ಯಕ್ಷಗಾನ ಕರಪತ್ರ ಹಾಗೂ ಸಹಾಯಾರ್ಥ ಕೂಪನ್ ಬಿಡುಗಡೆ

(ನ್ಯೂಸ್ ಕಡಬ) newskadaba.comಕಡಬ, ಫೆ.12. ಕಡಬ ತಾಲೂಕು ಪತ್ರಕರ್ತರ ಸಂಘದ ಸಹಾಯಾರ್ಥ ಮಾರ್ಚ್ 11 ರಂದು ಬಪ್ಪನಾಡು ಮೇಳದವರಿಂದ ನಡೆಯಲಿರುವ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನದ ಕರಪತ್ರ ಹಾಗೂ ಸಹಾಯಾರ್ಥ ಕೂಪನ್ ಬಿಡುಗಡೆ ಕಾರ್ಯಕ್ರಮ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಸೋಮವಾರ ನಡೆಯಿತು. ಕೂಪನ್ ಖರೀದಿಸಿ ಕರಪತ್ರ ಬಿಡುಗಡೆಗೊಳಿಸಿದ ಕಡಬ ಕ್ಷೇತ್ರದ ಜಿ.ಪಂ ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ ಸಮಾಜದ ಒರೆಕೊರೆಗಳನ್ನು ತಿದ್ದುವ ಹಾಗೂ ಅಯಾ ಪ್ರದೇಶದ ಅಭಿವೃದ್ಧಿಗೆ ಪೂರಕ ಪ್ರಮುಖ ಪಾತ್ರ ವಹಿಸುವ ಮಾಧ್ಯಮಗಳನ್ನು ಪ್ರತಿನಿಧಿಸುವ ಪತ್ರಕರ್ತರಿಗೆ ಸಂಘಟನಾತ್ಮಕವಾಗಿ ಬೆಳೆಯಲು ಪತ್ರಕರ್ತರ ಸಂಘಗಳು ಪೂರಕವಾಗಿರುತ್ತದೆ, ಯಾವುದೇ ಸಂಘಟನೆಗಳು ಭದ್ರವಾಗಿ ನೆಲೆಯುರಬೇಕಾದರೆ ಆರ್ಥಿಕ ಚೈತನ್ಯ ಅನಿವಾರ್ಯವಾಗಿದೆ.

ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಅಸ್ವಿತ್ವಕ್ಕೆ ಬಂದಿರುವ ಕಡಬ ತಾಲೂಕು ಪತ್ರಕರ್ತರ ಸಂಘ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಸಮಾಜದ ಒಂದು ಭಾಗವಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿವೆ. ಸಂಘವು ನಿಧಿ ಸಂಗ್ರಾಹಕ್ಕಾಗಿ ಜಿಲ್ಲೆಯ ಹೆಮ್ಮೆಯ ಕಲೆ ಯಕ್ಷಗಾನವನ್ನು ಆಯ್ಕೆ ಮಾಡಿಕೊಂಡಿರುವುದು ಗಮನರ್ಹವಾಗಿದೆ. ಇದಕ್ಕೆ ಎಲ್ಲಾ ಕಲಾಭಿಮಾನಿಗಳ ಪ್ರೋತ್ಸಾಹ ಸಿಗಲಿದೆ. ಸಂಘದ ಯಾವುದೇ ಕಾರ್ಯ ಚಟುವಟಿಕೆಗಳಿಗೆ ಹಾಗೂ ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡುವುದೆಂದು ಹೇಳಿದರು.

Also Read  ಕಾರ್ಕಳ : ಕೊರೊನಾ ಸೋಂಕಿತ ವ್ಯಕ್ತಿ ಆತ್ಮಹತ್ಯೆಗೆ ಶರಣು

 

ಅತಿಥಿ ಭಾಗವಹಿಸಿದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜರ್ನಾಧನ ಗೌಡ ಪಣೆಮಜಲು ಮಾತನಾಡಿ ಕಡಬ ತಾಲೂಕು ಪತ್ರಕರ್ತರ ಸಂಘವು ಆರ್ಥಿಕ  ಕ್ರೋಢಿಕರಣಕ್ಕಾಗಿ ಒಂದು ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ನಮ್ಮ ದೇವಾಲಯದ ವಠಾರದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಸಂಘದ ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರು ಕಾರ್ಯಯೋಜನೆಗೆ ಪ್ರಾಮಾಣಿಕವಾಗಿ ದುಡಿದು ಯಶಸ್ವಿಗೊಳಿಸಲು ಶ್ರೀ ದೇವಿಯ ಅನುಗ್ರಹ ಸದಾ ಇರುತ್ತದೆ ಎಂದರು. ಇನ್ನೊರ್ವ ಅತಿಥಿ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸೀತಾರಾಮ ಪೊಸೊಳಿಕೆ ಮಾತನಾಡಿ ಪತ್ರಕರ್ತರ ಸಂಘವು ಬಹಳಷ್ಟು ಸಮಾಜಮುಖಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತಾ ಕಡಬ ತಾಲೂಕು ಅಬಿವೃದ್ದಿಗೆ ಶ್ರಮಿಸುತ್ತಿದೆ ಎಂದು ಹಾಕಿಕೊಂಡಿರುವ ಕಾರ್ಯಕ್ರಮಕ್ಕೆ ಕಡಬದ ಜನತೆ ಅಭೂತಪೂರ್ಣ ಸಹಕಾರ ನೀಡಲಿದ್ದಾರೆ ಎಂದರು.

ಶ್ರೀ ದುರ್ಗಾಂಬಿಕ ಭಜನಾ ಮಂಡಳಿ ಕಾರ್ಯದರ್ಶಿ ಮನೋಹರ್ ರೈ ಬೆದ್ರಾಜೆ , ನವದುರ್ಗಾ ಉದ್ಯಮಿ ಮೇದಪ್ಪ ಗೌಡ, ಸಾಮಾಜಿಕ ಕಾರ್ಯಕರ್ತರಾದ ತೋಮಸ್ ಇಡೆಯಾಳ , ನರೇಂದ್ರ ಪೆಲತ್ತೊಡಿ, ಶುಭಹಾರೈಸಿದರು. ಕಾರ್ಯಕ್ರಮಕ್ಕೂ ಮೊದಲು ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಕಾರ್ಯಕ್ರಮದ ಯಶಸ್ವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅರ್ಚಕ ಪ್ರಶಾಂತ್ ಭಟ್ ಪ್ರಾರ್ಥನೆ ಸಲ್ಲಿಸಿದರು. ಅತಿಥಿಗಳು ಟಿಕೆಟ್ ಖರೀದಿಸಿ ಪ್ರೋತ್ಸಾಹಿಸಿದರು. ಪತ್ರಕರ್ತರ ಸಂಘದ ಜತೆಕಾರ್ಯದರ್ಶಿ ತಸ್ಲಿಂ ಮರ್ದಾಳ, ಕೋಶಾಧಿಕಾರಿ ಪ್ರವೀಣ್ ರಾಜ್ ಕೊೈಲ, ಪತ್ರಕರ್ತರಾದ ವಿಜಯ ಕುಮಾರ್ ಕಡಬ, ಖಾದರ್ ಸಾಹೇಬ್ ಕಲ್ಲುಗುಡ್ಡೆ, ಮತ್ತಿತರರು ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಕಾರ್ಯದರ್ಶಿ ನಾಗರಾಜ್ ಎನ್.ಕೆ ಸ್ವಾಗತಿಸಿ ನಿರೂಪಿದರು, ಅಧ್ಯಕ್ಷ ಕೆ.ಎಸ್ ಬಾಲಕೃಷ್ಣ ಕೊೈಲ ವಂದಿಸಿದರು.

Also Read  ಮಂಗಳೂರು ವಿವಿ ಯಲ್ಲಿ ಇನ್ನೂ ನಡೆಯದ ಕನ್ನಡ ಪರೀಕ್ಷೆ..!!!

error: Content is protected !!
Scroll to Top