷಗಳ ಭವಿಷ್ಯದಲ್ಲಿ ಈ ಶಿಕ್ಷಣ ನೀತಿಯು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮ ಮಾರ್ಗದರ್ಶಿ ಆಗಲಿದೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಅಂತರವನ್ನು ಕಡಿಮೆಗೊಳಿಸಿ ಉತ್ತಮ ಸಂಬಂಧವನ್ನು ವೃದ್ಧಿಸುತ್ತದೆ ಹಾಗೂ ವಿದ್ಯಾರ್ಥಿಗಳ ಮಾನಸಿಕ ಮತ್ತು ಬೌದ್ಧಿಕ ಮಟ್ಟದಲ್ಲಿ ಹೊಂದಾಣಿಕೆಯ ಶಿಕ್ಷಣವನ್ನು ಈ ನೀತಿಯಿಂದ ಪ್ರಮುಖವಾಗಿ ಪಡೆಯಬಹುದು ಎಂದು ಸಮರ್ಥಿತಿಸಿದರು.ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ, ಕಾಲೇಜು ಅಭಿವೃದ್ದಿ ಮಂಡಳಿ ನಿರ್ದೇಶಕ ಪ್ರೊ. ಪಿ.ಎಲ್. ಧರ್ಮ ಹಾಗೂ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group