ಕೃಷಿಯಲ್ಲಿ ತಾಂತ್ರಿಕ ವಿಧಾನಗಳ ಬಳಕೆ ಹಾಗೂ ಅವುಗಳ ಅಳವಡಿಕೆಯಿಂದ ಗಳಿಸಬಹುದಾದ ಲಾಭ ► ರೈತ-ವಿಜ್ಞಾನಿ ಸಂವಾದ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ,.ಮಂಗಳೂರು ಡಿ. 19.  ರೈತ-ವಿಜ್ಞಾನಿ ಸಂವಾದ ಕಾರ್ಯಕ್ರಮವನ್ನು ಕಾಲೇಜಿನ  ಪ್ರೋ.ಎಚ್.ಪಿ.ಸಿ.ಶೆಟ್ಟಿ ಸಭಾಂಗಣದಲ್ಲಿ ನಡೆಸಲಾಯಿತು. ಮೀನುಗಾರಿಕಾ ಕಾಲೇಜು, ಕೃಷಿ ವಿಜ್ಞಾನ ಕೇಂದ್ರ, ಹೈದರಾಬಾದ್‍ನ ಕೇಂದ್ರೀಯ ಮೀನುಗಾರಿಕೆ ಅಭಿವೃದ್ದಿ ಮಂಡಳಿ ಮತ್ತು ಮೀನುಗಾರಿಕಾ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಸಹಯೋಗದಿಂದ ಒಂದು ದಿನದ ಕಾರ್ಯಗಾರವನ್ನು ರೈತರಿಗಾಗಿ ಆಯೋಜಿಸಲಾಯಿತು.

ಮೀನುಗಾರಿಕಾ ಕಾಲೇಜಿನಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ ನಡೆಸಲಾದ ಈ ‘ರೈತ-ವಿಜ್ಞಾನಿ’ ಸಂವಾದ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಎ.ಟಿ. ರಾಮಚಂದ್ರ ನಾಯ್ಕ ಮಾತನಾಡಿ, ಜಿಲ್ಲೆಯ ರೈತರಿಗೆ ಕೃಷಿಯಲ್ಲಿ ತಾಂತ್ರಿಕ ವಿಧಾನಗಳ ಬಳಕೆ ಮತ್ತು ಅವುಗಳ ಅಳವಡಿಕೆಯಿಂದ ಲಾಭಗಳಿಸಬಹುದಾದ ವಿಷಯಗಳನ್ನು ಪ್ರಸ್ತಾಪಿಸಿದರು. ಕೃಷಿಯೊಟ್ಟಿಗೆ ಮೀನು, ಹಂದಿ, ಕೋಳಿ, ಜಾನುವಾರು, ಮತ್ತು ತರಕಾರಿ ಬೆಳೆಗಳನ್ನು ಬೆಳೆಸುವ ಸಮ್ಮಿಶ್ರ ವಿಧಾನಗಳ ಬಗ್ಗೆ ಕೃಷಿಕರಿಗೆ ಮತ್ತು ಕೃಷಿಯಲ್ಲಿ ಆಸಕ್ತಿಯಿರುವ ಯುವಕರಿಗೆ ತಿಳಿಸಿದರು. ಈ ಸಮ್ಮಿಶ್ರ ಕೃಷಿ ಪದ್ದತಿಯಲ್ಲಿ ಸಾಮಾನ್ಯವಾಗಿ ಬೆಳೆ ಬೆಳೆಯುವ ಆದಾಯದ ಜೊತೆ ವೈಜ್ಞಾನಿಕ ವಿಧಾನಗಳನ್ನು ಬಳಸದೇ ಆದರೆ ಲಾಭದಾಯಕವಾದ ಕೃಷಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ಸಮ್ಮಿಶ್ರ ಕೃಷಿ ಪದ್ದತಿಯಲ್ಲಿ ಮೀನಿನ ಕೊಳದ ಬದುವಿನಲ್ಲಿ ಪ್ರಾಣಿಗಳ ಸಾಕಣೆ ಮಾಡಿದರೆ ಅವುಗಳಿಂದ ಹೊರಹೊಮ್ಮುವ ತ್ಯಾಜ್ಯಗಳು (ಹಸಿ ಸಗಣಿ) ನೀರಿನಲ್ಲಿ ಸೇರಿ ಅವಶ್ಯವಿರುವ ಆಹಾರಜಿವಿಜನ್ಯಗಳು (ಪ್ಲಾಂಕ್ಟಾನ್) ಉತ್ಪತ್ತಿಯಾಗಿ ಕೊಳದಲ್ಲಿರುವ ಮೀನುಗಳಿಗೆ ಮೇಲು ಆಹಾರ ಬೆಳೆಯಲು ಸಹಕಾರಿಯಾಗಲಿದೆಯೆಂದು ಹೇಳಿದರು. ಈ ರೀತಿ ಉತ್ಪತ್ತಿಯಾದ ಜೀವಂತ ಆಹಾರವು ಮೀನುಗಳಿಗೆ ಆರೋಗ್ಯ ವೃದ್ದಿಪಡಿಸುವುದಲ್ಲದೇ, ಬೆಳವಣಿಗೆಯಲ್ಲಿ ಗಣನೀಯ ಪಾತ್ರ ವಹಿಸುತ್ತದೆಂದು ತಿಳಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಮೀನುಗಾರಿಕಾ ಕಾಲೇಜಿನ ಡೀನ್ ಡಾ. ಎಚ್. ಶಿವಾನಂದ ಮೂರ್ತಿ ಮಾತನಾಡಿ,  ಕಾಲೇಜಿನ ಸುವರ್ಣ ಮಹೋತ್ಸವದ ಆಚರಣೆಯ ನಿಮಿತ್ತ ವಿವಿಧ ಕಾರ್ಯಕ್ರಮಗಳ ಬಗ್ಗೆ ಹೇಳಿದರು. ಈ ‘ರೈತ-ವಿಜ್ಞಾನಿ’ ಕಾರ್ಯಗಾರವು ಪ್ರಯೋಗಾಲಯಗಳಲ್ಲಿ ಅಭಿವೃದ್ದಿಪಡಿಸಿರುವ ತಾಂತ್ರಿಕತೆಗಳನ್ನು ನೇರವಾಗಿ ಕೃಷಿಕರಿಗೆ ತಲುಪಿಸುವ ಪ್ರಯತ್ನವಾಗಿದ್ದು, ರೈತರ ಸಮಸ್ಯೆಗಳಿಗೆ ಮಾರ್ಗಸೂಚಿಸುವ ವೇದಿಕೆ ಇದಾಗಿದೆಯೆಂದು ತಿಳಿಸಿದರು.

Also Read  ಮಾ. 21ರಂದು ಹರೇಕಳ ಗ್ರಾಮ ಸಭೆ

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೂಡಿಗೆರೆಯ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷರಾದ ಸುಭಾಷ್‍ಚಂದ್ರ ಚೌಟ ಮತ್ತು ಮಾಜಿ ಅಧ್ಯಕ್ಷ ಹಾಗೂ ಪ್ರಗತಿಪರ ರೈತ ರಾಜವರ್ಮ ಬೈಲಂಗಡಿ ಸೇರಿ ಒಟ್ಟು 20 ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡು ಕಾಯಕ್ರಮದ ಸದುಪಯೋಗ ಪಡೆದರು.ಸಿಗಡಿ ಕೃಷಿಕ ಸ್ಟೀವನ್ ಡಿಸೋಜ ಬಯೋಫ್ಲಾಕ್ ತಾಂತ್ರಿಕ ಬಳಕೆಯಿಂದ ಹಿನ್ನೀರು ಸಿಗಡಿಯಾದ ವೆನ್ನಮೈನ ಉತ್ಪಾದನೆಯಲ್ಲಿ ಎಕರೆಗೆ ಸಾಮನ್ಯಕ್ಕಿಂತ ಅತ್ಯಧಿಕ ಬೆಳೆ ತೆಗೆದು ಆವೀಷ್ಕಾರ ಮಾಡಿರುವ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.ಹವ್ಯಾಸಿಯಾಗಿ ಕೃಷಿಯನ್ನು ಪ್ರಾರಂಭ ಮಾಡಿಕೊಂಡಿರುವ ಬಹರೈನ್ ದೇಶದಲ್ಲಿ ಉದ್ಯೋಗಿಯಾಗಿ ಸೇವೆಸಲ್ಲಿಸಿದ ರಾಕಿ ಪಿಂಟೋ ಅವರು ‘ಆಕ್ಟೋಪೋರಸ್’‘ ಎಂಬ ಗಿಡದ ಬಗ್ಗೆ ಮಾಹಿತಿ ನೀಡಿ ಇದೊಂದು ಕಡಲ ಕೊರೆತವನ್ನು ತಡೆಗಟ್ಟಲು ಬೆಳೆಸುವ ಬೇರು ಉದ್ದಗಲವಾಗಿ ಬೆಳೆಯುವ ತಳಿಯೆಂದು ಪರಿಚಯಿಸಿದರು. ಇದನ್ನು ಆ ದೇಶದಿಂದ ಜಿಲ್ಲೆಯ ಬಳ್ಕುಂಜೆ ಗ್ರಾಮದ ಕಿನ್ನಿಗೊಳಿಯಲ್ಲಿ ತಮ್ಮ ತೋಟದಲ್ಲಿ ಬೆಳೆಸಿರುವುದಾಗಿ ತಿಳಿಸಿ ಇದರ ಬಳ್ಳಿಯನ್ನು ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೆಳೆಸಲು ಕೇಳಿಕೊಂಡರು.ಸಿಹಿನೀರಿನಲ್ಲಿ ಸಾಕಣೆ ಮಾಡಬಹುದಾದ ಮೀನಿನ ತಳಿಗಳ ಬಗ್ಗೆ ಮತ್ತು ಮೀನು ಕೃಷಿಯ ಬಗ್ಗೆ ಆಸಕ್ತಿ ತೋರಿಸಿದವರಿಗೆ ತಾಂತ್ರಿಕ ಸಲಹೆ ಸೂಚನೆಗಳನ್ನು ಕಾಲೇಜಿನ ಜಲಕೃಷಿ ವಿಭಾಗ ಮತ್ತು ಕೃ.ವಿ.ಕೇಂ. ಗಳ ಸಹಾಯದಿಂದ ಚೆಪ್ಪೆನೀರಿನಲ್ಲಿ ಕೃಷಿಕೈಗೊಳ್ಳಲು ಸೂಕ್ತ ಸಲಹೆ ಸೂಚನೆ ಮತ್ತು ವೈಜ್ಞಾನಿಕ ಮಾಹಿತಿಯನ್ನು ನೀಡಲಾಗುವುದೆಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಎ.ಟಿ. ರಾಮಚಂದ್ರ ನಾಯ್ಕರವರು ಈ ಸಂದರ್ಭದಲ್ಲಿ ತಿಳಿಸಿದರು.

ಕಾಲೇಜಿನ ಸಹ ವಿಸ್ಥರಣಾ ನಿರ್ದೇಶಕ ಡಾ. ಶಿವಕುಮಾರ್ ಎಂ. ಮಾತನಾಡಿ ಕೃಷಿ ಒಂದು ಲಾಭದಾಯಕ ಕಸುಬಾಗಿಸಬೇಕಾದರೆ ಸಮಗ್ರ ಕೃಷಿ ಪದ್ದಿತಿಗಳನ್ನು ಅಳವಡಿಸಿದರೆ ಸಾದ್ಯವೆಂದು ತಿಳಿಸಿದರು. ಆದಾಯ-ವೆಚ್ಚಗಳ ಬಗ್ಗೆ ಅರಿವು ಪ್ರತಿಯೊಬ್ಬ ರೈತರಿಗೆ ಮುಖ್ಯವಾದುದ್ದು ಎಂದು ಹೇಳಿದರು. ಕೃಷಿಗೆ ಅಗತ್ಯವಾದ ಪೋಷಕಾಂಶಗಳ ಪೊರೈಕೆಯನ್ನು ಒದಗಿಸಿದರೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಉತ್ಪಾದನೆ ಮತ್ತು ಉತ್ಪಾದಕತೆಯ ಬಗ್ಗೆ ತಿಳಿದುಕೊಂಡರೆ ಆದಾಯ ಹೆಚ್ಚಿಸಲು ಸಹಕಾರಿಯಾಗಿದೆಯೆಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕೇಂದ್ರೀಯ ಮೀನುಗಾರಿಕಾ ಸಂಸ್ಥೆಗಳಾದ ಹಿನ್ನೀರು ಜಲಕೃಷಿ, ಕಡಲ ಸಂಶೋದನೆ ಮತ್ತು ಸಾಗರೋತ್ಪನ್ನ ರಫ್ತು ಪ್ರಾಧಿಕಾರಗಳ ವಿಜ್ಞಾನಿಗಳಾದ ತನ್ವೀರ್ ಹುಸೈನ್, ಡಾ. ಪುರುಶೋತ್ತಮ ಮತ್ತು ವಿಜಯ್‍ಕುಮಾರ ಯರ್ಗಲ್ ಅವರು ರೈತರ ಸವಾಲಾದ ಉಪ್ಪುನೀರಿನ ಮೀನಿನ ತಳಿಗಳಾದ ಕುರುಡೆ (ಸೀಬಾಸ್) ಮತ್ತು ಕೆಂಬೇರಿ (ಸ್ನಾಪರ್) ಗಳ ಮರಿಗಳ ಲಭ್ಯತೆಯ ಮತ್ತು ಸಾಕುವ ವಿಧಾನಗಳ ಬಗ್ಗೆ ಮಾಹಿತಿಗಳನ್ನು ತಿಳಿಸಿದರು.

Also Read  ನೂಜಿಬಾಳ್ತಿಲ:‌ ಮರಕ್ಕೆ ಢಿಕ್ಕಿ ಹೊಡೆದ ಖಾಸಗಿ ಬಸ್ ► ಅಪಾಯದಿಂದ ಪಾರಾದ ಪ್ರಯಾಣಿಕರು

ಬೆಂಗಳೂರಿನ ಕೃಷಿ ವಿಶ್ವ ವಿದಾನಿಲಯದ ಒಳನಾಡು ಮೀನುಗಾರಿಕಾ ಘಟಕದ ಮುಖ್ಯಸ್ಥ ಡಾ. ಬಿ.ವಿ. ಕೃಷ್ಣಮೂರ್ತಿರವರು ‘ಅನಿಕ್ಸ್’ ಬಗ್ಗೆ ತಿಳಿಸಿ ಸಂಶೋದನೆಯಿಂದ ಹೊರಬಂದತಹ ಪಲಿತಾಂಶಗಳನ್ನು ರೈತರ ಜತೆ ಹಂಚಿಕೊಂಡರು. ಈ ನಿಟ್ಟಿನಲ್ಲಿ, ಆಸಕ್ತಿಯಿರುವ ಜಿಲ್ಲೆಯ ರೈತರಿಗೆ ತರಬೇತಿಯನ್ನೂ ಸಹ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಿಂದ ನಡೆಸಿಕೊಡುತ್ತೇವೆಂದು ಹೇಳಿದರು.ಕಾಲೇಜಿನ ಮತ್ಸ್ಯ ಸಂಪನ್ಮೂಲ ನಿರ್ವಹಣೆ ವಿಭಾದ ಮುಖ್ಯಸ್ಥ ಡಾ. ಎಸ್.ಎಂ. ಶಿವಪ್ರಕಾಶ್ ಮಾತನಾಡಿ ಸರ್ಕಾರದ ಸವಲತ್ತುಗಳನ್ನು ಸಮಗ್ರವಾಗಿ ರೈತರಿಗೆ ಸಿಗುವುದಾದರೆ ರೈತರಿಗೆ ಅನುಕೂಲವಾಗುತ್ತದೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ (ಕೋಫಾ) ಕಾರ್ಯದರ್ಶಿ ಡಾ. ಎಸ್.ಆರ್. ಸೋಮಶೇಖರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮೀನುಗಾರಿಕಾ ವಿಭಾದ ಮುಖ್ಯಸ್ಥ ಡಾ. ಗಂಗಾಧರ ಗೌಡ ಮಾತನಾಡಿ ಮಿಶ್ರಕೃಷಿಗೆ ಉತ್ತೇಜನ ಕೊಡುವುದು ಅನಿವಾರ್ಯವೆಂದು ಹೇಳಿದರು.

ಬೇಸಾಯ ಶಾಸ್ತ್ರದ ತಜ್ಞ ಹರೀಶ ಶೆಣೈ ಮಾತನಾಡಿ ಹೊಸ ತಳಿಗಳ ಬಗ್ಗೆ ಕೃಷಿಕರು ವೈಜ್ಞಾನಿಕ ಸಲಹೆ ಪಡೆದು ಕೃಷಿಪದತಿಗಳನ್ನು ಮಾಡಿದರೆ ಆದಾಯ ಹೆಚ್ಚಿಸಬಹುದಾಗಿದೆಯೆಂದು ಹೇಳಿದರು. ಮೀನುಗಾರಿಕೆಯ ವಿಷಯ ತಜ್ಞ ಗಣೇಶ್ ಪ್ರಸಾದ್ ಎಲ್., ಮಣ್ಣು ಪರಿಕ್ಷೆಯ ಸಹಾಯಕಿ ಯಶಶ್ರೀ, ಕಾಯಕ್ರಮ ಸಹಾಯಕ ಸತೀಶ್ ನಾಯಕ್ ಮತ್ತು ಕೃ.ವಿ.ಕೇಂ.ದ ಸಿಬ್ಬಂದಿಗಳಾದ ದೀಪಾ, ಸೀತಾರಾಮ, ಸೋಮಶೇಖರಯ್ಯ ಎಸ್.ಎಂ., ಅಶ್ವಿತ್ ಕುಮಾರ್, ಕೇಶವ ಮತ್ತು ವಿದ್ಯಾವತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಮೀನುಗಾರಿಕಾ ಕಾಲೇಜಿನ ಜಲ ಕೃಷಿ, ಜಲ ಪರಿಸರ ನಿರ್ವಹಣೆ, ಮತ್ಸ್ಯ ಸಂಪನ್ಮೂಲ ನಿರ್ವಹಣೆ, ಜಲ ಜೀವಿ ಆರೋಗ್ಯ ನಿರ್ವಹಣೆ, ಮೀನು ಸಂಸ್ಕರಣೆ ಮತ್ತು ಮೀನುಗಾರಿಕೆ ಅಭಿಯಂತರ ತಾಂತ್ರಿಕ ವಿಭಾಗಗಳು, ಕೃಷಿ ವಿಜ್ಞಾನ ಕೇಂದ್ರ, ಸಾಗರೋತ್ಪನ್ನ ರಫ್ತು ಪ್ರಾಧಿಕಾರ, ಕೇದ್ರೀಯ ಕಡಲ ಮತ್ಸ್ಯ ಸಂಶೋದನಾ ಸಂಸ್ಥೆ, ಕೇಂದ್ರೀಯ ಹಿನ್ನೀರು ಜಲಕೃಷಿ ಸಂಸ್ಥೆಗಳ ವಿಜ್ಞಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Also Read  ಕಡಬ: ನಿವೃತ್ತ ಯೋಧ ಸಂತೋಷ್ ಗೆ ಅಭಿನಂದನೆ

error: Content is protected !!
Scroll to Top