ರಾಮಕುಂಜ: ಹಳೆನೇರೆಂಕಿ ಗೊಂಚಲು ಮಹಾಸಭೆ

(ನ್ಯೂಸ್ ಕಡಬ) newskadaba.com ಕಡಬ, ಸೆ.19. ಕಡಬ: ರಾಮಕುಂಜ ಮತ್ತು ಹಳೆನೇರೆಂಕಿ ಗ್ರಾಮಗಳ ಅಂಗನವಾಡಿ ಕೇಂದ್ರಗಳ ಗೊಂಚಲು ಮಹಾಸಭೆ ರಾಮಕುಂಜ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.

ಅಂಗನವಾಡಿ ಮೇಲ್ವಿಚಾರಕಿ ಸುಜಾತರವರು ಮಾತನಾಡಿ, ಸ್ತ್ರೀಶಕ್ತಿ ಸಂಘದ ಅಜೀವ ಸದಸ್ಯರಾದವರು ತಮ್ಮ ಮಕ್ಕಳು ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದಿದ್ದಲ್ಲಿ ಪ್ರೋತ್ಸಾಧನಕ್ಕೆ ಅರ್ಜಿ ಸಲ್ಲಿಸಬಹುದು ಎಂದರು. ಪ್ರಧಾನ ಮಂತ್ರಿಯವರು ಜಾರಿಗೆ ತಂದಿರುವ ಬೇಟಿ ಬಚಾವೋ, ಬೇಟಿ ಪಡಾವೋ(ಹೆಣ್ಣು ಮಕ್ಕಳನ್ನು ಸಂರಕ್ಷಿಸಿ, ಹೆಣ್ಣು ಮಕ್ಕಳನ್ನು ಓದಿಸಿ)ಎಂಬ ಜಾಗೃತಿಯ ಬಗ್ಗೆ ಹಾಗೂ ಮಾತೃವಂದನ ಸಪ್ತಾಯ ಯೋಜನೆಯ ಬಗ್ಗೆ ಸುಜಾತರವರು ಮಾಹಿತಿ ನೀಡಿದರು. ಗೊಂಚಲು ಅಧ್ಯಕ್ಷೆ ಲಾವಣ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗೊಂಚಲು ಪ್ರತಿನಿಧಿ ಕುಸುಮ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಮಂಜುಳಾ ವರದಿ ವಾಚಿಸಿದರು. ಕವಿತಾ ಪ್ರಾರ್ಥಿಸಿದರು. ಅಂಗನವಾಡಿ ಕಾರ್ಯಕರ್ತೆ ಪ್ರಫುಲ್ಲಾ ಸ್ವಾಗತಿಸಿದರು.

Also Read  ಆಟೋ ಚಾಲಕ ನೇಣುಬಿಗಿದು ಆತ್ಮಹತ್ಯೆ..!

error: Content is protected !!
Scroll to Top