ಜಿಲ್ಲೆಯಲ್ಲಿ ಶಾಂತಿಯುತ ಮತದಾನ

(ನ್ಯೂಸ್ ಕಡಬ) newskadaba.com:ಮಂಗಳೂರು ಏಪ್ರಿಲ್ 18, ಜಿಲ್ಲೆಯಲ್ಲಿ ಶಾಂತಿಯುತ ಮತದಾನವಾಗಿದ್ದು, ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಡೆದ ಮತದಾನದಲ್ಲಿ ಶೇಕಡಾ 77.25 ರಷ್ಟು ಮತದಾನವಾಗಿದೆ.ಬೆಳಿಗ್ಗೆ 9 ಗಂಟೆಗೆ ಶೇ. 15.49 ಮತದಾನವಾಗಿದ್ದು ಬೆಳಗ್ಗೆ 7 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತ ಮತದಾರರು ಚುರುಕಿನ ಮತದಾನ ನಡೆಸಿದರು. ಪೂರ್ವಾಹ್ನ 11 ಗಂಟೆಗೆ ಶೇ.32.34, ಅಪರಾಹ್ನ 1 ಗಂಟೆಗೆ ಶೇ. 48.85, 3 ಗಂಟೆಗೆ ಶೇಕಡಾ 60.02, ಸಂಜೆ 5 ಗಂಟೆಗೆ ಶೇ. 72.3 ಅಂತಿಮ ಸುತ್ತಿನಲ್ಲಿ 6 ಗಂಟೆಗೆ 77.25  ಮತದಾನದಾಖಲಾಗಿದೆ.ಶಾಂತಿಯುತವಾಗಿನಡೆದಮತದಾನದಲ್ಲಿ ಜಿಲ್ಲೆಯ ಮತದಾರರು ಅತ್ಯುತ್ಸಾಹದಿಂದ ಪಾಲ್ಗೊಂಡರು. ಬೆಳ್ತಂಗಡಿಯಲ್ಲಿ ಶೇ. 80.92, ಮೂಡಬಿದಿರೆಯಲ್ಲಿ ಶೇ. 73.17, ಮಂಗಳೂರು ಉತ್ತರದಲ್ಲಿ ಶೇ. 74.83, ಮಂಗಳೂರು ದಕ್ಷಿಣ ಶೇ. 69.15, ಮಂಗಳೂರು ಶೇ. 75.62, ಬಂಟ್ವಾಳ 80.31, ಪುತ್ತೂರು 80.71, ಸುಳ್ಯ 84.10 ರಷ್ಟು ಜನರು ಮತದಾನ ದಾಖಲಾಗಿದೆ.ಮತದಾನದ ಸಂಧರ್ಭದಲ್ಲಿ ಒಟ್ಟು 16 ಕಂಟ್ರೋಲ್ ಯುನಿಟ್, ಬ್ಯಾಲೆಟ್, ಯುನಿಟ್, 38 ವಿವಿಪ್ಯಾಟ್‍ಗಳನ್ನು ಬದಲಾಯಿಸಲಾಗಿದೆ. ಕಂಟ್ರೋಲ್ ರೂಮ್‍ನಿಂದ ತಕ್ಷಣ ಬರುತ್ತಿದ್ದ ಸಮಸ್ಯೆಗಳಿಗೆಪರಿಹಾರವನ್ನುನೀಡಲಾಗಿದೆ. ಇನ್ನುಳಿದಂತೆ 1950 ಮುಖಾಂತರ ವಿವಿಧೆಡೆಗಳಿಂದ ಬಂದ ಸುಮಾರು 511 ಕರೆಗಳಲ್ಲಿ ಮಾಹಿತಿ ಹಾಗೂ ದೂರುಗಳನ್ನು ಸ್ವೀಕರಿಸಲಾಯಿತು. ಮತದಾನ ಮಾಡುವ ಸ್ಥಳಗಳ ಬಗ್ಗೆ ಮಾಹಿತಿ, ಮತದಾನ ಮಾಡಲು ಬೇಕಾಗಿರುವ ದಾಖಲೆಗಳ ಬಗ್ಗೆ ಮಾಹಿತಿ ನೀಡಲಾಯಿತು.

 

 

error: Content is protected !!

Join the Group

Join WhatsApp Group