ಕಡಬ: ಅಂಗಡಿಮನೆ ದೈವಸ್ಥಾನದಲ್ಲಿಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

 

ನ್ಯೂಸ್ ಕಡಬ

ನಮ್ಮಿಂದ ಧರ್ಮ ಉಳಿದಿದೆ ಎಂಬ ಭಾವನೆ ತಪ್ಪು, ಬದಲಾಗಿ ಧರ್ಮ ಉಳಿದಿರುವುದರಿಂದಲೇ ನಾವು ಉತ್ತಮ ಬದುಕು ಕಟ್ಟಿಕೊಂಡಿದ್ದೆವೆ ಪೂರ್ವಜರು ಧರ್ಮದ ಚೌಕಟ್ಟಿನಲ್ಲಿ ನಡೆದು ನಮಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರ ಅವರು ಹೇಳಿದರು.
ಅವರು ಫೆ.21ರಂದು ಜೀಣರ್ೋದ್ಧಾರಗೊಂಡಿರುವ ಕಡಬದ ಅಂಗಡಿಮನೆ ಶ್ರೀ ಮಹಾಮ್ಮಾಯಿ ಶ್ರೀಚಾಮುಂಡಿ, ಗುಳಿಗ ಪರಿವಾರ ದೈವಗಳ ದೈವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ಧಾಮರ್ಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾವು ಯಾವುದೇ ರೀತಿಯ ಪೂವರ್ಾಗ್ರಹಗಳಿಲ್ಲದೆ ನಿಸ್ವಾರ್ಥವಾಗಿ ನಡೆಸುವ ಸೇವೆಗಳಿಗೆ ಪರಿಪೂರ್ಣ ಫಲ ಲಭಿಸುತ್ತದೆ. ನಮ್ಮ ದೇಶ ಕಂಡ ಯಾವುದೇ ನಾಯಕರು ತಮ್ಮ ತಮ್ಮ ಜಾತಿ ಅಥವಾ ಪಂಥದ ಕಾರಣದಿಂದಾಗಿ ನಾಯಕರಾಗಿ ಮೂಡಿಬಂದಿರಲಿಲ್ಲ. ಅವರು ಮಾಡಿದ ಕರ್ಮ ನಿಷ್ಠೆ ಅವರನ್ನು ನಾಯಕರನ್ನಾಗಿ ಉತ್ತುಂಗಕ್ಕೆ ಏರಿಸಿರುವುದನ್ನು ನಾವು ಗಮನಿಸಬೇಕು. ನಮಗೆ ಅಧಿಕಾರದಲ್ಲಿ ಆಸೆ ಇರಬಾರದು, ಉತ್ತಮ ಕೆಲಸದಿಂದ ಜನರ ಪ್ರೀತಿಗೆ ಪಾತ್ರರಾಗಬೇಕು ಎಂದು ಹೇಳಿದರು.
ಸಭೆಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರು ಮಾತನಾಡಿ ಜಗತ್ತಿನಲ್ಲಿಯೇ ಅತ್ಯಂತ ಗೌರವಕ್ಕೆ ಪಾತ್ರವಾಗಿರುವ ನಮ್ಮ ಹಿಂದೂ ಧರ್ಮದ ಮಹತ್ವದ ಕುರಿತು ಹಿಂದೂಗಳಾಗಿರುವ ನಮಗೇ ಅರಿವು ಇಲ್ಲದಿರುವುದು ವಿಷಾದದ ಸಂಗತಿಯಾಗಿದೆ. ನಮ್ಮ ಮಕ್ಕಳಿಗೆ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ. ಮಠ ಮಂದಿರಗಳು ಹಾಗೂ ಧಾಮರ್ಿಕ ಶ್ರದ್ಧಾಕೇಂದ್ರಗಳು ಈ ನಿಟ್ಟಿನಲ್ಲಿ ವಿಶೇಷ ಮುತುವಜರ್ಿ ವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆದಿ ದ್ರಾವಿಡ ಸಮಾಜದ ಮುಖಂಡ ದೇವದಾಸ್ ಕಷ್ಣಾಪುರ ಅವರು ಮಾತನಾಡಿ ನಮ್ಮ ಸಮುದಾಯದ ಪೂರ್ವಜರು ಅಸ್ಪಶ್ಯತೆ ಮತ್ತು ಶೋಷಣೆಯ ಕಾರಣದಿಂದಾಗಿ ಅತ್ಯಂತ ನಿಕೃಷ್ಟ ಬದುಕನ್ನು ಕಂಡವರು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ನಮಗೂ ಸ್ವಾಭಿಮಾನದ ಬದುಕು ಸಿಕ್ಕಿದೆ. ಆದರೆ ಸಮಾಜ ಬದಲಾದರೂ ಅದಕ್ಕನುಗುಣವಾಗಿ ನಾವು ಬದಲಾಗದೇ ಇರುವುದು ಬೇಸರದ ಸಂಗತಿ ಎಂದರು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಸಂಸ್ಕಾರಯುತ ಬದುಕನ್ನು ಕಟ್ಟಿಕೊಡುವ ಜವಾಬ್ದಾರಿಯನ್ನು ಹೆತ್ತವರು ಸಮರ್ಪಕವಾಗಿ ನಿರ್ವಹಿಸಿ ಮುಂದಿನ ಪೀಳಿಗೆಗೆ ಉತ್ತಮ ಜೀವನವನ್ನು ಕಲ್ಪಿಸಬೇಕಿದೆ ಎಂದು ಅವರು ಹೇಳಿದರು. ಧಾಮರ್ಿಕ ಮುಂದಾಳು ಅರುಣ್ಕುಮಾರ್ ಜೆಡೆಮನೆ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ, ಕಡಬ ಶ್ರೀ ದುಗರ್ಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಅವರು ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಚೋಂಕ್ರ ಅಂಗಡಿಮನೆ, ಪ್ರಧಾನ ಕಾರ್ಯದಶರ್ಿ ಸುಂದರ ಮಜ್ಜೆಗುಡ್ಡೆ, ಕೋಶಾಧಿಕಾರಿ ಕಿಶನ್ ಕುಮಾರ್ ರೈ ಪೆರಿಯಡ್ಕ, ಪ್ರಮುಖರಾದ ತನಿಯಪ್ಪ, ನಾಗಪ್ಪ, ಆನಂದ, ಆನಂದ ಅಂಗಡಿಮನೆ ಮುಂತಾದವರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಿವಪ್ರಸಾದ ರೈ ಮೈಲೇರಿ ನಿರೂಪಿಸಿ, ನಾಗೇಶ್ ಅಂಗಡಿಮನೆ ವಂದಿಸಿದರು.
ಗೌರವಾರ್ಪಣೆ:
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಹಾಗೂ ಕೋಶಾಧಿಕಾರಿ ಕಿಶನ್ ಕುಮಾರ್ ರೈ ಪೆರಿಯಡ್ಕ ಅವರನ್ನು ದೈವಸ್ಥಾನದ ಆಡಳಿತ ಪ್ರಮುಖರ ಪರವಾಗಿ ಶಾಸಕ ಎಸ್.ಅಂಗಾರ ಅವರು ಸಮ್ಮಾನಿಸಿ ಗೌರವಿಸಿದರು. ದೇವದಾಸ್ ಕಷ್ಣಾಪುರ ಮತ್ತು ಸುಂದರಿ ದಂಪತಿಯ ಪುತ್ರ ಡಾ| ಯಶುಕುಮಾರ್ ಅವರನ್ನು `ತುಳುನಾಡಿನ ಅವಳಿ ವೀರರು’ ಎನ್ನುವ ವಿಷಯದಲ್ಲಿ ಸಂಶೋಧನ ಪ್ರಬಂಧ ಮಂಡಿಸಿ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿರುವ ಸಾಧನೆಗಾಗಿ ಗೌರವಿಸಲಾಯಿತು. ದೈವಸ್ಥಾನದ ಅಭಿವೃದ್ಧಿಯಲ್ಲಿ ಸಹಕರಿಸಿದ ಸಂಘಟನೆಗಳು ಹಾಗೂ ಪ್ರಮುಖರನ್ನು ಅಭಿನಂದಿಸಲಾಯಿತು.

Also Read  ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯನ್ನು ಪುಸಲಾಯಿಸಿ ಕರೆದೊಯ್ದ ಫೇಸ್ ಬುಕ್ ಫ್ರೆಂಡ್ ► ಜೊತೆಯಾಗಿ ತೆರಳುತ್ತಿದ್ದಾಗ ಬಂಟ್ವಾಳದಲ್ಲಿ ಕಾರು ಅಪಘಾತ

ಬ್ರಹ್ಮಕಲಶೋತ್ಸವ:
ಪುರೋಹಿತ ಶ್ರೀರಘುರಾಮ ಅಮ್ಮಣ್ಣಾಯ ಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ ಫೆ.21ರಂದು ಬೆಳಗ್ಗೆ ಶ್ರೀ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಕಲಶ ಪ್ರತಿಷ್ಠೆ, ಬ್ರಹ್ಮಕಲಶ ಪೂಜೆ, ಬಳಿಕ ಮೀನ ಲಗ್ನದ ಸುಮುಹೂರ್ತದಲ್ಲಿ ಶ್ರೀ ಮಹಾಮ್ಮಾಯಿ ಪರಿವಾರ ದೈವಗಳ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ ನಡೆದು ತಂಬಿಲಸೇವೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನೆರವೇರಿತು. ಬಳಿಕ ಕಡಬ ಶ್ರೀದುಗರ್ಾಂಬಿಕಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರಗಿತು.

error: Content is protected !!
Scroll to Top