ರಸ್ತೆಯಲ್ಲಿ ಸಿಕ್ಕಿದ ಪರ್ಸನ್ನು ಹಿಂತಿರುಗಿಸಿ ಮಾನವೀಯತೆ ಮೆರೆದ ಗೃಹರಕ್ಷಕ ಸಿಬ್ಬಂದಿ

(ನ್ಯೂಸ್ ಕಡಬ) newskadaba.com ಕಡಬ, ಡಿ.20. ರಸ್ತೆಯಲ್ಲಿ ಬಿದ್ದು ಸಿಕ್ಕಿದ ಪರ್ಸನ್ನು ಅದರ ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಕಡಬ ಠಾಣೆಯ ಗೃಹರಕ್ಷಕ ದಳದ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಆಲಂಕಾರು – ಶರವೂರು ರಸ್ತೆಯ ಮಿತ್ತಡ್ಕ ಎಂಬಲ್ಲಿ ನಗದು, ಆಧಾರ್ ಕಾರ್ಡ್, ಎಟಿಎಂ ಕಾರ್ಡ್ ಸೇರಿದಂತೆ ಹಲವು ದಾಖಲೆಗಳಿದ್ದ ಪರ್ಸ್ ವೊಂದು ಕಡಬ ಠಾಣಾ ಗೃಹರಕ್ಷಕ ದಳದ ಸಿಬ್ಬಂದಿ ಚೇತನ್ ಕುಮಾರ್ ಎಂಬವರಿಗೆ ಬುಧವಾರ ರಾತ್ರಿ ಬಿದ್ದು ಸಿಕ್ಕಿದೆ. ಅದರಲ್ಲಿದ್ದ ದಾಖಲೆಯನ್ನು ಪರಿಶೀಲಿಸಿದ ಚೇತನ್ ಕುಮಾರ್, ಪರ್ಸ್ ನ ವಾರಸುದಾರ ರಾಮಕುಂಜ ಗ್ರಾಮದ ಪೆರ್ಜಿ ನಿವಾಸಿ ಉಮೇಶ್ ಎಂಬವರನ್ನು ಕಡಬ ಠಾಣೆಗೆ ಕರೆಸಿ ಪೊಲೀಸ್ ಉಪನಿರೀಕ್ಷಕ ಪ್ರಕಾಶ್ ದೇವಾಡಿಗರವರ ಸಮ್ಮುಖದಲ್ಲಿ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

Also Read  ದರೆಗುಡ್ಡೆ ಗ್ರಾಮಸಭೆ ಹಾಗೂ ವಾರ್ಡು ಸಭೆ

error: Content is protected !!
Scroll to Top