ಉಜಿರೆ: ಮುಖಕ್ಕೆ ಟೇಪ್ ಸುತ್ತಿದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.11. ಕುತ್ತಿಗೆಗೆ ಹಗ್ಗ ಬಿಗಿದು ಕೊಲೆಗೈದ ಸ್ಥಿತಿಯಲ್ಲಿ ಯುವಕನೋರ್ವನ ಮೃತದೇಹವು ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಭಾನುವಾರದಂದು ಕಂಡುಬಂದಿದೆ.

ಅಂದಾಜು 30 ವರ್ಷ ವಯಸ್ಸಿನ ಯುವಕನ ಮುಖಕ್ಕೆ ಟೇಪ್ ಹಾಕಿ, ಕಾಲು ಕಟ್ಟಿದ್ದಲ್ಲದೆ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ ಸ್ಥಿತಿಯಲ್ಲಿ ಉಜಿರೆಯ ಗುರಿಪಳ್ಳ ಕ್ರಾಸ್ ನ ಅಳಕೆ ರಸ್ತೆಯ ಸಮೀಪ ಮೃತದೇಹ ಪತ್ತೆಯಾಗಿದ್ದು, ಬೇರೆ ಕಡೆ ಕೊಲೆ‌ ಮಾಡಿ ಇಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಜಗತ್ತಿನ ಅತಿ ವೇಗದ ಓಟಗಾರ 'ಉಸೇನ್‌ ಬೋಲ್ಟ್' ಅವರಿಗೆ ಕೊರೊನಾ ಪಾಸಿಟಿವ್

error: Content is protected !!
Scroll to Top