ಸರ್ಕಾರಿ ನೌಕರರಿಗೆ ಕೊಡಮಾಡುವ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಜಿ ಅಹ್ವಾನ

(ನ್ಯೂಸ್ ಕಡಬ)newskadaba.com.ಮಂಗಳೂರು,ಜ.6. ಜಿಲ್ಲಾವಾರು, ಇಲಾಖಾವಾರು ಮತ್ತು ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಈ ಹಿನ್ನಲೆಯಲ್ಲಿ ಜನವರಿ 26ರಂದು ಪ್ರಶಸ್ತಿ ನೀಡುವ ಕುರಿತು ರಾಜ್ಯ ಮಟ್ಟದ ಮಾದರಿಯನ್ನೇ ಜಿಲ್ಲಾ ಮಟ್ಟದಲ್ಲೂ ನೀಡಲು ಅನುಸರಿಸುತ್ತಿದ್ದು ಒಟ್ಟು 6 ಅರ್ಹ ಜನರು ಗ್ರೂಪ್ 1, ಗ್ರೂಪ್ 2, ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರರಿಗೆ ನೀಡಲಾಗುವುದು. ಜಿಲ್ಲಾವಾರು ಒಟ್ಟು 6 ಪ್ರಶಸ್ತಿಗಳಿದ್ದು, ಗೃಹ ಇಲಾಖೆ ಮತ್ತು ಶಿಕ್ಷಣ ಇಲಾಖೆಯನ್ನು ಹೊರತುಪಡಿಸಿ ಉಳಿದ ಎಲ್ಲ ಇಲಾಖೆಗಳು ಮತ್ತು ಅದರ ಲಿಪಿಕ ಸಿಬ್ಬಂದಿ ವರ್ಗ ಪ್ರಶಸ್ತಿ ಯೋಜನೆಯಲ್ಲಿ ಸೇರಿದೆ. ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡಲಾಗುವುದು. ಈ ಯೋಜನೆಯು ಭಾರತೀಯ ಸೇವಾ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ.

Also Read  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್‍ಗಳಿಗೆ 2019 ರ ಸಾಲಿನ ನಡೆಯಲಿರುವ ಉಪ ಚುನವಾಣೆಗಳು➤ ಶಸ್ತ್ರಾಸ್ತ್ರಗಳ ಠೇವಣಿ

ಇದರಂತೆ ತಮ್ಮ ವ್ಯಾಪ್ತಿಯಲ್ಲಿ ಬರುವ ಅರ್ಹ ಅಧಿಕಾರಿ/ ಸಿಬ್ಬಂದಿಗಳ/ ನೌಕರರ ವಿವರವನ್ನು ಸೂಕ್ತ ಶಿಫಾರಸ್ಸಿನೊಂದಿಗೆ ಹಾಗೂ ಪೂರಕ ದಾಖಲೆಗಳೊಂದಿಗೆ ನಾಮನಿರ್ದೇಶನ ಮಾಡಲು ತಿಳಿಸಿದೆ. ನಾಮ ನಿರ್ದೇಶನ ಮಾಡುವ ಸಂದರ್ಭದಲ್ಲಿ ಶಿಫಾರಸ್ಸು ಮಾಡಲ್ಪಡುವ ಅಧಿಕಾರಿ/ ಸಿಬ್ಬಂದಿ ಸಾಧನೆ ಬಗ್ಗೆ ಸ್ಪಷ್ಟವಾಗಿ ಲಗತ್ತಿಸಿದ ನಮೂನೆಯಲ್ಲಿ ನಮೂದಿಸಿ ಸಲ್ಲಿಸಲು ಹಾಗೂ ಶಿಫಾರಸ್ಸನ್ನು ದಿನಾಂಕ 10.1.2019ರೊಳಗೆ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಲು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top