ಸೌರಾಷ್ಟ್ರ ಪ್ರೀಮಿಯರ್ ಲೀಗ್ ಆಡಲಿರುವ ಚೇತೇಶ್ವರ ಪೂಜಾರ

(ನ್ಯೂಸ್ ಕಡಬ) newskadaba.com ಕಡಬ,ಮೇ.09.ರಾಜ್ಕೋಟ್ ನಲ್ಲಿ ಮೇ14ರಿಂದ ಆರಂಭವಾಗಲಿರುವ ಮೊದಲ ಆವೃತ್ತಿ ಸೌರಾಷ್ಟ್ರ ಪ್ರೀಮಿಯರ್‌ ಲೀಗ್‌ನಲ್ಲಿ ಭಾರತ ಟೆಸ್ಟ್‌ ಕ್ರಿಕೆಟಿಗ ಚೇತೇಶ್ವರ ಪೂಜಾರ ಪಾಲ್ಗೊಳ್ಳಲಿದ್ದಾರೆ.ಸ್ವತಃ ಈ ವಿಷಯವನ್ನು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಬುಧವಾರ ಪ್ರಕಟಪಡಿಸಿದೆ. ಮೊದಲ ಆವೃತ್ತಿಯಲ್ಲಿ 5 ತಂಡಗಳು ಪಾಲ್ಗೊಳ್ಳಲಿದ್ದು, ಹೊಸ ಕೂಟ ಹೊಸ ಉತ್ಸಾಹ ತಂದಿದ್ದು ಎಲ್ಲಾ ಆಟಗಾರರು ಸಿಡಿಯಲು ರೆಡಿಯಾಗಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಬಾರಿ ಪೂಜಾರ ಇತ್ತೀಚಿಗೆ ಕೌಂಟಿ ಕ್ರಿಕೆಟ್ ಕೂಟದಲ್ಲಿ ಆಡಿದ್ದಾರೆ. ಪೂಜಾರ ಒಟ್ಟು 68 ಟೆಸ್ಟ್‌ ಕ್ರಿಕೆಟ್ ಪಂದ್ಯದಲ್ಲಿ ಆಡಿ 5,426 ರನ್‌ ಸಿಡಿಸಿದ್ದಾರೆ. ಅಜೇಯ 206 ರನ್‌ ವೈಯಕ್ತಿಕ ಗರಿಷ್ಠ ಎನ್ನುವುದು ವಿಶೇಷ. ಐಪಿಎಲ್ ಮಾದರಿಯ ಟಿ20 ಕ್ರಿಕೆಟ್ ಅನ್ನು ರಾಜ್ಯವಾರು ಅಳವಡಿಸಿಕೊಂಡಿರುವುದರಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನವಾಗಿದೆ.

Also Read  ➤ಆಸೀಸ್ ವಿರುದ್ಧ ವಿಶ್ವ ದಾಖಲೆ ಬರೆಯುವ ಸನಿಹದಲ್ಲಿ ಕಿಂಗ್ ಕೊಹ್ಲಿ..!

error: Content is protected !!
Scroll to Top