ಬಂಟ್ವಾಳ: ಸ್ನಾನಕ್ಕೆಂದು ನದಿಗಿಳಿದ ಬಾಲಕ ನೀರುಪಾಲು



(ನ್ಯೂಸ್ ಕಡಬ) newskadaba.com ಮಂಗಳೂರು, ಜ.08. ಸ್ನಾನಕ್ಕೆಂದು ತೆರಳಿದ ಐವರು ಬಾಲಕರ ಪೈಕಿ ಓರ್ವ ಬಾಲಕ ನೀರುಪಾಲಾದ ಘಟನೆ ಮಂಗಳವಾರದಂದು ಬಂಟ್ವಾಳದಲ್ಲಿ ನಡೆದಿದೆ.







ಮೃತ ಬಾಲಕನನ್ನು ಬಂಟ್ವಾಳ ತಾಲೂಕಿನ ಅಮ್ಮೆಮ್ಮಾರ್ ನಿವಾಸಿ ಅಬ್ದುಲ್ ಬಶೀರ್ ಎಂಬವರ ಪುತ್ರ ಅಬ್ದುಲ್ ಸತ್ತಾರ್(13) ಎಂದು ಗುರುತಿಸಲಾಗಿದೆ. ಮೃತ ಬಾಲಕ ತನ್ನ ನಾಲ್ವರು ಸ್ನೇಹಿತರೊಂದಿಗೆ ಸಮುದ್ರದ ಹಿನ್ನೀರಿನಲ್ಲಿ ಸಿಗುವ ಕಪ್ಪೆ ಚಿಪ್ಪುಗಳನ್ನು ತೆಗೆದು ಕೊಂಡು ಬರಲೆಂದು ದೊಣಿಯ ಮೂಲಕ ನದಿಯ ಮತ್ತೊಂದು ದಡಕ್ಕೆ ತೆರಳಿದ್ದು, ಬಳಿಕ ಸ್ನಾನಕ್ಕೆಂದು ನೀರಿಗೆ ಇಳಿದಾಗ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಮಂಗಳೂರು ನಗರ ಕೊಣಾಜೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






error: Content is protected !!
Scroll to Top