ಕಡಬ: ಸುಸಜ್ಜಿತ ಇಲೆಕ್ಟ್ರಾನಿಕ್ ಮಳಿಗೆ ‘ನ್ಯೂ ಅಶ್ವಿನಿ ಟ್ರೇಡರ್ಸ್’ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಮೇ.31. ಸುಮಾರು ಎರಡು ದಶಕಗಳಿಂದ ಉಪ್ಪಿನಂಗಡಿಯಲ್ಲಿ ಇಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಗ್ರಾಹಕರ ಜನಮನ್ನಣೆಯನ್ನು ಗಳಿಸಿ ತೃಪ್ತಿದಾಯಕ ಸೇವೆಯನ್ನು ನೀಡುತ್ತಾ ಬಂದಿರುವ ‘ನ್ಯೂ ಅಶ್ವಿನ್ ಟ್ರೇಡರ್ಸ್’ ಸಂಸ್ಥೆಯ ನೂತನ ಸುಸಜ್ಜಿತ ಎಲೆಕ್ಟ್ರಾನಿಕ್ ಮಳಿಗೆಯು ಕಡಬದ ಅನುಗ್ರಹ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಶುಕ್ರವಾರದಂದು ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಉಪ್ಪಿನಂಗಡಿಯ ಅಶ್ವಿನಿ ಹೋಮ್ ಅಪ್ಲಯನ್ಸ್ ಮಾಲಕರಾದ ಶ್ರೀಮತಿ ಮತ್ತು ಶ್ರೀ ಪ್ರಕಾಶ್ ಬಿ. ದ್ವೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ತಮ್ಮಯ್ಯ ಗೌಡ ರಿಬ್ಬನ್ ಕತ್ತರಿಸಿ ನೂತನ ಸಂಸ್ಥೆಗೆ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಕಡಬ ಸೈಂಟ್ ಜೋಕಿಮ್ಸ್ ಚರ್ಚ್‌ನ ಧರ್ಮಗುರುಗಳಾದ ರೆ| ಫಾ| ರೊನಾಲ್ಡ್ ಲೋಬೊ, ಕಡಬ ಟೌನ್ ಜುಮಾ ಮಸೀದಿಯ ಖತೀಬರಾದ ಅಲ್ ಹಾಜ್ ಪಿ.ಎಂ. ಇಬ್ರಾಹಿಂ ದಾರಿಮಿ ಭಾಗವಹಿಸಿ ಶುಭಹಾರೈಸಿದರು. ಸಂಸ್ಥೆಯ ಮಾಲಕರಾದ ಗಣೇಶ್ ಬಿ. ಅತಿಥಿಗಳನ್ನು ಸ್ವಾಗತಿಸಿದರು.

Also Read  ಮಂಗಳೂರು: ಅಯ್ಯಪ್ಪಸ್ವಾಮಿ ವೃತಧಾರಿ ಬಾಲಕನ ಮೇಲೆ ಹಲ್ಲೆ..!

ನೂತನ ಮಳಿಗೆಯಲ್ಲಿ ಶುಭಾರಂಭದ ಪ್ರಯುಕ್ತ ಎಲ್ಲಾ ವಿಧದ ಗೃಹೋಪಯೋಗಿ ವಸ್ತುಗಳು, ಇಲೆಕ್ಟ್ರಾನಿಕ್ ವಸ್ತುಗಳು, ಸೋಲಾರ್, ಇನ್ವರ್ಟರ್ ಗಳನ್ನು ವಿಶೇಷ ದರ ಕಡಿತ ಮಾರಾಟ ಮಾಡಲಾಗುವುದು ಎಂದು ಸಂಸ್ಥೆಯ ಮಾಲಕರಾದ ಗಣೇಶ್ ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448623558 ಅಥವಾ 9036964559 ಸಂಖ್ಯೆಯನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

error: Content is protected !!
Scroll to Top