ಕಡಬ: ಕೇಂದ್ರದ ಬಜೆಟ್‍ನ ಕಿಸಾನ್ ಸಮ್ಮಾನ್ ಅಲ್ಲ ಅದು ಕಿಸಾನ್ ನಿರ್ನಾಮ್► ರೈತ ಸಂಘ ಲೇವಡಿ

(ನ್ಯೂಸ್ ಕಡಬ) newskadaba.comಕಡಬ,ಫೆ.06.ಕೇಂದ್ರ ಸರಕಾರ ಮಂಡಿಸಿರುವ ಬಜೆಟ್‍ನಲ್ಲಿ ರೈತರ ಖಾತೆ ನೇರವಾಗಿ 6000 ರೂ ಜಮೆ ಮಾಡುವ ಕಿಸಾನ್ ಸಮ್ಮಾನ್ ಯೋಜನೆ ರೈತರ ಅಭ್ಯುದಯಕ್ಕೆಪ್ರೇರಣೆಯಾಗುವುದಿಲ್ಲ, ಅದು ರೈತರ ಸಮ್ಮಾನ್ ಬದಲು ರೈತರ ನಿರ್ಮಾಮ್‍ಎಂದು ಗೋಚರಿಸುತ್ತದೆ, ಇದು ಸ್ವಾಭಿಮಾನಿ ರೈತರಿಗೆ ಮಾಡಿದ ಅಪಮಾನ ಎಂದು ರಾಜ್ಯ ರೈತ ಸಂಘ ಹಸಿರು ಸೇನೆಯ ಕಡಬ ತಾಲುಕು ಅಧ್ಯಕ್ಷ ವಿಕ್ಟರ್ ಮಾರ್ಟಿಸ್ ಲೇವಡಿ ಮಾಡಿದರು.

 

ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರೈತರಿಗಾಗಿ ಘೋಷಿಸಿರುವ ಕೇಂದ್ರ ಯೋಜನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ದೇಶದ ಪ್ರಧಾನಿಯವರು ರೈತರನ್ನು ಬಿಕ್ಷುಕರು ಎಂದು ಪರಿಗಣಿಸಿದ್ದಾರೆ ಇದು ಅವರಿಗೆ ಶೋಭೆ ತರುವಂತದ್ದಲ್ಲ, ಸಣ್ಣ ರೈತರಿಗೆ 6000 ರೂನ್ನು ಮೂರು ಕಂತುಗಳಲ್ಲಿ ಕೊಡುತ್ತೇವೆ ಎಂದು ಹೇಳಿದ್ದೀರಿ ಒಂದು ಕಂತಿಗೆ ಒಂದು ರೂ ಸೇರಿಸಿ 6003 ರೂ ನಿಮ್ಮ ಖಾತೆಗೆ ಹಾಕುತ್ತೇವೆ, ರೈತರ ಬಗ್ಗೆ ನಿಮಗಿರುವ ಚಿಂತನೆ ಬದಲಾಗಬೇಕು, ನಮಗೆ ನಿಮ್ಮ ಚಿಲ್ಲರೆ ಸಹಾಯ ಅಗತ್ಯವಿಲ್ಲ, ಇಂತಹ ಅಪಮಾನ ಸಹಿಸಲು ಸಾಧ್ಯವಿಲ್ಲ, ನಿಮ್ಮ ಸಾಲ ಮನ್ನಾ ನಮಗೆ ಅಗತ್ಯವಿಲ್ಲ, ನೀವು ನಮ್ಮ ಬೆಳೆದ ಉತ್ಪನ್ನಕ್ಕೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಸರಿಯಾದ ಮಾರುಕಟ್ಟೆ ಒದಗಿಸಿಕೊಡಿ ಎಂದರು.

ಕೇಂದ್ರ ಸರಕಾರ ನಮಗೆ ಕಗ್ಗಂಟಾಗಿದೆ, ಸ್ವಾಮಿನಾಥನ್ ವರದಿಯನ್ನು ತಕ್ಷಣ ಜಾರಿಗೆ ತನ್ನಿ, ರಾಜ್ಯದಲ್ಲಿ ರೈತರನ್ನು ವಿಧಾನ ಸೌಧಕ್ಕೆ ಕರೆದು ರೈತರ ಕುಂದುಕೊರತೆಗಳನ್ನು ಆಲಿಸಿ ಬಜೆಟ್ ಮಂಡಿಸಲು ಮುಂದಾಗಿರುವ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ನೋಡಿ ಪ್ರಧಾನಿಯವರು ಪಾಠ ಕಲಿಯಲಿ ಎಂದು ಸಲಹೆ ನೀಡಿದರು. ರೈತ ಸಮ್ಮಾನ್ ಯೋಜನೆಗೆ ಯಾರೂ ದಾಖಲೆಗಳನ್ನು ನೀಡಬಾರದು ಎಂದು ಮನವಿ ಮಾಡಿದರು. ಇದೀಗ ವಿದ್ಯುತ್ ವೋಲ್ಟೇಜ್ ಸಮಸ್ಯೆ ಉಂಟಾಗಿದೆ, ರೈತರು ಇದರಿಂದ ಸಂಕಷ್ಟಲದಲಿದ್ದಾರೆ ತಕ್ಷಣ ಸಮಸ್ಯೆ ಪರಿಹರಿಸಬೇಕು ಎಂದು ಅವರು ಅಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಹೊನ್ನಪ್ಪ ಗೌಡ ಪರಣೆ, ಈಶ್ವರ ಗೌಡ ಪಾಲೆಚ್ಚಾರು, ರೊನಾಲ್ಡ್ ವೇಗಸ್ ರಾಮಕುಂಜ, ವಸಂತ ಗೌಡ ಕುಂಟ್ಯಾಣ, ತಿಮ್ಮಪ್ಪ ಗೌಡ ಕುಟ್ರುಪ್ಪಾಡಿ, ಇಬ್ರಾಹಿಂ ಇಚ್ಲಂಪಾಡಿ, ಸುದರ್ಶನ್ ಎನ್ ಇಚ್ಲಂಪಾಡಿ, ಸೆಲ್ವಿ ಅಲಾರ್ಮೆ, ನಿವೃತ್ತ ಶಿಕ್ಷಕ ಈಶ್ವರ ಗೌಡ ಹೊಸಮಠ ಮತ್ತಿತರರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group