ಕುಲ್ಕುಂದ: ಮಹೀಂದ್ರಾ ಜೀತೋ ವಾಹನದ ಮೇಲೆ ಕಾಡಾನೆ ದಾಳಿ ► ಇಬ್ಬರು ಪ್ರಾಣಾಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ.30. ಸೋಮವಾರಪೇಟೆಯಿಂದ ಬಿಸಿಲೆ ಘಾಟ್ ಮೂಲಕ ಮಂಗಳೂರಿಗೆ ತೆರಳುತ್ತಿದ್ದ ಮಹೀಂದ್ರಾ ಜೀತೋ ವಾಹನದ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕುಲ್ಕುಂದ ಸಮೀಪದ ದೇವರ ಗುಡ್ಡ ಸಮೀಪ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ.

ಸೋಮವಾರಪೇಟೆ ಮೂಲದ ಸಲೀಂ ಮತ್ತು ಹಮೀದ್ ಎಂಬವರು ಮಹೀಂದ್ರಾ ಜೀತೋ ವಾಹನದಲ್ಲಿ ಹಸಿ ಮೀನು ತರಲೆಂದು ಬಿಸಿಲೆ ಘಾಟ್ ಮೂಲಕ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಕುಲ್ಕುಂದ ಸಮೀಪದ ದೇವರಗುಡ್ಡ ಬಳಿಯ ತಿರುವಿನಲ್ಲಿ ಕಾಡಾನೆಯು ವಾಹನದ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಆನೆಯ ಮರಿ ಕೂಗಿದ ಕಾರಣ ಆನೆಯು ವಾಹನವನ್ನು ಬಿಟ್ಟು ಕಾಡಿಗೆ ತೆರಳಿದ್ದರಿಂದಾಗಿ ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ವಾಹನದ ಮುಂಭಾಗ ನಜ್ಜುಗುಜ್ಜಾಗಿದ್ದು, ಸುಬ್ರಹ್ಮಣ್ಯ ಠಾಣೆಯಲ್ಲಿ ಇರಿಸಲಾಗಿದೆ.

Also Read  ಮಂಗಳೂರು ವಿವಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

error: Content is protected !!