(ನ್ಯೂಸ್ ಕಡಬ) newskadaba.com ಕಡಬ, ಜ.28.ಗಂಡಿಬಾಗಿಲು ಹಿಮಾಯತುಲ್ ಇಸ್ಲಾಂ ಮದ್ರಸದ ಎಸ್.ಕೆ.ಎಸ್.ಬಿ.ವಿ. ವತಿಯಿಂದ ಗಂಡಿಬಾಗಿಲು ಮಸೀದಿಯಲ್ಲಿ ಗಣರಾಜ್ಯೋತ್ಸವ ಸಮಾರಂಭ ನಡೆಯಿತು.
ಮಸೀದಿಯ ಖತೀಬ್ ಹಾದಿ ಅನಸ್ ತಂಙಳ್ ಧ್ವಜಾರೋಹಣ ನೆರವೇರಿಸಿದರು.
ಸಮಾರಂಭದಲ್ಲಿ ಮಸೀದಿ ಅಧ್ಯಕ್ಷ ಹಸೈನಾರ್ ಹಾಜಿ, ಕಾರ್ಯದರ್ಶಿ ಜಿ. ಮಹಮ್ಮದ್ ರಫೀಕ್, ಪದಾಧಿಕಾರಿಗಳಾದ ಅಬ್ದುಲ್ ರಜಾಕ್ ಮರ್ವೇಲ್, ಜಿ. ಅಬ್ದುಲ್ ರಜಾಕ್, ಎಸ್.ಕೆ.ಎಸ್.ಎಸ್.ಎಫ್. ಕಾರ್ಯದರ್ಶಿ ರಾಹಿಲ್ ಉಪಸ್ಥಿತಿದ್ದರು.ಮದ್ರಸದ ಸದರ್ ಮುಅಲ್ಲಿಂ ಮೂಸಾ ಮುಸ್ಲಿಯಾರ್ ಸ್ವಾಗತಿಸಿ, ಮುಅದ್ದಿಂ ರಫೀಕ್ ಮುಸ್ಲಿಯಾರ್ ವಂದಿಸಿದರು.