ಮಂಗಳೂರು: ವಿಮಾನ ದುರಂತಕ್ಕೆ ಸಂದಿತು 9 ವರುಷ ➤ ಜಗತ್ತನ್ನೇ ಬೆಚ್ಚಿ ಬೀಳಿಸಿದ ಕರಾವಳಿಯ ಭೀಕರ ದುರಂತ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.22. ಅಂತರ್ರಾಷ್ಟ್ರೀಯ ವಿಮಾನವೊಂದು ಪೈಲಟ್‌ ನ ಅಚಾತುರ್ಯದಿಂದಾಗಿ ನೆಲಕ್ಕಪ್ಪಲಿಸಿ 159 ಮಂದಿ ಸಜೀವ ದಹನವಾಗುವುದರೊಂದಿಗೆ ಜಗತ್ತನ್ನೇ ಬೆಚ್ಚಿಬೀಳಿಸಿದ ಆ ಘೋರ ದುರಂತಕ್ಕೆ ಇಂದಿಗೆ 9 ವರ್ಷ ತುಂಬಿದೆ.

2010 ಮೇ 22ನೇ ತಾರೀಕು ಮುಂಜಾನೆ 6:14 ರ ಸಮಯ. ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನೇನು ಲ್ಯಾಂಡ್ ಆಗಬೇಕು ಎನ್ನುವಷ್ಟರಲ್ಲಿ ಪೈಲಟ್ ನ ಅಚಾತುರ್ಯದಿಂದಾಗಿ ಕ್ಷಣಾರ್ಧದಲ್ಲಿ ರನ್ ವೇಗೆ ಅಪ್ಪಳಿಸಿ 8 ಮಂದಿ ಸಿಬ್ಬಂದಿಗಳ ಸಹಿತ 159 ಜೀವಗಳನ್ನು ಬಲಿತೆಗೆದುಕೊಂಡಿತ್ತು. ಕರಾವಳಿಯ ಇತಿಹಾಸದಲ್ಲಿ ನಡೆದ ಆ ಘೋರ ದುರಂತದ ನೆನಪು ಇನ್ನೂ ಮಾಸಿಲ್ಲ. ದುಬೈನಿಂದ ಹಲವಾರು ಕನಸುಗಳನ್ನು ಹೊತ್ತುಕೊಂಡು ತವರಿಗೆ ಮರಳುತ್ತಿದ್ದವರ ಕನಸುಗಳು ಜೀವದ ಜೊತೆ ಎಲ್ಲರೂ ನೋಡ ನೋಡುತ್ತಿದ್ದಂತೆ ಸುಟ್ಟು ಕರಕಲಾಗಿದ್ದವು.

Also Read  ಕೆಸಿಎಫ್ ದಿನಾಚರಣೆ ಪ್ರಯುಕ್ತ ಬಹರೈನ್ ರಾಷ್ಟ್ರೀಯ ಸಮಿತಿ ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಈ ಭೀಕರ ದುರಂತಕ್ಕೆ ಇಂದಿಗೆ 9 ವರ್ಷ ಪೂರ್ತಿಯಾಗಿದ್ದು, ಬಹುತೇಕ ಸಂತ್ರಸ್ತ ಕುಟುಂಬದವರು ನ್ಯಾಯಾಲಯದಲ್ಲಿ ಹೋರಾಡಿ ಪರಿಹಾರ ಪಡೆದುಕೊಂಡಿದ್ದಾರೆ. ಇನ್ನೂ ಹಲವು ಸಂತ್ರಸ್ತರಿಗೆ ಪರಿಹಾರ ಬಾಕಿಯಾಗಿದ್ದು, ಸುಪ್ರೀಂ ಕೋರ್ಟ್ ನಲ್ಲಿ ಯೋಗ್ಯವಾದ ಪರಿಹಾರಕ್ಕಾಗಿ ಹೋರಾಡುತ್ತಿದ್ದಾರೆ.

error: Content is protected !!
Scroll to Top