ಮುಸ್ಲಿಂ ಮನೆಗಳಲ್ಲಿ ಬಿಜೆಪಿ ಪಕ್ಷದ ಮತ ಯಾಚನೆಯ ವೀಡಿಯೋ ಬಗ್ಗೆ ಈಗಾಗಲೇ ಕ್ಷಮೆ ಕೇಳಲಾಗಿದೆ ➤ ಇನ್ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುವವರ ವಿರುದ್ಧ ಕಡಬ ಬಿಜೆಪಿಯಿಂದ ಕಾನೂನು ಕ್ರಮದ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ಎ.12. ಲೋಕಸಭಾ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಕಾರ್ಯಕರ್ತರು ಕಡಬದ ಕೊರುಂದೂರು ಪರಿಸರದ ಕೆಲವು ಮುಸ್ಲಿಂ ಸಮುದಾಯದ ಮನೆಗಳಲ್ಲಿ ಮತ ಯಾಚಿಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರಿಂದ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸಭೆ ಸೇರಿದ ಬಿಜೆಪಿ ಪ್ರಮುಖರು ಸಂಬಂಧಪಟ್ಟವರಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಿ ಪ್ರಕರಣವನ್ನು ಮುಗಿಸಿದ್ದು, ಇನ್ಮುಂದೆ ಅದೇ ದೃಶ್ಯವನ್ನು ಪಸರಿಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕಡಬದ ಬಿಜೆಪಿ ಧುರೀಣ ಸತೀಶ್ ನಾಯಕ್, ಆದಂ ಕುಂಡೋಳಿ, ಪುತ್ತು ಮೇಸ್ತ್ರಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದು, ಕಡಬದ ಕೊರುಂದೂರು ಪರಿಸರದ ಮುಸ್ಲಿಂ ಸಮುದಾಯದ ಮನೆಗಳಿಗೆ ನಾವು ತೆರಳಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಚಾರ ಪಡಿಸಿ ಮತ ಯಾಚಿಸುತ್ತಿದ್ದಾಗ ನಮ್ಮದೇ ಕಾರ್ಯಕರ್ತರು ವೀಡಿಯೋ ಮಾಡಿರುವ ಬಗ್ಗೆ ವಿಷಾದವಿದೆ. ಯಾವುದೇ ದುರುದ್ದೇಶದಿಂದ ಈ ವೀಡಿಯೋವನ್ನು ಹಾಕಿಲ್ಲವೆಂದು ಈ ಮೂಲಕ ತಿಳಿಯಪಡಿಸುತ್ತಾ, ಇದರಿಂದಾಗಿ ಮುಸ್ಲಿಂ ಸಮುದಾಯಕ್ಕೆ ಬೇಸರ ಆಗಿದ್ದಲ್ಲಿ ಪಕ್ಷದ ಪರವಾಗಿ ಕ್ಷಮೆ ಯಾಚಿಸಿ ಪ್ರಕರಣವನ್ನು ಸಾರ್ವಜನಿಕವಾಗಿ ಮುಗಿಸಲಾಗಿದೆ. ಹಾಗಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ದೃಶ್ಯಗಳನ್ನು ಪಸರಿಸುತ್ತಿರುವುದು ಕಂಡು ಬಂದಿದೆ. ಮುಗಿದ ಪ್ರಕರಣವನ್ನು ಕೆದಕಿ ಸಾಮಾಜಿಕ ಜಾಲತಾಣಗಳಲ್ಲಿ ಪುನಃ ಹಂಚುವವರ ವಿರುದ್ಧ ಪೊಲೀಸ್ ದೂರು ನೀಡುವ ಮೂಲಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಪ್ರಮುಖರು ಎಚ್ಚರಿಸಿದ್ದಾರೆ.

Also Read  ಸೇತುವೆ ಮೇಲಿಂದ ತೋಡಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ..!

error: Content is protected !!
Scroll to Top