ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ – ವಾರ್ಷಿಕೋತ್ಸವ



ಮಂಗಳೂರು ಮೇ 6 ( ನ್ಯೂಸ್ ಕಡಬ) newskadaba.com,) :-ಕರ್ನಾಟಕ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪು) ಕದ್ರಿಹಿಲ್ಸ್, ಮಂಗಳೂರು ಇದರ ವಾರ್ಷಿಕೋತ್ಸವ ಕಾರ್ಯಕ್ರಮ ಮೇ 10 ರಂದು ಪೂರ್ವಾಹ್ನ 9.30 ಗಂಟೆಗೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪರಿಶ್ರಮ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಬಿ.ಹೆಚ್.ನಾರಾಯಣಪ್ಪ\ರವರು ಮಾಡಲಿದ್ದಾರೆ. ಅಧ್ಯಕ್ಷತೆ ಪ್ರಾಂಶುಪಾಲರು ಉಪನಿರ್ದೇಶಕರು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪು), ಗಿರಿಧರ್ ಸಾಲಿಯಾನ್ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.





error: Content is protected !!
Scroll to Top