ಕಡಬ: ಹೊನಲು ಬೆಳಕಿನ ಮ್ಯಾಟ್ ಅಂಕಣದ ಮುಕ್ತ ಕಬಡ್ಡಿ ಪಂದ್ಯಾಟ ಉಜಿರೆ ಎಸ್.ಡಿ.ಎಂ. ಪ್ರಥಮ, ಬಂಟ್ವಾಳ ಭದ್ರ ಚಾಲೆಂಜರ್ಸ್ ದ್ವಿತೀಯ

(ನ್ಯೂಸ್ ಕಡಬ) newskadaba.com ಕಡಬ, ಜ.28.  ಕಡಬ ಮಧುರ ಟೂರಿಸ್ಟ್ ವ್ಯಾನ್ ಮತ್ತು ಟ್ರಾಕ್ಸ್ ಚಾಲಕ-ಮಾಲಕರ ಸಂಘ, ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಯೋಗದೊಂದಿಗೆ ಗಣರಾಜ್ಯೋತ್ಸವ ಪ್ರಯುಕ್ತ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಅಂಕಣದ ಮುಕ್ತ ಕಬಡ್ಡಿ ಪಂದ್ಯಾಟ ಹಾಗೂ ಸನ್ಮಾನ ಕಾರ್ಯಕ್ರಮ ಜ.25ರಂದು ಕಡಬ ಹೆಚ್.ಪಿ. ಪೆಟ್ರೋಲ್ ಬಂಕ್ ಬಳಿಯ ಎಸ್.ಆರ್. ಲೇಔಟ್ ಕ್ರೀಡಾಂಗಣದಲ್ಲಿ ನಡೆಯಿತು.

ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಯು ನಮಗೆ ಮನೋರಂಜನೆ ಜೊತೆಗೆ ದೈಹಿಕ ಆರೋಗ್ಯ ಕಾಪಾಡಲು ಸ್ಪೂರ್ತಿದಾಯಕವಾಗಿದ್ದು, ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಇಂದು ವಿಶೇಷ ಸ್ಥಾನಮಾನಗಳೊಂದಿಗೆ ಎಲ್ಲೆಡೆ ಆಯೋಜನೆಗೊಳ್ಳುತ್ತಿದ್ದು, ಕಬಡ್ಡಿಯಿಂದ ಕಡಬದ ಕ್ರೀಡಾಪಟುಗಳು ಉತ್ತಮ ಪ್ರತಿಭೆಗಳಾಗಿ ಮೂಡಿ ಬರಲಿ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಡಬ ಪೊಲೀಸ್ ಠಾಣಾ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ ಮಾತನಾಡಿ, ಪ್ರೋ ಕಬಡ್ಡಿ ಆರಂಭವಾದ ಬಳಿಕ ಕಬಡ್ಡಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದ್ದು, ಸಂಘಟನೆಗಳ ಪ್ರಯೋಜಕತ್ವದಲ್ಲಿ ಆಯೋಜಿಸುವ ಕಬಡ್ಡಿ ಪಂದ್ಯಾಟದಿಂದ ಸಮಾಜದಲ್ಲಿ ಸಹೋದರತೆ ಬೆಳೆಯಲಿ ಎಂದರು. ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ, ಸಂಘಟನೆಗಳು ಆಯೋಜಿಸುವ ಇಂತಹ ಕಬಡ್ಡಿ ಪಂದ್ಯಾಟದಿಂದ ಕ್ರೀಡಾ ಪ್ರತಿಭೆಗಳು ಬೆಳಗುವುದರೊಂದಿಗೆ, ಕ್ರೀಡೆಯು ಸಹಕಾರಿ, ಸಹೋದರತೆಯಗೆ ಸ್ಪೂರ್ತಿದಾಯಕವಾಗಲಿ ಎಂದರು. ಜಿ.ಪಂ.ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಮಾತನಾಡಿ, ಗ್ರಾಮೀಣ ದೇಶಿ ಕ್ರೀಡೆ ಕಬಡ್ಡಿ ಆಟ ಅಳಿಯುವ ಸಂದರ್ಭದಲ್ಲಿ, ಯುವಕರು ಪ್ರೋ ಕಬಡ್ಡಿ ಮೂಲಕ ಎಲ್ಲೆಡೆ ಕಬಡ್ಡಿ ಬಗ್ಗೆ ಆಸಕ್ತಿ ಉಂಟುಮಾಡಿ ಇಂದು ಎಲ್ಲೆಡೆ ಆಯೋಜನೆಗೊಳ್ಳುತ್ತಿರುವ ಮೂಲಕ ಉಳಿದಿದೆ, ಕಡಬದ ಟೂರಿಸ್ಟ್ ವ್ಯಾನ್ ಮತ್ತು ಟ್ರಾಕ್ಸ್‍ನ ಚಾಲಕ ಮಾಲಕರು ಸೇರಿಕೊಂಡು ಸಂಘವನ್ನು ಪ್ರಾರಂಭಿಸಿ ಎಲ್ಲರೂ ಕೂಡಿ ಕಬಡ್ಡಿ ಆಯೋಜಿಸಿರುವುದು ಸಂತೋಷದಾಯಕ ಎಂದರು.

ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಹಾಜಿ ಎಸ್.ಅಬ್ದುಲ್ ಖಾದರ್, ಮಾತನಾಡಿ ಕಬಡ್ಡಿ ಪಂದ್ಯಾಟ ಆಯೋಜಿಸುವುದರೊಂದಿಗೆ ಚಾಲಕರಾಗಿ ದುಡಿದ ಸಾಧಕರನ್ನು ಸನ್ಮಾನಿಸುತ್ತಿರುವುದು ಚಾಲಕ ವೃತ್ತಿಗೆ ನೀಡಿದ ಗೌರವವಾಗಿದ್ದು, ಇಂದು ಇಲ್ಲಿ ನಡೆಸಲ್ಪಡುತ್ತಿರುವ ಕಬಡ್ಡಿ ಪಂದ್ಯಾಟ ಕಡಬ ಚಾಲಕರ ಒಗ್ಗಟ್ಟಿನ ಪ್ರತಿರೂಪ ಎಂದ ಅವರು ಕಬಡ್ಡಿ ಇತಿಹಾಸವನ್ನು ತೆರೆದಿಟ್ಟರು.ತಾ.ಪಂ.ಮಾಜಿ ಅಧ್ಯಕ್ಷೆ ಪುಲಸ್ತ್ಯಾ ರೈ ಮಾತನಾಡಿ, ವಾಹನ ಚಾಲಕ, ಮಾಲಕರು ನಿಜವಾದ ಸಾರಥಿಗಳಾಗಿದ್ದು, ಅವರ ಕರ್ತವ್ಯದಲ್ಲಿ ಪ್ರಯಾಣಿಕರನ್ನು ಅವರ ನಿರ್ದಿಷ್ಟ ಸ್ಥಳಕ್ಕೆ ತಲುಪಿಸಲು ಚಾಲಕರ ವೃತ್ತಿ ನಿಷ್ಠೆಯೊಂದಿಗೆ, ಏಕಾಗ್ರತೆ ಮುಖ್ಯವಾಗಿದ್ದು, ಕಡಬದಲ್ಲಿ ಇಂದು ಮಧುರ ಟೂರಿಸ್ಟ್ ವ್ಯಾನ್ ಮತ್ತು ಟ್ರಾಕ್ಸ್ ಚಾಲಕ-ಮಾಲಕರ ಸಂಘದ ವತಿಯಿಂದ ಕಬಡ್ಡಿ ಆಯೋಜಿಸಿದ್ದು ಉತ್ತಮ ಬೆಳವಣಿಗೆ ಎಂದರು.

ಮಧುರ ಟೂರಿಸ್ಟ್ ವ್ಯಾನ್ ಮತ್ತು ಟ್ರಾಕ್ಸ್ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಲೋಕೆಶ್ ಪಿಜಕ್ಕಳ ಅಧ್ಯಕ್ಷತೆ ವಹಿಸಿ, ಕಬಡ್ಡಿಯನ್ನು ಉತ್ತಮ ರೀತಿಯಲ್ಲಿ ನಡೆಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಅಮೆಚ್ಚೂರು ಕಬಡ್ಡಿ ಅಸೋಸಿಯೇಶನ್ ಉಪಾಧ್ಯಕ್ಷ ಮೊೈದಿನ್ ಮದರ್ ಇಂಡಿಯಾ, ಅರಣ್ಯ ರಕ್ಷಕ ಕಡಬ ಜೆಸಿಐ ಅಧ್ಯಕ್ಷ ರವಿಚಂದ್ರ ಪಡುಬೆಟ್ಟು, ಗ್ರಾ.ಪಂ. ಸದಸ್ಯರಾದ ಹಾಜಿ ಕೆ.ಎಂ.ಹನೀಫ್, ಆದಂ ಕುಂಡೋಳಿ, ಕುಟ್ರುಪಾಡಿ ಗ್ರಾ.ಪಂ.ಸದಸ್ಯಮಹಮ್ಮದಾಲಿ ಸಂದರ್ಭೋಚಿತವಾಗಿ ಮಾತನಾಡಿದರು. ಕಡಬ ಎಸ್.ಆರ್.ಲೇಔಟ್‍ನ ಜಯಚಂದ್ರ ರೈ ಕುಂಟೋಡಿ ತೆಂಗಿನ ಕಾಯಿ ಒಡೆಯುವ ಮೂಲಕ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ ನೀಡಿದರು.ಕಡಬ ವೈಧ್ಯಾದಿಕಾರಿ ಡಾ| ತ್ರಿಮೂರ್ತಿ, ಕಡಬ ಆದಿತ್ಯ ಪೆಟ್ರೋಲ್ ಪಂಪ್ ಮ್ಹಾಲಕ ಇ.ಮನೋಹರ್, ಕಡಬ ಗ್ರಾ.ಪಂ.ಸದಸ್ಯ ಶರೀಫ್ ಎ.ಎಸ್., ಮಧುರ ಟೂರಿಸ್ಟ್ ವ್ಯಾನ್ ಮತ್ತು ಟ್ರಾಕ್ಸ್ ಚಾಲಕ-ಮಾಲಕರ ಸಂಘದ ಗೌರವಾಧ್ಯಕ್ಷ ಗೋಪಾಲ ನಾೈಕ್ ಮೇಲಿನಮನೆ, ಮಾಜಿ ಅಧ್ಯಕ್ಷ ನಿತ್ಯಾನಂದ ಪಡಿಯಾರ್ ಉಪ್ಪಿನಂಗಡಿ, ಪತ್ರಕರ್ತ ಖಾದರ್ ಸಾಹೇಬ್, ಸತೀಶ್ ನಾೈಕ್ ಮೇಲಿನಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಖಲಂದರ್ ಶೇಡಿಗುಂಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೃಷ್ಣಪ್ಪ ಮೂರಾಜೆ ವಂದಿಸಿದರು. ದಿವಾಕರ್ ಉಪ್ಪಳ ಕಬಡ್ಡಿಯ ವೀಕ್ಷಣಾ ವಿವರಣೆ ಮಾಡಿದರು. ದುರ್ಗಾಮಾತಾ ಟೆಂಪೊದ ಗಣೇಶ್ ಪೆಲತ್ತೋಡಿ, ಸ್ಕೈ ಫನ್ ಟೆಂಪೊದ ಬಶೀರ್ ಕಳಾರ, ಷಣ್ಮುಖ ಟೆಂಪೊ ಷಣ್ಮುಖ ಗೌಡ, ಸೂರ್ಯ ತಊಫಾನ್ ಸುಭಾಷ್, ದೇವರಾಯ ತೂಫಾನ್, ರಾಜಲಕ್ಷ್ಮೀ ಟೆಂಪೊ ದಯಾನಂದ ಗೌಡ, ಮಧುರ ತೂಫಾನ್ ಯಶೋಧರ, ಮಣಿಕಂಠ ತೂಫಾನ್ ಗಣೇಶ್ ಗೌಡ, ಶ್ರೀಲಕ್ಷ್ಮೀ ತೂಫಾನ್ ಕಮಲಾಕ್ಷ, ರಾಯಲ್ ತೂಫಾನ್ ಖಾದರ್, ಹಾರೀಸ್ ಹಳೆಸ್ಟೇಷನ್ ಮೊದಲಾದವರು ಅತಿಥಿಗಳನ್ನು ಹೂಗುಚ್ಚ ನೀಡಿ ಗೌರವಿಸಿದರು. ಕಡಬ ತರಕಾರಿ ವ್ಯಾಪಾರಿ ಮುನೀರ್ ಸೇರಿದಂತೆ ಮಧುರ ಟೂರಿಸ್ಟ್ ವ್ಯಾನ್ ಮತ್ತು ಟ್ರಾಕ್ಸ್ ಚಾಲಕ-ಮಾಲಕರ ಸಂಘದ ಪದಾಧಿಕಾರಿಗಳು, ಸದಸ್ಯರು ಕಬಡ್ಡಿ ಆಟದ ಸಂಪೂರ್ಣ ಯಶಸ್ಸಿಗೆ ಸಹಕರಿಸಿದರು.

ಸ್ಪರ್ದೆಯ ಫಲಿತಾಂಶ:
ಎಸ್.ಡಿ.ಎಂ. ಉಜಿರೆ ಪ್ರಥಮ ಸ್ಥಾನ ಪಡೆದು ರೂ. 15,019 ಹಾಗೂ ಗಣರಾಜ್ಯೋತ್ಸವ ಟ್ರೋಫಿ, ಬ್ರದರ್ ಚಾಲೆಂಜರ್ಸ್ ಬಂಟ್ವಾಳ ದ್ವಿತೀಯ ಸ್ಥಾನ ಪಡೆದು ರೂ. 10,019 ನಗದು ಹಾಗೂ ಟ್ರೋಫಿ, ಪ್ರೆಂಡ್ಸ್ ಕ್ಲಬ್ ಕಡಬ ತೃತೀಯ ಸ್ಥಾನ ಪಡೆದು ರೂ. 5,019 ನಗದು ಹಾಗೂ ಟ್ರೋಫಿ, ತತ್ವಮಸಿ ಬಗಂಬಿಲ ಚತುರ್ಥ ಸ್ಥಾನ ಪಡೆದು ರೂ. 5,019 ನಗದು ಹಾಗೂ ಟ್ರೋಫಿ ಪ್ರಶಸ್ತಿಗಳನ್ನು ಪಡೆದುಕೊಂಡವು. ಎಸ್.ಡಿ.ಎಂ. ಕಾಲೇಜು ಉಜಿರೆಯ ಮಿಥಿನ್ ಕುಮಾರ್ ಬೆಸ್ಟ್ ಆಲ್‍ರೌಂಡರ್ ಪ್ರಶಸ್ತಿ, ಎಸ್.ಡಿ.ಎಂ. ಉಜಿರೆಯ ಪ್ರತಾಪ್ ಬೆಸ್ಟ್ ರೈಡರ್ ಪ್ರಶಸ್ತಿ, ಚಾಲೆಂಜರ್ಸ್‍ನ ರಂಜಿತ್ ಭದ್ರ ಬೆಸ್ಟ್ ಡಿಫರೆಂಟ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ವಿಜೇತ ತಂಡಗಳಿಗೆ ನಗದು ಹಾಗೂ ಟ್ರೋಫಿ ಯನ್ನು ವಿತರಿಸಲಾಯಿತು.

error: Content is protected !!

Join the Group

Join WhatsApp Group