ಬಿ.ಸಿ.ರೋಡ್ ಜಂಕ್ಷನ್ ಬಳಿ ಅಪಾಯಕಾರಿ ಹೊಂಡ ► ಅಪಾಯದಿಂದ ಪಾರಾದ ಅಜ್ಜಿ-ಮೊಮ್ಮಗ

(ನ್ಯೂಸ್ ಕಡಬ) newskadaba.com  ಬಿ.ಸಿರೋಡ್, ಡಿ . 22 . ಬಿ.ಸಿ.ರೋಡ್ ಜಂಕ್ಷನ್ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೊಂಡವೊಂದನ್ನು ತೆರೆಯಲಾಗಿದ್ದು ಭಾರೀ ಅಪಾಯಕ್ಕೆ ಕಾರಣವಾಗಿದೆ.ಪುತ್ತೂರು, ವಿಟ್ಲ ಭಾಗದಿಂದ ಬಸ್ಸಿನಲ್ಲಿ   ಬರುವ ಪ್ರಯಾಣಿಕರು ಹಾಗು  ಬಿಸಿರೋಡಿನಲ್ಲಿ ಇಳಿಯುವ ಪ್ರಯಾಣಿಕರು ರಸ್ತೆ ಬದಿಯಲ್ಲಿರುವ ಇದೇ ಹೊಂಡದ ಬಳಿ ಇಳಿಯುತ್ತಿದ್ದು, ಅಪಾಯಕ್ಕೆ ಎಡೆಮಾಡಿಕೊಟ್ಟಿದೆ.  ಇಳಿ ವಯಸ್ಸಿನ ಅಜ್ಜಿಯೊಬ್ಬರು ವಿಟ್ಲದಿಂದ ಬಿಸಿರೋಡಿಗೆ ಬಂದಿದ್ದು, ಬಸ್ಸಿನಿಂದ ಇಳಿಯುವ ವೇಳೆ ಕಾಲು ಜಾರಿ ಮಗುವಿನ ಸಮೇತ ಹೊಂಡಕ್ಕೆ ಬಿದ್ದ ಘಟನೆ ನಡೆದಿದೆ.

ತಕ್ಷಣ ಗಮನಿಸಿದ ಸ್ಥಳೀಯರಿಂದ   ಅಜ್ಜಿ ಮತ್ತು ಮಗು ಅಪಾಯದಿಂದ ಪಾರಾಗಿದ್ದಾರೆ. ಇದೀಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ತೆರೆದಿರುವ ಹೊಂಡದ ಬಗ್ಗೆ ಸ್ಥಳೀಯರು ಬಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Also Read  ಮಂಗಳೂರು: ಕೆಎಸ್ಸಾರ್ಟಿಸಿ ಬಸ್ ಗೆ ಸ್ಕೂಟರ್ ಅಡ್ಡ ಇಟ್ಟು ನಿಂದಿಸಿ ಚಾಲಕನ ಕೊಲೆಗೆ ಯತ್ನ ➤ ಓರ್ವನ ಬಂಧನ

 

error: Content is protected !!
Scroll to Top