ಕಡಬ: ಕ್ಯಾಥೊಲಿಕ್ ಸಮಾಜದ 9ನೇ ಜಿಲ್ಲಾ ಯುವ ಸಮಿತಿ ಸಮ್ಮೇಳನದ ಸಮಾರೋಪ

(ನ್ಯೂಸ್ ಕಡಬ) newskadaba.com ಕಡಬ, ನ.08. ಭಾರತೀಯ ಕಥೋಲಿಕ್ ಯುವ ಸಂಚಾಲನ (ಐಸಿವೈಎಮ್)ದ ಮಂಗಳೂರು ಧರ್ಮಪ್ರಾಂತದ ಕೇಂದ್ರಿಯ ಸಮಿತಿಯ ನಿರ್ದೆಶನದಲ್ಲಿ ಪುತ್ತೂರು ವಲಯ ಮತ್ತು ಕಡಬ ಸೈಂಟ್ ಜೋಕಿಮ್ಸ್ ಚರ್ಚ್ ಘಟಕದ ಆಶ್ರಯದಲ್ಲಿ ನಡೆದ 9ನೇ ಜಿಲ್ಲಾ ವಸತಿ ಸಮಾವೇಶದ ಸಮಾರೋಪ ಸಮಾರಂಭವು ಗುರುವಾರದಂದು ನಡೆಯಿತು.

ನ. 5 ನೇ ಸೋಮವಾರದಂದು ಆರಂಭಗೊಂಡ ಯುವ ವಸತಿ ಸಮಾವೇಶದಲ್ಲಿ ದ.ಕ. ಮತ್ತು ಕಾಸರಗೋಡ್ ಜಿಲ್ಲಾ ವ್ಯಾಪ್ತಿಯ ಸುಮಾರು 124 ಚರ್ಚ್ ಘಟಕಗಳಿಂದ ಸುಮಾರು 400 ಯುವಕ/ಯುವತಿಯರು ಆಗಮಿಸಿದ್ದರು. 4 ದಿನಗಳ ವಸತಿ ಸಮಾವೇಶದಲ್ಲಿ ಸಮಾಜದ ಯುವಕರಿಗೋಸ್ಕರ ವಿವಿಧ ತರಬೇತಿ, ವ್ಯಕ್ತಿತ್ವ ವಿಕಸನ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರಗಳನ್ನು ನಡೆಯಿತು. ಗುರುವಾರದಂದು ನಡೆದ ಸಮಾರೋಪ ಸಮಾರಂಭದಲ್ಲಿ ಮಂಗಳೂರು ಧರ್ಮಪ್ರಾಂತದ ಪೂರ್ವ ಧರ್ಮಾಧ್ಯಕ್ಷ ಪರಮ ಪೂಜ್ಯ ಅಲೋಸಿಯಸ್ ಪಾವ್ಲ್ ಡಿ’ಸೋಜ, ಕೇಂದ್ರೀಯ ಸಮಿತಿಯ ನಿರ್ದೆಶಕರಾದ ಫಾ| ರೊನಾಲ್ಡ್ ಪ್ರಕಾಶ್ ಡಿ ಸೋಜ, ಸಹ ನಿರ್ದೇಶಕರಾದ ಫಾ| ಆಶ್ವಿನ್ ಲೋಹಿತ್ ಕಾರ್ಡೋಜಾ, ವಲಯ ನಿರ್ದೇಶಕ ಫಾ| ಪ್ರವೀಣ್ ಡಿ’ಸೋಜ, ಕಡಬ ಘಟಕದ ನಿರ್ದೆಶಕ ಫಾ|ರೋನಾಲ್ಡ್ ಲೋಬೊ, ಕರ್ನಾಟಕ ರಾಜ್ಯ ಪ್ರಾಂತದ ಯುವ ಸಮಿತಿಯ ಅದ್ಯಕ್ಷ ಪ್ರಜ್ವಲ್ ಲೊಪೇಜ್, ಕರ್ನಾಟಕ ರಾಜ್ಯ ಸರಕಾರದ ಸಚೇತಕ ಐವನ್ ಡಿ’ಸೋಜ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Also Read  ತೆಂಗಿನ ಕಾಯಿ ಕೀಳಲು ಮರ ಹತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು..!

ಕಥೋಲಿಕಾ ಸಭಾದ ಮಂಗಳೂರು ಕೇಂದ್ರಿಯ ಸಮಿತಿಯ ಅದ್ಯಕ್ಷ್ಸ ಪಾವ್ಲ್ ರೋಲ್ಪಿ ಡಿ ಕೋಸ್ಟಾ, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ. ವರ್ಗೀಸ್, ಪುತ್ತೂರು ತಾ,ಪಂ ಸದಸ್ಯ ಪಝಲ್ ಕೊಡಿಂಬಾಳ, ಕೇಂದ್ರೀಯ ಸಮಿತಿಯ ಅದ್ಯಕ್ಷರಾದ ಜೈಸನ್ ಪಿರೇರಾ, ಕಾರ್ಯದರ್ಶಿ ಫೆವೀಶಾ ಮೊಂತೆರೋ, ಕೇಂದ್ರೀಯ ಸಮಿತಿ ಕಾರ್ಯಕಾರಿ ಸಮಿತಿ ಅಧ್ಯಕ್ಷ ಜೇಮ್ಸ್ ಕ್ರಿಶಾಲ್ ಡಿ ಸೋಜ, ಕಾರ್ಯದರ್ಶಿ ರಕ್ಷಿತ್ ಪಿಂಟೋ, ಕಡಬ ಘಟಕದ ಅಧ್ಯಕ್ಷ ಫ್ರಾಯಲ್ ಗ್ಲಾಡ್‍ಸನ್ ಕ್ರೋಸ್, ಕಾರ್ಯದರ್ಶಿ ರಶ್ಮೀತಾ ಪಿರೇರಾ, ಸಚೇತಕ ಜೋಸೆಫ್ ವೇಗಸ್, ಕಡಬ ಸಂತ ಜೋಕಿಮರ ಚರ್ಚ್‌ನ ಪಾಲನಾ ಸಮಿತಿಯ ಉಪಾಧ್ಯಕರಾದ ಲುವಿಸ್ ಮಸ್ಕರೇನ್ಹಸ್, ಕಾರ್ಯದರ್ಶಿ ಜೆಸಿಂತಾ ವೇಗಸ್ ಮೊದಲಾದವರು ಉಪಸ್ಥಿತರಿದ್ದರು.

Also Read  ವಿಟ್ಲ : ಆಟೋ ರಿಕ್ಷಾ ಮತ್ತು ಕಾರಿನ ನಡುವೆ ಅಪಘಾತ ➤ ರಿಕ್ಷಾ ಚಾಲಕ ಗಂಭೀರ

error: Content is protected !!
Scroll to Top