ಇಂದು ಸಬಳೂರು ಶ್ರೀರಾಮ ಭಜನಾ ಮಂಡಳಿಯ ದಶಮಾನೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಜ.28. ಕಡಬ ತಾಲೂಕಿನ ಕೊೈಲ ಗ್ರಾಮದ ಸಬಳೂರು ಅಯೋಧ್ಯಾನಗರದ ಶ್ರೀ ರಾಮ ಭಜನಾ ಮಂಡಳಿಯ ದಶಮಾನೋತ್ಸವ ಕಾರ್ಯಕ್ರಮ ಜನವರಿ 28 ರಂದು ನಡೆಯಲಿದೆ.ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಸಾಯಂಕಾಲ ಶ್ರೀ ಸತ್ಯನಾಯಾರಣ ದೇವರ ಪೂಜೆ ಹಾಗೂ ಭಜನಾ ಕಾರ್ಯಕ್ರಮ, ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಭಜನಾ ಮಂಡಳಿಯ ಗೌರವಾಧ್ಯಕ್ಷ ಬೆಳಿಯಪ್ಪ ಗೌಡ ತಿಮರಗುಡ್ಡೆ ಅಧ್ಯಕ್ಷತೆವಹಿಸಲಿದ್ದಾರೆ.

ಧಾರ್ಮಿಕ ವಿದ್ವಾಂಸ ಕಶೆಕೋಡಿ ಸೂರ್ಯನಾರಾಯಣ ಭಟ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸುಳ್ಯ ಶಾಸಕ ಎಸ್.ಅಂಗಾರ, ಮೂಡಬಿದರೆ ಮಕ್ಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹಶಿಕ್ಷಕ ಪರಮೇಶ್ವರ ಗೌಡ ಸಬಳೂರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಬಳೂರು ಒಕ್ಕೂಟ ಅಧ್ಯಕ್ಷ ರಾಜೀವ ಗೌಡ ಪಟ್ಟೆಸಬಳೂರು, ಸಬಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್.ಡಿಎಂ.ಸಿ ಅಧ್ಯಕ್ಷ ಶೇಖರ ಗೌಡ ಪಾಪುದಮಂಡೆ ಉಪಸ್ಥಿತರಿರುವರು, ಸಭಾಕಾರ್ಯಕ್ರಮದ ಬಳಿಕ ಅನ್ನ ಸಂತರ್ಪಣೆ ನಡೆದ ಯಕ್ಷಗಾನ ಬಯಲಾಟ ಬನತ ಬಂಗಾರ್ ನಡೆಯಲಿದೆ ಎಂದು ಭಜನಾ ಮಂಡಳಿಯ ಅಧ್ಯಕ್ಷ ರಾಮಚಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದೆ.

Also Read  ಗುಜರಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ ➤ ಲಕ್ಷಾಂತರ ರೂಪಾಯಿ ನಷ್ಟ

error: Content is protected !!
Scroll to Top