(ನ್ಯೂಸ್ ಕಡಬ) newskadaba.com ಕಡಬ, ಆ.02. ಬಿಳಿನೆಲೆ ಗ್ರಾಮದಲ್ಲಿ ಮಾತ್ರವಲ್ಲದೆ ಇಡೀ ಕಡಬ ತಾಲೂಕು ವ್ಯಾಪ್ತಿಯಲ್ಲಿ ಮದ್ಯದಂಗಡಿ, ಬಾರ್ & ರೆಸ್ಟೋರೇಂಟ್, ರೆಸಾರ್ಟ್ಗಳಿಗೆ ಅವಕಾಶ ನೀಡುವುದಿಲ್ಲ ಎಂದು ಶ್ರೀಕ್ಷೇ.ಧ.ಗ್ರಾ.ಯೋಜನೆಯ ಬಿಳಿನೆಲೆ ವಲಯ ಒಕ್ಕೂಟ, ಬಿಳಿನೆಲೆ ಜನಜಾಗೃತಿ ವತಿಯಿಂದ ಆ.1 ರಂದು ಬಿಳಿನೆಲೆ ಶ್ರಿ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ನಡೆದ ಬಿಳಿನೆಲೆ, ಕೊಂಬಾರು, ಕೈಕಂಬ, ಐತ್ತೂರು, ಒಕ್ಕೂಟ ಹಾಗೂ ವಲಯ ಜನಜಾಗೃತಿ ಸಮಿತಿ ವತಿಯಿಂದ ತೀರ್ಮಾನಿಸಿದ್ದಲ್ಲದೆ ಈ ಬಗ್ಗೆ ಬಿಳಿನೆಲೆ ಗ್ರಾ.ಪಂ.ಗೆ ಮನವಿ ಸಲ್ಲಿಸಿ ಒತ್ತಾಯಿಸಿದ ಘಟನೆ ನಡೆಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಬಿಳಿನೆಲೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ದಿನೇಶ್ರವರು ನಮ್ಮ ಬಿಳಿನೆಲೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಯಾವುದೇ ಮದ್ಯದಂಗಡಿ, ಬಾರ್ & ರೆಸ್ಟೋರೆಂಟ್ಗಳಿಗೆ ಅವಕಾಶ ನಿಡುವುದಿಲ್ಲ, ಈ ಬಗ್ಗೆ ಈಗಾಗಲೇ ಇಲ್ಲಿ ಕಳೆದ ಜು.25ರಂದು ನಡೆದ ಗ್ರಾಮ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದರಲ್ಲದೆ, ಆದರೆ ತಮ್ಮ ಶ್ರೀ ಕ್ಷೇ.ಧ.ಗ್ರಾ.ಯೋಜನೆ ಒಕ್ಕೂಟದವರಲ್ಲಿ ನಾವು ತಮ್ಮ ಸಂಪುರ್ಣ ಸಹಕಾರ ಕೋರಿದ್ದು ತಮ್ಮ ಕೇಳಿಕೆಯಂತೆ ನಾವು 25ನೇ ತಾರೀಖಿಗೆ ಗ್ರಾಮ ಸಭೆ ನಡೆಸಿದ್ದೇವು. ಆದರೆ ಆ ದಿನ ತಮ್ಮ ಜನಜಾಗೃತಿ ವೇದಿಕೆ, ಒಕ್ಕೂಟದ ವತಿಯಿಂದ ಹೆಚ್ಚಿನವರು ಗ್ರಾಮಸಭೆಯಲ್ಲಿ ಅವರ ವೈಯಕ್ತಿಕ ನೆಲೆಯಲ್ಲಿ ಭಾಗವಹಿಸಿ ಮದ್ಯದಂಗಡಿಗೆ ಅನುಮತಿ ನೀಡದಂತೆ ಒತ್ತಾಯಿಸಿದ್ದರೂ ತಮ್ಮ ಒಕ್ಕುಟದ ವತಿಯಿಂದ ಪುರ್ಣ ಪ್ರಮಾಣದ ಸಹಕಾರ ದೊರೆತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರಲ್ಲದೆ ನೂಜಿಬಾಳ್ತಿಲ ಗ್ರಾ.ಪಂ.ನ ಗ್ರಾಮಸಭೆಯಲ್ಲಿ ಅಲ್ಲಿಯ ಒಕ್ಕೂಟದ ವತಿಯಿಂದಲೆ ಇಡೀ 2 ಗ್ರಾಮಗಳ ಗ್ರಾಮಸ್ಥರು ಒಮ್ಮತಾಭಿಪ್ರಾಯದಿಂದ ಮದ್ಯದಂಗಡಿ ವಿರೋಧಿಸಿ ನಿರ್ಣಯ ಕೈಗೊಳ್ಳಲು ಸಹಕರಿಸಿದ್ದಾರೆ. ನಾವು ಕೂಡಾ ಇಲ್ಲಿ ರಾಜಕೀಯ ಹೊರತುಪಡಿಸಿ ಎಲ್ಲಾ ಜಾತಿ ಜನಾಂಗದವರು ಒಟ್ಟಾಗಿ ಎದುರಿಸುವುದು ನಮ್ಮ ಧರ್ಮವಾಗಿದೆ ಎಂದ ಅವರು ನೀವು ನಾವು ಒಟ್ಟಾಗಿ ವಿರೋಧಿಸೋಣ ಎಂದರು.
ಕಡಬ ವಲಯ ಜನಜಾಗೃತಿ ಸಮಿತಿಯ ಮಾಜಿ ಅಧ್ಯಕ್ಷ ಗಣೇಶ್ ಕೈಕುರೆ, ಬಿಳಿನೆಲೆ ವಲಯ ಒಕ್ಕೂಟದ ಅಧ್ಯಕ್ಷ ಭವಾನಿ ಶಂಕರ್, ಬಿಳಿನೆಲೆ ವಲಯ ಮೇಲ್ವಿಚಾರಕ ರಾಜು ಗೌಡರವರ ಮುಂದಾಳತ್ವದಲ್ಲಿ ಬಿಳಿನೆಲೆ ಒಕ್ಕುಟದ ಅಧ್ಯಕ್ಷ ಗುಡ್ಡಪ್ಪ ಗೌಡ, ಕೊಂಬಾರು ಒಕ್ಕೂಟದ ಅಧ್ಯಕ್ಷ ಲಿಂಗಪ್ಪ ಗೌಡ, ಮಾಜಿ ಅಧ್ಯಕ್ಷ ವಿಶ್ವನಾಥ ಕೆ., ಕೈಕಂಬ ಒಕ್ಕೂಟದ ಅಧ್ಯಕ್ಷ ನಾಗರಾಜ್ ಎ, ಐತ್ತೂರು ಒಕ್ಕೂಟದ ಅಧ್ಯಕ್ಷ ಶೇಷಪ್ಪ ಗೌಡ, ಬಿಳಿನೆಲೆ ಒಕ್ಕೂಟದ ಕಾರ್ಯದರ್ಶಿ ದಯಾನಂದ ಒಗ್ಗುರವರ ನೇತೃತ್ವದಲ್ಲಿ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ನೂರಾರು ಮಂದಿ ಪುರುಷರು ಮಹಿಳೆಯರು ಬಿಳಿನೆಲೆ ಗ್ರಾ.ಪಂ.ಗೆ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಿದರು.
ಮನವಿ ವಿಚಾರ: ಬಿಳಿನೆಲೆ ಗ್ರಾ.ಪಂ.ನ ಮೇರುಂಜಿ, ಗೂನಡ್ಕದಲ್ಲಿ ಹೊಸದಾಗಿ ಮದ್ಯದಂಗಡಿ ತೆರೆಯಲು ಕೆಲವು ಖಾಸಗಿ ವ್ಯಕ್ತಿಗಳು ಹುನ್ನಾರ ನಡೆಸುತ್ತಿದ್ದು ಯಾವುದೇ ಕಾರಣಕ್ಕೂ ಬಿಳಿನೆಲೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಮದ್ಯದಂಗಡಿ ಬಾರ್ & ರೆಸ್ಟೋರೆಂಟ್ಗೆ ಅವಕಾಶ ನೀಡಬಾರದು ಎಂದು ಗ್ರಾ.ಪಂ.ಗೆ ಮನವಿ ನೀಡುವುದಲ್ಲದೆ ಇಡೀ ಕಡಬ ತಾಲೂಕು ವ್ಯಾಪ್ತಿಯಲ್ಲಿ ಯಾವುದೇ ಮದ್ಯದಂಗಡಿ ಯಾ ಬಾರ್ & ರೆಸ್ಟೋರೆಂಟ್ಗೆ ಅವಕಾಶ ನೀಡಲು ಬಿಡುವುದಿಲ್ಲವೆಂದು ಸಭೆಯಲ್ಲಿ ಭಾಗವಹಿಸಿದ ಸದಸ್ಯರೆಲ್ಲರೂ ತೀರ್ಮಾನಿಸಿ ಕೈಗೊಂಡರು. ಈ ಬಗ್ಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಳಿನೆಲೆ ಒಕ್ಕೂಟದ ಅಧ್ಯಕ್ಷ ಗುಡ್ಡಪ್ಪ ಗೌಡ ಈಗಾಗಲೇ ನಾವು ಇಲ್ಲಿ ಮದ್ಯದಂಗಡಿ ತೆರೆಯದಂತೆ ನಮ್ಮ ಶ್ರೀಕ್ಷೇ.ಧ.ಗ್ರಾ.ಯೋಜನೆ ವತಿಯಿಂದ ಚರ್ಚಿಸಿ ತೀರ್ಮಾನ ಕೈಗೊಂಡಿದ್ದು ಈ ಬಗ್ಗೆ ಹೆಚ್ಚಿನವರು ಗ್ರಾಮಸಭೆಯಲ್ಲೂ ಭಾಗವಹಿಸಿ ವಿರೋಧಿಸಿದ್ದೇವೆ. ಈಗ ನಾವು ಈ ಭಾಗದ ಎಲ್ಲಾ ಒಕ್ಕೂಟಗಳ ಸದಸ್ಯರು ಸೇರಿಕೊಂಡು ಒಮ್ಮತಾಭಿಪ್ರಾಯದಿಂದ ಇಲ್ಲಿ ಮದ್ಯದಂಗಡಿ ತೆರೆಯದಂತೆ ಮನವಿ ನೀಡುತ್ತಿದ್ದು ನಮ್ಮ ಮನವಿ ಹಾಗೂ ಆಗ್ರಹವನ್ನು ಲೆಕ್ಕಿಸದೆ ಬಾರ್&ಮದ್ಯದಂಗಡಿ ತೆರೆದಲ್ಲಿ ಅಂತಹ ಮದ್ಯದಂಗಡಿಯನ್ನು ಊರಿನವರ ಸಹಕಾರದಿಂದ ಶ್ರೀಕ್ಷೇ.ಧ.ಗ್ರಾ.ಯೋಜನೆ ಒಕ್ಕೂಟದವರೆಲ್ಲರೂ ಸೇರಿಕೊಂಡು ಕಲ್ಲು ಹೊಡೆಯುವುದಲ್ಲದೆ ಮದ್ಯದಂಗಡಿಯ ಕಟ್ಟಡವನ್ನು ನಾಶಮಾಡುವುದಾಗಿ ಎಚ್ಚರಿಸಿದರು.
ಕೊಂಬಾರು ಒಕ್ಕೂಟದ ಅಧ್ಯಕ್ಷ ಲಿಂಗಪ್ಪ ಗೌಡ ಮಾತನಾಡಿ ಸ್ವಾಮಿ ವಿವೇಕಾನಂದರ ಸಂದೇಶದಂತೆ ಸತ್ಯಧರ್ಮ ನಿಷ್ಟೆಯಿಂದ ನಡೆದವನಿಗೆ ಸ್ವಲ್ಪ ತಡವಾದರೂ ದೇವರು ಎಂದೂ ಕೈಬಿಡುವುದಿಲ್ಲವೆಂಬುದು ಸತ್ಯ, ನಮ್ಮ ಕಡಬ ತಾಲೂಕಿನಲ್ಲಿ ಕುಡುಕರೇ ಇಲ್ಲದಂತಾಗಲು ಎಲ್ಲಿಯೂ ಬಾರ್ & ರೆಸ್ಟೋರೆಂಟ್ ಮಾಡದಂತೆ ಶ್ರೀಕ್ಷೇ.ಧ.ಗ್ರಾ.ಯೋಜನೆ ವತಿಯಿಂದ ನಾವೆಲ್ಲರೂ ಒಟ್ಟಾಗಿ ಹೋರಾಡೋಣ ಎಂದರು. ಐತ್ತೂರು ಒಕ್ಕೂಟದ ಶೇಷಪ್ಪ ಗೌಡ, ಕೊಂಬಾರು ಒಕ್ಕೂಟದ ಮಾಜಿ ಅಧ್ಯಕ್ಷ ವಿಶ್ವನಾಥ ಕೆ, ಕೈಕಂಬ ಒಕ್ಕೂಟದ ಅಧ್ಯಕ್ಷ ನಾಗರಾಜ್ ಎ ಮದ್ಯದಂಗಡಿ ವಿರೋಧಿಸಿ ಅನಿಸಿಕೆ ವ್ಯಕ್ತಪಡಿಸಿದರು.
ಬಿಳಿನೆಲೆ ವಲಯ ಒಕ್ಕೂಟದ ಅಧ್ಯಕ್ಷ ಭವಾನಿಶಂಕರ ಮಾತನಾಡಿ ಹೆದ್ದಾರಿ ಬದಿಯಲ್ಲಿರುವ ಮದ್ಯದಂಗಡಿಗಳು, ಬಾರ್& ರೆಸ್ಟೋರೆಂಟ್ಗಳು ಬಂದ್ ಆಗಿ ಹಳ್ಳಿಗಳತ್ತ ಮುಖಮಾಡಿರುವುದು ನಮ್ಮ ದುರದೃಷ್ಟಕರ ಅಲ್ಲದೆ ಯಾವುದೇ ಮದ್ಯದಂಗಡಿ, ಬಾರ್ &ರೆಸ್ಟೋರೆಂಟ್ಗಳಿಗೆ ಸ್ಥಳೀಯಾಡಳಿತದಿಂದ ಎನ್ಒಸಿ ಪರವಾನಿಗೆ ಬೇಡವೆಂದು ಅಬಕಾರಿ ಇಲಾಖೆಯವರು ಹೇಳುತ್ತಿರುವುದು ವಿಪರ್ಯಾಸವಾಗಿದೆ ಎಂದ ಅವರು ಈಗಾಗಲೇ ಮಂಗಳೂರು-ಬೆಂಗಳೂರು, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಾರ್ & ರೆಸ್ಟೋರೆಂಟ್ಗಳನ್ನು ಸುಪ್ರೀಂ ಕೋರ್ಟ್ನ ಆದೇಶದಂತೆ ಬಂದ್ ಮಾಡಲಾಗಿದ್ದು ಗ್ರಾಮೀಣ ಪ್ರದೇಶಕ್ಕೆ ಕಾಲಿಟ್ಟಿದ್ದು ಮದ್ಯದೊರೆಗಳ ದಬ್ಬಾಳಿಕೆಯೊಂದಿಗೆ ಮದ್ಯದಂಗಡಿಗಳನ್ನು ತೆರೆಯಲು ಮುಂದಾಗಿದ್ದಾರೆ. ಗ್ರಾಮೀಣ ಜನರ ನೆಮ್ಮದಿಯನ್ನು ಕೆಡಿಸಲು ಮುಂದಾಗಿರುವ ಬಾರ್ಗಳಿಗೆ ಎಲ್ಲೂ ಅವಕಾಶ ನೀಡುವುದಿಲ್ಲ ಈ ಬಗ್ಗೆ ಒಟ್ಟಾಗಿ ಹೋರಾಡೋಣ ಎಂದರು.
ಮೇಲ್ವಿಚಾರಕ ರಾಜುಗೌಡ ಮಾತನಾಡಿ ಪುಜ್ಯ ಖಾವಂದರರವರು ಹಲವಾರು ವರ್ಷಗಳಿಂದ ಮದ್ಯಮುಕ್ತ ಸಮಾಜ ನಿರ್ಮಿಸುವುದರೊಂದಿಗೆ ಎಲ್ಲರು ಅಭಿವೃದ್ದಿ ಹೊಂದಬೇಕೆಂದು ಯೋಚಿಸಿ ಈ ಹಿಂದೆ ಮದ್ಯವರ್ಜನ ಶಿಬಿರಗಳನ್ನು ನಡೆಸಿ ಕುಡುಕರನ್ನು ಕುಡಿತದ ಚಟದಿಂದ ಬಿಡಿಸಿ ಸುಖಜೀವಿಗಳನ್ನಾಗಿ ಮಾಡಿಸುವಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದು ಈಗ 100ಕ್ಕೆ 75% ಮದ್ಯಮುಕ್ತರಾಗಿದ್ದಾರೆ. ಈಗ ಸುಫ್ರೀಂ ಕೋರ್ಟ್ ಕೂಡಲೇ ಹೆದ್ದಾರಿಗಳ ಪಕ್ಕದಲ್ಲಿರುವ ಬಾರ್ಗಳನ್ನು ಬಂದ್ ಮಾಡಲು ಆದೇಶಿಸಿದ್ದು ಖಾವಂದರ ಕನಸು ನನಸಾಗಿದೆ. ಆದರೆ ಮತ್ತೆ ಮದ್ಯ ಮಾರಾಟಗಾರರು ಗ್ರಾಮ ಮಟ್ಟದಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಮುಂದಾಗಿರುವುದು ಸರಿಯಲ್ಲ. ಈ ಬಗ್ಗೆ ಪ್ರತಿಯೊಬ್ಬರು ಇದನ್ನು ವಿರೋಧಿಸಬೇಕಾಗಿದೆ ಎಂದ ಅವರು ರಾಜಕೀಯ ರಹಿತವಾಗಿರುವ ಒಕ್ಕೂಟದ ವತಿಯಿಂದ ನಾವೆಲ್ಲರು ಒಟ್ಟಾಗಿ ಎದುರಿಸೋಣ ಎಂದರು.
ಗಣೇಶ್ ಕೈಕುರೆ ಮಾತನಾಡಿ, ಒಳ್ಳೆಯವರು ಕೆಟ್ಟವರಂತರಾಗುವುದು ಕೆಟ್ಟ ಜನರಿಂದಲ್ಲ, ಒಳ್ಳೆಜನರಿಂದಲೇ ಎಂದು ಶ್ಲೋಕ ಹೇಳಿದ ಗಣೇಶ್ ಕೈಕುರೆ ಒಳ್ಳೆಯ ಜನರು ಕೆಟ್ಟ ಚಟಗಳನ್ನು ವಿರೋಧಿಸಿದಿದ್ದಲ್ಲಿ ಇದರಿಂದ ತೊಂದರೆ ಆದರೆ ಅದಕ್ಕೆ ಒಳ್ಳೆಯವರೇ ಕಾರಣರಾಗುತ್ತಾರೆ. ಅದರಿಂದ ನಾವೆಲ್ಲರೂ ದುಶ್ಚಟಗಳಿಂದ ದೂರ ಇರುವುದರೊಂದಿಗೆ ಯಾರೊಬ್ಬ ವ್ಯಕ್ತಿಯೂ ದುಶ್ಚಟಗಳಿಗೆ ಬಳಿ ಬೀಳದಂತೆ ಎಚ್ಚರ ವಹಿಸಬೇಕಾಗಿದೆ. ಮದ್ಯಪಾನ ಮಾಡುವುದರಿಂದ ಹೆಂಡತಿ ಮಕ್ಕಳು ಬೀದಿ ಪಾಲಾಗಿ ಕುಟುಂಬದಲ್ಲಿ ಯಾವಾಗಲೂ ಕಿರಿಕಿರಿ, ಇದರಿಂದ ಮಕ್ಕಳಿಗೆ ವಿದ್ಯಾಭ್ಯಾದವೂ ಇಲ್ಲದಂತಾಗುತ್ತಿದ್ದು ಸಂಪುರ್ಣ ನೆಮ್ಮದಿ ಕೆಡಿಸಲಿದ್ದು ನಾವು ಮದ್ಯದಂಗಡಿಗೆ ಸಂಪುರ್ಣ ವಿರೋಧವಿದ್ದು ಈ ಬಿಳಿನೆಲೆ ಗ್ರಾಮದಿಂದಲೇ ಮದ್ಯಮುಕ್ತ ಮಾದರಿ ಗ್ರಾಮ ಪ್ರಾರಂಭಿಸಿ ರಾಜ್ಯಕ್ಕೆ ಮಾದರಿಯಾಗಲು ಎಲ್ಲರು ಒಟ್ಟಾಗಿ ಹೋರಾಟ ನಡೆಸಬೇಕಾಗಿದೆ ಎಂದರು.
ಕೊಂಬಾರು ಒಕ್ಕೂಟದ ಅಧ್ಯಕ್ಷರಾದ ಲಿಂಗಪ್ಪ ಗೌಡ ಮಾತನಾಡಿ, ಇಂದು ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್ಗಳಲ್ಲಿ ಕುಡುಕರು ಚರಂಡಿಗೆ ಬಿದ್ದು ಅವನನ್ನು ನಾಯಿಗಳು ನೆಕ್ಕುವ ವೀಡಿಯೋ ನೋಡಿ ನಾವು ನಗುತ್ತೇವೆ. ಅಲ್ಲದೆ ನಮ್ಮ ಕಣ್ಣಮುಂದೆ ಕುಡುಕರು ಕಂಡಾಗ ಅವರ ವೀಡಿಯೋ ಮಾಡಿ ಅದನ್ನು ವಾಟ್ಸಾಪ್ಗೆ ಹಾಕಿ ನಾವು ಖುಷಿಪಡುತ್ತೇವೆ. ಆದರೆ ಅವರ ಮನೆಯವರು ಅದೇ ವೀಡಿಯೋ ನೋಡಿದಾಗ ಅವರ ಮನಸ್ಸು ಹೇಗಾಗಬೇಡ. ನಾವು ಅವರ ಮನೆಯವರ ಬಗ್ಗೆ ಕೂಡ ಯೋಚಿಸಬೇಕು ಎಂದರು.