ಗೃಹರಕ್ಷಕರ ಪಶ್ವಿಮ ವಲಯ ವೃತ್ತಿಪರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ

(ನ್ಯೂಸ್ ಕಡಬ)newskadaba.com.ಮಂಗಳೂರು,ಜ.4.ಗೃಹರಕ್ಷಕರ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ 2018 ಇದರ ಉದ್ಘಾಟನಾ ಸಮಾರಂಭ ದಿನಾಂಕ:04.01.2019, ಶುಕ್ರವಾರದಂದು ಪೊಲೀಸ್ ಪೇರೇಡ್ ಮೈದಾನದಲ್ಲಿ ನಡೆಯಿತು. ತುಕಡಿ ನಾಯಕರಾದ ಶ್ರೀ ವಸಂತ್ ಕುಮಾರ್ ಇವರ ನೇತೃತ್ವದಲ್ಲಿ ಅತಿಥಿಗಳಿಗೆ ಗೌರವ ವಂದನೆಯನ್ನು ನೀಡಲಾಯಿತು. ಕ್ರೀಡಾ ಜ್ಯೋತಿಯ ಆಗಮನವನ್ನು ಶ್ರೀ ಚೇತನ್, ಮೆಟಲ್ ಸಂಖ್ಯೆ 5, ಮಂಗಳೂರು ಘಟಕ ಇವರು ನಿರ್ವಹಿಸಿದರು. ಉಪ ಸಮಾದೇಷ್ಟರಾದ ಶ್ರೀ ರಮೇಶ್ ಇವರು ಪ್ರತಿಜ್ಞಾ ವಿಧಿ ಭೋದಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಟಿ.ಎನ್.ಶಿವಶಂಕರ, ಮುಖ್ಯ ಅಗ್ನಿಶಾಮಕಾಧಿಕಾರಿ, ಮಂಗಳೂರು ಪ್ರಾಂತ್ಯ ಇವರು ನೆರವೇರಿಸಿ ಮಾತನಾಡಿದ ಅವರು ತಾನು ಕೂಡ ಒಬ್ಬ ಒಳ್ಳೆಯ ಕ್ರೀಡಾಪಟುವಾಗಿದ್ದು, ಸಮವಸ್ತ್ರ ಧರಿಸುವ ಸಿಬ್ಬಂದಿಗಳಿಗೆ ಕ್ರೀಡೆಯೂ ಅತಿ ಅಗತ್ಯ ಎಂದು ನುಡಿದರು ಹಾಗೂ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ, ಸೋಲು ಗೆಲುವು ಮುಖ್ಯವಲ್ಲ ಎಂದು ನುಡಿದರು. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಮಾತನಾಡಿ ಗೃಹರಕ್ಷಕ ದಳದಲ್ಲಿ ಬೇರೆ ಬೇರೆ ವೃತ್ತಿಯಲ್ಲಿರುವವರಿದ್ದು, ಇವರೆಲ್ಲರಿಗೂ ದೈಹಿಕ ಹಾಗೂ ಮಾನಸಿಕ ದೃಡತೆಗಾಗಿ ಕ್ರೀಡೆ ಅವಶ್ಯಕ ಎಂದು ನುಡಿದರು. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಗೃಹರಕ್ಷಕರು ಉತ್ತಮ ಆಟ ಆಡಿ ಜಿಲ್ಲೆಯ ಘನತೆ ಹೆಚ್ಚಿಸಿ ಎಂದು ನುಡಿದರು.

Also Read  ವಿವಿಧ ವೃತ್ತಿಪರ ಕೋರ್ಸ್ –ಅರ್ಜಿ ಆಹ್ವಾನ

ಶ್ರೀ ರಮೇಶ್ ಡೆಪ್ಯೂಟಿ ಕಮಾಂಡೆಂಟ್, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಇವರು ಸ್ವಾಗತಿಸಿದರು. ಶ್ರೀ ಮಾರ್ಕ್‍ಶೇರ್, ಘಟಕಾಧಿಕಾರಿ, ಮಂಗಳೂರು ಘಟಕ ಇವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮ ನಿರ್ವಹಣೆಯನ್ನು ಶ್ರೀಮತಿ ಶುಭ ಇವರು ನಿರ್ವಹಿಸಿದರು. ಕಛೇರಿ ಅಧೀಕ್ಷರಾದ ರತ್ನಾಕರ್, ಪ್ರಥಮ ದರ್ಜೆ ಸಹಾಯಕರಾದ ಅನಿತಾ.ಟಿ.ಎಸ್ ವಿವಿಧ ಘಟಕಗಳ ಘಟಕಾಧಿಕಾರಿ/ಪ್ರಭಾರ ಘಟಕಾಧಿಕಾರಿಗಳಾದ ಮಾರ್ಕ್‍ಶೇರ್, ಘಟಕಾಧಿಕಾರಿ, ಮಂಗಳೂರು ಘಟಕ, ಹರೀಶ್ ಆಚಾರ್ಯ, ಘಟಕಾಧಿಕಾರಿ, ಪಣಂಬೂರು ಘಟಕ, ರಮೇಶ್. ಪ್ರಭಾರ ಘಟಕಾಧಿಕಾರಿ, ಸುರತ್ಕಲ್ ಘಟಕ, ಪಿ.ವಸಂತ ಕುಮಾರ್, ಪ್ರಭಾರ ಘಟಕಾಧಿಕಾರಿ, ಸುಬ್ರಹ್ಮಣ್ಯ ಘಟಕ ಇವರುಗಳು ಉಪಸ್ಥಿತರಿದ್ದರು.

Also Read  ಮೂಡಬಿದಿರೆ: ಮದುವೆ ಸಮಾರಂಭಕ್ಕೆ ಬಂದಿದ್ದ ನಾಲ್ವರು ವಿದ್ಯಾರ್ಥಿಗಳು ಜಲಸಮಾಧಿ

error: Content is protected !!
Scroll to Top