ಮೊಸಳೆ ದಾಳಿಗೆ ತುತ್ತಾದ ರೈತ ► ಸ್ಥಳಿಯರ ನೆರವಿನಿಂದ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಬಿಜಾಪುರ, ಆ.07. ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕಮಲದಿನ್ನಿ ಗ್ರಾಮದಲ್ಲಿ ಮೊಸಳೆ ದಾಳಿಗೆ ರೈತರೋರ್ವರು ಗಂಭೀರವಾಗಿ ಗಾಯಗೊಂಡು ಸ್ಥಳೀಯರ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸೋಮವಾರ ನಡೆದಿದೆ.

ಕಮಲದಿನ್ನಿ ಗ್ರಾಮದ ಬಸಪ್ಪ ಸಿದ್ರಾಮಪ್ಪ ಮರಿಗೌಡರ(೪೮) ಮೊಸಳೆ ದಾಳಿಗೆ ತುತ್ತಾಗಿ ಗಾಯಗೊಂಡಿರುವ ರೈತ. ಸೋಮವಾರ ಬೆಳಿಗ್ಗೆ ಎತ್ತುಗಳಿಗೆ ಮೈ ತೊಳೆಯಲು ನದಿಗೆ ಇಳಿದಿದ್ದ ವೇಳೆ ಬಸಪ್ಪನ ಮೇಲೆ ಮೊಸಳೆ ದಾಳಿ ಮಾಡಿದೆ. ದಾಳಿಯಿಂದಾಗಿ ಬಸಪ್ಪನ ಎಡಗೈ, ಕಾಲಿಗೆ ಗಂಭೀರವಾದ ಗಾಯಗಳಾಗಿದ್ದು ಮುದ್ದೇಬಿಹಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗಿದೆ.

Scroll to Top