ಕಡಬ: ಪಿಕಪ್ ವಾಹನದಲ್ಲಿ ಅಕ್ರಮ ದನ ಸಾಗಾಟ ➤ ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಸಂಘ ಪರಿವಾರದ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com ಕಡಬ, ಜೂ.22. ಪಿಕಪ್ ವಾಹನವೊಂದರಲ್ಲಿ ದನ ಸಾಗಾಟುತ್ತಿದ್ದುದನ್ನು ಪತ್ತೆ ಹಚ್ಚಿರುವ ಸಂಘ ಪರಿವಾರದ ಕಾರ್ಯಕರ್ತರು ಕಡಬ ಪೊಲೀಸರಿಗೆ ಒಪ್ಪಿಸಿದ ಘಟನೆ ಶನಿವಾರ ಮುಂಜಾನೆ ಕೋಡಿಂಬಾಳದಲ್ಲಿ ನಡೆದಿದೆ.

ಕಡಬದ ವಿದ್ಯಾನಗರ ನಿವಾಸಿ ಶೇಖರ್ ಎಂಬವರಿಗೆ ಸೇರಿದ ಗಜಕೇಸರಿ ಹೆಸರಿನ ಪಿಕಪ್ ವಾಹನದಲ್ಲಿ ದನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಎಂಬ ಮಾಹಿಯಿಯ ಮೇರೆಗೆ ತಡೆಹಿಡಿದ ಸಂಘ ಪರಿವಾರದ ಕಾರ್ಯಕರ್ತರು ಪಿಕಪ್ ವಾಹನ, ದನ ಸಹಿತ ಚಾಲಕ ಶೇಖರ್ ಹಾಗೂ ತಂಗಚ್ಚನ್ ಎಂಬವರನ್ನು ಕಡಬ ಪೊಲೀಸರಿಗೆ ಒಪ್ಪಿಸಿದ್ದಾರೆ. ತಡೆಹಿಡಿದು ಪ್ರಶ್ನಿಸುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Also Read  ಕಡಬ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ ➤ ಓರ್ವನ ಬಂಧನ, 4 ಕರು, 40 ಕೆಜಿ ದನದ ಮಾಂಸ ವಶಕ್ಕೆ

error: Content is protected !!
Scroll to Top