(ನ್ಯೂಸ್ ಕಡಬ) newskadaba.com ಮಂಗಳೂರು, ಎ.15. ಎಂಡೋಪಾಲನಾ ಕೇಂದ್ರ, ಕೊಯಿಲದ ವಿದ್ಯಾರ್ಥಿ ಅಭಿಷೇಕ್ ದ್ವಿತೀಯ ಪಿ.ಯು.ಸಿ. ಕಲಾವಿಭಾಗದಲ್ಲಿ 63 ಶೇಕಡಾ ಅಂಕ ಪಡೆದು ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿರುತ್ತಾನೆ.
ಶ್ರೀ ವಸಂತ ಮತ್ತು ಶ್ರೀಮತಿ ಗಂಗರತ್ನ ಇವರ ಪುತ್ರನಾದ ಅಭಿಷೇಕ್ ಕಳೆದ ವರ್ಷ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 76% ಅಂಕ ಪಡೆದು ತೇರ್ಗಡೆಯಾಗಿರುವನು. ಸೇವಾ ಭಾರತಿ (ರಿ) ಮಂಗಳೂರು ಅಭಿಷೇಕ್‍ನ ಸಾಧನೆಗೆ ಅಭಿನಂದಿಸಿದೆ. ಹಾಗೂ ಈ ಸಾಧನೆಗೈಯಲು ಸಹಕರಿಸಿದ ದ.ಕ. ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಪ್ರಾಂಶುಪಾಲರು ಸರ್ಕಾರಿ ಪದವಿ ಪೂರ್ವ ಕಾಲೇಜು, ಉಪ್ಪಿನಂಗಡಿ, ಬರಹಗಾರರಾದ ಕುಮಾರಿ ಲಾವಣ್ಯ ಇವರುಗಳನ್ನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸಿದೆ. ಅಭಿಷೇಕ್‍ನ ತೇರ್ಗಡೆಗೆ ಕಾರಣ ಕರ್ತರಾದ ಎಂಡೋಪಾಲನಾ ಕೇಂದ್ರ, ಕೊಯಿಲ ಕೇಂದ್ರದ ಶಿಕ್ಷಕ ವೃಂದದವರಿಗೆ ಅಭಾರಿಯಾಗಿರುತ್ತದೆ. ಮುಂದೆ ಪದವಿ ಶಿಕ್ಷಣವನ್ನು ಮುಂದುವರೆಸುವ ಇಚ್ಛೆಯನ್ನು ಅಭಿಷೇಕ್ ವ್ಯಕ್ತ ಪಡಿಸಿದ್ದಾನೆ.