ಶಕ್ತಿನಗರ: ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪಿ.ಯು ಕಾಲೇಜಿನಲ್ಲಿ ಗಣರಾಜ್ಯೋತ್ಸವ

(ನ್ಯೂಸ್ ಕಡಬ) newskadaba.com ಮಂಗಳೂರು,ಜ.28.ಮಂಗಳೂರು: ಶಕ್ತಿನಗರದ ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪಿ.ಯು ಕಾಲೇಜಿನಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರಿನ ಬೆಸೆಂಟ್ ಸಂಸ್ಥೆಗಳ ಆಡಳಿತ ಮಂಡಳಿ ವಿಮೆನ್ಸ್ ನ್ಯಾಶನಲ್ ಎಜ್ಯುಕೇಶನ್ ಸೊಸೈಟಿಯ ಶೈಕ್ಷಣಿಕ ಸಲಹೆಗಾರರಾಗಿರುವ ಶ್ರೀಮತಿ ಲಲಿತಾ ಮಲ್ಯ ಮಾತನಾಡುತ್ತಾ ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಕಾನೂನು, ನೀತಿ, ನಿಯಮಗಳನ್ನು ಚಾಚೂ ತಪ್ಪದೆ ಭಾಗವಹಿಸಬೇಕಲ್ಲದೆ ತಾನು ದೇಶದ ಪ್ರಗತಿಗೆ ಹೇಗೆ ಸಹಕಾರಿಯಾಗಬೇಕೆಂಬುದರ ಕುರಿತಾಗಿ ಕ್ಷಣ ಕ್ಷಣವೂ ಯೋಚಿಸಿಬೇಕು. ವಿಶಾಲ ದೇಶವನ್ನು ತೆಗೆದುಕೊಂಡಾಗ ವ್ಯಕ್ತಿ ಮುಖ್ಯ ಅಲ್ಲ, ಸಮಷ್ಟಿಯೇ ಮುಖ್ಯ ಎಂಬುದನ್ನು ನಾವು ತಿಳಿದುಕೊಳ್ಳಬೇಕು ಎಂದರು.

Also Read  ‘ಕುಡಿಯುವ ನೀರು ಪೂರೈಕೆಗೆ ಸೂಕ್ತ ಕ್ರಮ’

 ಆರಂಭದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ.ಸಿ. ನಾೈಕ್ ಧ್ವಜಾರೋಹಣ ಗೈದರು. ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭಾಕರ ಜಿ.ಎಸ್ ಸ್ವಾಗತಿಸಿದರು. ಶಾಲಾ ಪ್ರಾಂಶುಪಾಲೆ ವಿದ್ಯಾ ಜಿ.ಕಾಮತ್ ಪ್ರಸ್ತಾವನೆ ಗೈದರು. ಶಕ್ತಿ ಎಜುಕೇಶನ್ ಟ್ರಸ್ಟಿನ ಟ್ರಸ್ಟಿ ಡಾ. ಮುರಳೀಧರ ನಾೈಕ್, ಸಂಸ್ಥೆಯ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಅಭಿವೃದ್ಧಿ ಅಧಿಕಾರಿ ನಸೀಮ್ ಬಾನು, ಪ್ರಧಾನ ಸಲಹೆಗಾರ ರಮೇಶ್ ಕೆ., ಗೋಪಾಲಕೃಷ್ಣ ಪ್ರಿ – ಸ್ಕೂಲಿನ ಮುಖ್ಯಸ್ಥೆ ನೀಮಾ ಸಕ್ಸೇನಾ ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರೀಮತಿ ಶಿಲ್ಪಾ ನಿರೂಪಿಸಿದರು. ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

Also Read  ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆ ➤ ಬೋಧಕ ವಿಭಾಗಕ್ಕೆ ನೇರ ಸಂದರ್ಶನ

 

error: Content is protected !!
Scroll to Top