ಮಂಗಳೂರು: ಚಿತ್ರದ ಶೂಟಿಂಗ್ ವೇಳೆ ನಟ – ನಟಿಯ ನಡುವೆ ಹೊಡೆದಾಟ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.20. ತುಳು ಚಿತ್ರವೊಂದರ ಚಿತ್ರೀಕರಣ ಸಂದರ್ಭದಲ್ಲಿ ನಾಯಕ ನಟ ನಟಿಗೆ ಹಲ್ಲೆ ನಡೆಸಿದ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ.

ಅವಿಭಜಿತ ಜಿಲ್ಲೆಯ ಬ್ರಹ್ಮಾವರ ಸಮೀಪದ ಸೂರಾಲು ಎಂಬಲ್ಲಿ ಚಿತ್ರೀಕರಣವಾಗುತ್ತಿರುವ ‘ಏರೆಗಾವು ಕಿರಿಕಿರಿ’ ಎಂಬ ತುಳು ಸಿನಿಮಾದ ನಾಯಕ ಹಾಗೂ ನಾಯಕಿಯ ನಡುವೆ ಚಿತ್ರೀಕರಣದ ಆರಂಭದಿಂದಲೂ ವೈಮನಸ್ಸು ಇತ್ತೆನ್ನಲಾಗಿದ್ದು, ಡಿಸೆಂಬರ್ 17 ರಂದು ಚಿತ್ರೀಕರಣದ ಸಂದರ್ಭದಲ್ಲಿ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ನಾಯಕ ನಟ ಮುಂಬಯಿ ಮೂಲದ ನಟಿಗೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಉಳಿದ ಕಲಾವಿದರು ಜಗಳ ಬಿಡಿಸಿದ್ದು, ಗಾಯಗೊಂಡ ನಟಿ ಬ್ರಹ್ಮಾವರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸಿನಿಮಾ ಶೂಟಿಂಗ್ ಮುಗಿಯುವವರೆಗೆ ಸುಮ್ಮನಿರುವಂತೆ ನಿರ್ಮಾಪಕ ವಿನಂತಿಸಿದ ಅವರಿಬ್ಬರನ್ನು ಸಮಾಧಾನ ಪಡಿಸಿದ ಮೇರೆಗೆ, ಚಿತ್ರ ಬಿಡುಗಡೆಯಾದ ಬಳಿಕ ನಾಯಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ನಟನ ಮೇಲೆ ನಟಿ ಸಂಬಂಧಿಕರು ದೂರು ನೀಡುವ ಸಾಧ್ಯತೆಗಳಿವೆ.

Also Read  ಕಡಬ: ತಾಜ್ ಸೂಪರ್ ಬಝಾರ್ ಶುಭಾರಂಭ

 

error: Content is protected !!
Scroll to Top