ಮತದಾರರ ಜಾಗೃತಿಗೆ ದಕ್ಷಿಣ ಕನ್ನಡದಲ್ಲಿ ಸ್ವೀಪ್ ಚಟುವಟಿಕೆ ಆರಂಭಿಸಲು ಸಿಇಒ ಸೂಚನೆ

(ನ್ಯೂಸ್ ಕಡಬ) newskadaba.comಮಂಗಳೂರು,ಫೆ.12. ಮತದಾರರ ಜಾಗೃತಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ಕ್ರಿಯಾಯೋಜನೆ ರೂಪಿಸಿ ಕಳೆದ ಸಾಲಿಗಿಂತ ಶೇ. 10ರಷ್ಟು ಹೆಚ್ಚು ಮತದಾನ ದಾಖಲಿಸುವ ಗುರಿನಿಗದಿಪಡಿಸಿಕೊಳ್ಳಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ(systematic voters education and electoral participation)  ಅಧ್ಯಕ್ಷರಾದ ಡಾ ಸೆಲ್ವಮಣಿ ಆರ್ ಹೇಳಿದರು.

 

ಅವರಿಂದು ಜಿಲ್ಲಾ ಪಂಚಾಯತ್‍ನಲ್ಲಿ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಕಚೇರಿಗಳಲ್ಲೂ, ಶಾಲಾ ಕಾಲೇಜುಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿ ಮತದಾರರ ಜಾಗೃತಿ ಕೇಂದ್ರಗಳನ್ನು ಮಾಡಬೇಕು. ಕಚೇರಿಯ ಮುಖ್ಯಸ್ಥರು ತಮ್ಮ ವ್ಯಾಪ್ತಿಯಡಿ ಬರುವ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದಾರೆಂಬುದನ್ನು ಖಾತ್ರಿಪಡಿಸಿಕೊಳ್ಳಬೇಕೆಂದರು. ಚುನಾವಣಾ ಜಾಗೃತಿ ಕ್ಲಬ್‍ಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕೆಂದು ಸ್ವೀಪ್ ಸಮಿತಿ ಕಾರ್ಯದರ್ಶಿ ಸುಧಾಕರ ಸಭೆಗೆ ಮಾಹಿತಿ ನೀಡಿದರಲ್ಲದೆ ಈಗಾಗಲೇ ಸುಳ್ಯ, ಬೆಳ್ತಂಗಡಿಗಳಿಂದ ತಾಲೂಕುಗಳಿಂದ ಕ್ರಿಯಾಯೋಜನೆ ಬಂದಿದ್ದು, ಉಳಿದ ತಾಲೂಕು ಮತ್ತು ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಂದ ಕ್ರಿಯಾಯೋಜನೆ ನೀಡಲು ಹೇಳಿದರು.

Also Read  ಆಯುಷ್ ಇಲಾಖೆಯ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಆಯುರ್ವೇದ ಔಷಧಿ ವಿತರಣೆ

ಕ್ಯಾಲೆಂಡರ್ ಆಫ್ ಈವೆಂಟ್ಸ್‍ಗಳನ್ನು ಸಿದ್ಧಪಡಿಸಿ; ಮುಂದಿನ ವಾರದಲ್ಲಿ ಬಿಎಲ್‍ಒಗಳ ಸಭೆ ಕರೆಯಲಾಗುವುದು ಎಂದ ಸಿಇಒ ಅವರು, ಅರ್ಹ ಮತದಾರರು ಪಟ್ಟಿಯಿಂದ ಕೈಬಿಡದಂತೆ ಆರೋಗ್ಯ ಇಲಾಖೆಯವರು ಮತ್ತು ಶಿಕ್ಷಣ ಇಲಾಖೆಯವರು ಜನನ ಪ್ರಮಾಣ ಮತ್ತು ಎಸ್ ಎಸ್ ಎಲ್ ಸಿ ಪಾಸಾದವರ ಸಮಗ್ರ ಪಟ್ಟಿಯನ್ನು ತಮಗೆ ಸಲ್ಲಿಸುವಂತೆ ಸೂಚಿಸಿದರು. ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.

Also Read  ಪಿಂಚಣಿ ವಂಚಿತ ವಿಕಲಚೇತನರನ್ನು ಗುರುತಿಸಲು ತಹಶೀಲ್ದಾರ್ ಸೂಚನೆ

error: Content is protected !!
Scroll to Top