ಮೈಸೂರು ರಾಜಮಾತೆ ಪ್ರಮೋದಾ ದೇವಿಗೆ ಮಾತೃ ವಿಯೋಗ ► ದಸರಾ ಸಂಭ್ರದಲ್ಲಿರುವ ಮೈಸೂರು ಅರಮನೆಯಲ್ಲಿ ಸೂತಕದ ಛಾಯೆ

(ನ್ಯೂಸ್ ಕಡಬ) newskadaba.com ಮೈಸೂರು, ಅ.19. ಮೈಸೂರು ಅರಮನೆಯ ರಾಜಮಾತೆ ಪ್ರಮೋದಾ ದೇವಿ ಒಡೆಯರ್‌ ಅವರ ತಾಯಿ ಚಿನ್ನಮಣಿ(98) ಶುಕ್ರವಾರದಂದು ವಿಧಿವಶರಾಗಿದ್ದು, ದಸರಾ ಸಂಭ್ರಮದಲ್ಲಿರುವ ಮೈಸೂರಿನಲ್ಲಿ ಸೂತಕದ ಛಾಯೆ ಆವರಿಸಿದೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಚಿನ್ನಮಣಿಯವರು ಶುಕ್ರವಾರದಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಹಿರಿಯ ಜೀವದ ಅಗಲುವಿಕೆಯಿಂದಾಗಿ ದಸರಾ ಸಂಭ್ರಮದಲ್ಲಿರುವ ವಿಶ್ವ ವಿಖ್ಯಾತ ಮೈಸೂರಿನ ಅರಮನೆಯಲ್ಲಿ ಸೂತಕದ ಛಾಯೆ ಕಾಣಿಸಿಕೊಂಡಿದ್ದು, ರಾಜವಂಶಸ್ಥ ಕುಟುಂಬದ ಸಂಭ್ರಮಕ್ಕೆ ತೆರೆಬಿದ್ದಿದೆ.

Also Read  ಬೆಂಗಳೂರು- ಮೈಸೂರು ಹೈವೇಯಲ್ಲಿ ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ

error: Content is protected !!
Scroll to Top