(ನ್ಯೂಸ್ ಕಡಬ) newskadaba.com ಮಾಣಿ, ಮೇ.25. ನೇತ್ರಾವತಿ ನದಿಗೆ ಇಳಿದಿದ್ದ ಮೂವರ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ಶನಿವಾರ ಸಂಜೆ ಮಾಣಿ ಸಮೀಪದ ಸೂರಿಕುಮೇರು ಎಂಬಲ್ಲಿ ಸಂಭವಿಸಿದೆ.
ಮೖತ ಬಾಲಕರನ್ನು ಕೇರಳ ರಾಜ್ಯದ ಕುಂಬ್ಳೆ ನಿವಾಸಿಗಳಾದ ಮನೀಷ್ ಮತ್ತು ಅಜಿತ್ ಎಂದು ಗುರುತಿಸಲಾಗಿದೆ. ಸೂರಿಕುಮೇರು ಸಮೀಪದ ಬರಿಮಾರು ನಿವಾಸಿ ಸಂಜೀವ ಬೋವಿ ಎಂಬವರ ಮನೆಗೆ ಮದುವೆ ಕಾರ್ಯಕ್ರಮಕ್ಕೆ ಕುಂಬ್ಳೆಯಿಂದ ಬಂದಿದ್ದ ಸಂಬಂಧಿಕರ ಏಳು ಮಂದಿ ಮಕ್ಕಳು ಇಲ್ಲಿನ ನೇತ್ರಾವತಿ ನದಿಗೆ ಸ್ನಾನಕ್ಕೆ ತೆರಳಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಮೂವರು ಮಕ್ಕಳು ಆಯತಪ್ಪಿ ಮುಳುಗಿದ್ದು, ಅದಾಗಲೇ ಅವರನ್ನು ಮೇಲೆತ್ತಲಾಯಿತಾದರೂ, ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾರೆ. ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
Also Read ಕಡಬ: ಅಕ್ಷರದಾಸೋಹ ಸಿಬ್ಬಂದಿಗಳಿಗೆ ಪ್ರೋತ್ಸಾಹ ಧನ ನೀಡುವಂತೆ ಎಸ್ಡಿಪಿಐ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ