ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಾರಂಭ

(ನ್ಯೂಸ್ ಕಡಬ) newskadaba.com ಕಡಬ, ಅ.10. ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಾರಂಭಗೊಂಡಿದ್ದು,ಅ.10ರಂದು ತೆನೆ ಕಟ್ಟುವ ಕಾರ್ಯಕ್ರಮ ನಡೆಯಿತು. ಅ.10ರಂದು ಬೆಳಿಗ್ಗೆ ತೆನೆ ಕಟ್ಟುವುದು ಬಳಿಕ ದೇವತಾ ಪ್ರಾರ್ಥನೆ, ಗಣಪತಿ ಹೋಮ, ಪಂಚಾಮೃತ ಅಭಿಷೇಕ, ನವ ಕಲಶಾಭಿಷೇಕ ಮಧ್ಯಾಹ್ನ ಮಹಾಪೂಜೆ ನಡೆಯಿತು. ಸಂಜೆ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ರಂಗಪೂಜೆ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಬಟ್ಟಲು, ಚಯರ್ ಕೊಡುಗೆ: ಈ ಸಂದರ್ಭದಲ್ಲಿ ಹೊಸ್ಮಠ ರಾಜರಾಂ ಭಟ್ ಮತ್ತು ಮನೆಯವರು 100 ಊಟದ ಬಟ್ಟಲನ್ನು ಮತ್ತು 2018ರ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯವರು 50 ಚಯರ್‍ಗಳನ್ನು ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದರು. ಬೆಳಿಗ್ಗಿನ ಕಾರ್ಯಕ್ರಮದಲ್ಲಿ ಶ್ರೀ ಉಮಾಮಹೇಶ್ವರಿ ಸೇವಾ ಟ್ರಸ್ಟ್‍ನ ಅಧ್ಯಕ್ಷ ಚಿತ್ತರಂಜನ್ ರೈ ಮಾಣಿಗ, ಕಾರ್ಯದರ್ಶಿ ನಾರಾಯಣ ಎನ್. ಬಲ್ಯ ಕೊಲ್ಲಿಮಾರು, ಕೋಶಾಧಿಕಾರಿ ರಾಜರಾಂ ಭಟ್ ಹೊಸ್ಮಠ, ಸದಸ್ಯರಾದ ಕೃಷ್ಣಪ್ಪ ದೇವಾಡಿಗ ಸನಿಲ, ಚಂದ್ರಹಾಸ ಸಾಲ್ಯಾನ್ ಗೋವಿಂದಕಟ್ಟೆ, ತನಿಯ ಸಂಪಡ್ಕ, ಸತೀಶ್ಚಂದ್ರ ಶೆಟ್ಟಿ ಬೀರುಕ್ಕು, ಶಾಂತಾರಾಮ ರೈ ಬೆದ್ರಾಡಿ, ರಾಮಯ್ಯ ಗೌಡ, ಶ್ರೀ ಉಮಾಮಹೇಶ್ವರಿ ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷ ಜಗನ್ನಾಥ ಶೆಟ್ಟಿ ಗುಂಡಿಜಾಲು, ದೇವಸ್ಥಾನದ ಗೌರವ ಸಲಹೆಗಾರ ಡಾ| ಸುರೇಶ್ ಕುಮಾರ್ ಕೂಡೂರು, ಗುಮಾಸ್ತ ವೆಂಕಪ್ಪ ಗೌಡ ಸನಿಲ, ಪೂಜಾ ಕಾರ್ಯದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಪತಿ ಭಟ್ ಹಾಗೂ ಪ್ರಸಾದ್ ಕೆದಿಲಾಯ, ವಿಷ್ಣುಭಟ್ ಹಾಗೂ ಇತರರು ಸಹಕರಿಸಿದರು. ಶ್ರೀ ಉಮಮಹೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷ ಶಶಿಧರ ಕೆರೆನಡ್ಕ ಹಾಗೂ ಹಲವಾರು ಭಕ್ತರು ಉಪಸ್ಥಿತರಿದ್ದರು.

Also Read  ಅಡೆಕ್ಕಲ್ ಅಬ್ಬಾಸ್ ಹಾಜಿ ನಿಧನ ➤ ಎಸ್.ಡಿ.ಪಿ.ಐ ಸಂತಾಪ

error: Content is protected !!
Scroll to Top