ಕಡಬ: ಅಕ್ರಮ‌ ಜಾನುವಾರು ಸಾಗಾಟ ಪತ್ತೆ ➤ ಜಾನುವಾರುಗಳೊಂದಿಗೆ ಪಿಕಪ್ ವಾಹನ ವಶ, ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಮೇ.21. ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿರುವ ಕಡಬ ಪೊಲೀಸರು ಒಂದು ದನ ಹಾಗೂ ಒಂದು ಹೋರಿಯನ್ನು ಕಡಬ ತಾಲೂಕು ಕೊಯಿಲ‌ ಗ್ರಾಮದ ನೆಲ್ಯೊಟ್ಟು ಎಂಬಲ್ಲಿ ಮಂಗಳವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.

ಗೋಳಿತ್ತಡಿ – ಕುದ್ಲೂರು ಸಾರ್ವಜನಿಕ ರಸ್ತೆಯಲ್ಲಿ ಅಕ್ರಮ ದನ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ‌ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ನೇಲ್ಯೊಟ್ಟು ಎಂಬಲ್ಲಿ ಕೇರಳ ನೋಂದಣಿಯ ಪಿಕಪ್ ವಾಹನದಲ್ಲಿ ಒಂದು ದನ ಹಾಗೂ ಒಂದು ಹೋರಿಯನ್ನು ಯಾವುದೇ ಪರವಾನಗಿ ಇಲ್ಲದೆ ಹಿಂಸಾತ್ಮಕ ರೀತಿಯಲ್ಲಿ‌ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಪಿಕಪ್ ಚಾಲಕ ಕಡಬ ತಾಲೂಕು ಕುದ್ಲೂರು ನಿವಾಸಿ ಸುಲೈಮಾನ್ ಎಂಬವರ ಪುತ್ರ ಮಹಮ್ಮದ್ ಇಕ್ಬಾಲ್ ‌(38) ನನ್ನು ಬಂಧಿಸಿದ್ದಾರೆ. ವಶಪಡಿಸಿಕೊಂಡ ಜಾನುವಾರುಗಳ ಮೌಲ್ಯ 5 ಸಾವಿರ ರೂ. ಹಾಗೂ ಪಿಕಪ್ ವಾಹನದ ಮೌಲ್ಯ 2 ಲಕ್ಷ ಎಂದು ಅಂದಾಜಿಸಲಾಗಿದೆ.

Also Read  ಸುಳ್ಯ: ಟಿಪ್ಪರ್ ಹಾಗೂ ಬೈಕ್ ನಡುವೆ ಅಪಘಾತ ➤ ಬೈಕ್ ಸವಾರನಿಗೆ ಗಾಯ..!

error: Content is protected !!
Scroll to Top