ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ವಿಧಿವಶ

(ನ್ಯೂಸ್ ಕಡಬ) newskadaba.com ನವದೆಹಲಿ,ಜ.29.  ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ (ಜೂನ್ 03, 1930 – ಜನವರಿ 29, 2019) ಮಂಗಳವಾರ ಬೆಳಗ್ಗೆ ನವದೆಹಲಿಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.

 

ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಅವರು ಅಲ್ಝಮೈರ್ ಕಾಯಿಲೆಯಿಂದ ಬಳಲುತ್ತಿದ್ದರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದ ಫರ್ನಾಂಡಿಸ್ ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಾಮಾಜಿಕ ಹೋರಾಟಕ್ಕೆ ಧುಮುಕಿದ್ದರು.ಆಗಸ್ಟ್ 2009 ರಿಂದ ಜುಲೈ 2010 ರವರೆಗೆ ರಾಜ್ಯ ಸಭಾ ಸದಸ್ಯರಾಗಿ ಅವರು ಕೊನೆಯದಾಗಿ ಸಂಸತ್ತಿನಲ್ಲಿ ಕಾಣಿಸಿಕೊಂಡಿದ್ದರು. ನಂತರ ರಾಜಕೀಯದಿಂದ ದೂರವುಳಿದ ಅವರು, ಯಾರನ್ನೂ ಗುರುತಿಸುವ ಸ್ಥಿತಿಯಲ್ಲಿರಲಿಲ್ಲ.ಸಮಾಜವಾದದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಫರ್ನಾಡಿಸ್, ಜನತಾ ದಳದ ಮುಖಂಡರಾಗಿ ನಂತರ ಸಮತಾ ಪಕ್ಷವನ್ನು ಕಟ್ಟಿದ್ದರು. ವಾಜಪೇಯಿ ಅವಧಿಯಲ್ಲಿ ರಕ್ಷಣಾ ಸಚಿವರಾಗಿದ್ದರಲ್ಲದೆ, ಸಂಪರ್ಕ, ಕೈಗಾರಿಕೆ, ರೈಲ್ವೇ ಖಾತೆಗಳನ್ನೂ ನಿರ್ವಹಿಸಿದ ಅನುಭವ ಪಡೆದಿದ್ದರು.

error: Content is protected !!

Join the Group

Join WhatsApp Group