ಎಸ್.ಎಸ್.ಎಲ್.ಸಿ. ಪರೀಕ್ಷೆ ಇಬ್ಬರು ಎಂಡೋ ಪೀಡಿತ ವಿದ್ಯಾರ್ಥಿಗಳು ತೇರ್ಗಡೆ

ಉಪ್ಪಿನಂಗಡಿ ಮೇ 1  ( ನ್ಯೂಸ್ ಕಡಬ) newskadaba.com,):- ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಪ್ರಕಟವಾಗಿರುವ ಪ್ರಕಾರ ಇಬ್ಬರು ಎಂಡೋ ಪೀಡಿತ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು , ತನಗೆ ಎದುರಾಗಿರುವ ಅಂಗವೈಕಲ್ಯತೆಯನ್ನು ಲೆಕ್ಕಿಸದೆ ವಿಶಿಷ್ಟ ಸಾಧನೆ ತೋರಿ ಮಾದರಿಯಾಗಿದ್ದಾರೆ. ಕೊಯಿಲ ಎಂಡೋ  ಪಾಲನಾ ಕೇಂದ್ರದಲ್ಲಿ ಇದ್ದುಕೊಂಡು ಕಲಿಕೆಯಲ್ಲಿ ತೊಡಗಿದ್ದ ಕೇಂದ್ರದ ವಿದ್ಯಾರ್ಥಿಗಳಾದ ಮನೋಜ್ 392 ಅಂಕದೊಂದಿಗೆ (64%) ಪ್ರಥಮ ಶ್ರೇಣಿಯಲ್ಲಿ ಮತ್ತು ರೇವತಿ 273 ಅಂಕ ಪಡೆದು (44%) ತೇರ್ಗಡೆ ಹೊಂದಿರುತ್ತಾರೆ.ಇವರು ಇಬ್ಬರೂ ರಾಮಕುಂಜ ಶ್ರೀ ರಾಮಕುಂಜೇಶ್ವರ ಫ್ರೌಢ ಶಾಲಾ ಪರೀಕ್ಷಾ ಕೇಂದ್ರದ ಮೂಲಕ ಪರೀಕ್ಷೆ ಬರೆದಿದ್ದರು. ಮನೋಜ್ ಕಡಬ ಸಮೀಪದ ಕಲ್ಲುಗುಡ್ಡೆ ನಿವಾಸಿ ಭಾಸ್ಕರ ಗೌಡ ಮತ್ತು ರೇವತಿ ದಂಪತಿಗಳ ಪುತ್ರನಾಗಿದ್ದು, ರೇವತಿ ಆಲಂಕಾರು ಗ್ರಾಮದ ಬರೆಪದವು ನಿವಾಸಿ ಬಾಬು ಮುಗೇರ ಮತ್ತು ಲೀಲಾ ದಂಪತಿಯ ಪುತ್ರಿ ಆಗಿರುತ್ತಾರೆ.

Also Read  ವಿಟ್ಲ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ

error: Content is protected !!
Scroll to Top