ಕಾಣಿಯೂರು: ಕಾಲೇಜು ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ



(ನ್ಯೂಸ್ ಕಡಬ) (newskadaba.com) ಬೆಳ್ಳಾರೆ, ನ.02. ಕಾಲೇಜು ವಿದ್ಯಾರ್ಥಿನಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲ್ಪಡ ಸಮೀಪದ ಪುಳಿತ್ತಡಿ ಎಂಬಲ್ಲಿ ಶುಕ್ರವಾರದಂದು ನಡೆದಿದೆ.







ಆತ್ಮಹತ್ಯೆ ಮಾಡಿಕೊಂಡಾಕೆಯನ್ನು
ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ, ಕೊಡಿಯಾಳ ಗ್ರಾಮದ ಕಲ್ಪಡ ದಿ. ನಾರಾಯಣ ಗೌಡರ ಪುತ್ರಿ ಯುಕ್ತಿ (17) ಎಂದು ಗುರುತಿಸಲಾಗಿದೆ. 9 ವರ್ಷಗಳ ಹಿಂದೆ ನಾರಾಯಣ ಗೌಡರು ಮೃತಪಟ್ಟ ಬಳಿಕ ಈಕೆ ದೊಡ್ಡಪ್ಪನ ಮನೆಯಲ್ಲಿದ್ದು, ಕಾಣಿಯೂರು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಶುಕ್ರವಾರದಂದು ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಆಕೆಯ ಸಹೋದರ ಮೋಹನ್ ಕುಮಾರ್ ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿದೆ.






error: Content is protected !!
Scroll to Top