(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜು.30. ಅಕ್ರಮವಾಗಿ ಜಾನುವಾರು ಮಾಂಸ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಉಪ್ಪಿನಂಗಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಭಾನುವಾರದಂದು ನಡೆದಿದೆ.
ಬಂಧಿತ ಆರೋಪಿಗಳನ್ನು ತಣ್ಣೀರುಪಂಥ ನಿವಾಸಿಗಳಾದ ಬಶೀರ್ (32) ಹಾಗೂ ಜೈನುದ್ದೀನ್ (28) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಇಳಂತಿಲ ಕ್ರಾಸ್ ಬಳಿ ಮಾರುತಿ ಓಮ್ನಿಯೊಂದನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರಲ್ಲಿ 300 ಕೆ.ಜಿ. ಜಾನುವಾರು ಮಾಂಸ ಪತ್ತೆಯಾಗಿದೆ. ಓಮ್ನಿ ಕಾರು ಹಾಗೂ ಜಾನುವಾರು ಮಾಂಸವನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದನದ ಮಾಂಸ ಹಾಗೂ ಓಮ್ನಿಯ ಬೆಲೆ ಸುಮಾರು 2.45 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಆರೋಪಿಗಳು ಈ ಮಾಂಸವನ್ನು ಕುಪ್ಪೆಟ್ಟಿಯಿಂದ ದೇರಳಕಟ್ಟೆಗೆ ಕೊಂಡೊಯ್ಯುತ್ತಿದ್ದರೆನ್ನಲಾಗಿದೆ.