(ನ್ಯೂಸ್ ಕಡಬ) newskadaba.com ಕಡಬ, ಜು.22. ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಕೊೖಲ ಗ್ರಾಮದ ಸಬಳೂರು ಸ್ವಸಹಾಯ
ಸಂಘಗಳ ಒಕ್ಕೂಟ ರಾಣಿ ಅಬ್ಬಕ್ಕ ಜ್ಞಾನವಿಕಾಸ ಕೇಂದ್ರದ ಸಭೆ ,ಆರೋಗ್ಯದ ಬಗ್ಗೆ ಮಾಹಿತಿ ಕಾರ್ಯಕ್ರಮ ಸಬಳೂರು ಸರಕಾರಿ ಹಿರಿಯ ಪ್ರಾಥಮಿಕ
ಶಾಲೆಯಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಆಲಂತಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರು ಸಾಂತಪ್ಪ ಗೌಡ ಮಾತನಾಡಿ, ಎಲ್ಲಾ
ಭಾಗ್ಯಕ್ಕಿಂತಲೂ ಆರೋಗ್ಯ ಭಾಗ್ಯ ದೊಡ್ಡದು, ಮಹಿಳೆಯವರು ಮನೆಯ ಆಧಾರಸ್ತಂಭವಾಗಿದ್ದು ಆರೋಗ್ಯದ ಅರಿವನ್ನು ತನ್ನ ಕುಟುಂಬಕ್ಕೆ ನೀಡುವಲ್ಲಿ
ಯಶಸ್ವಿಯಾದರೆ ಒಂದು ಕುಟುಂಬದ ಆರೋಗ್ಯ ಸುಸ್ಥಿರವಾಗಿತ್ತದೆ, ಪ್ರತಿಯೊಬ್ಬ ಮಹಿಳೆ ಈ ಕಾರ್ಯ ಮಾಡಿದಾಗ ಆರೋಗ್ಯವಂತ ಸಮಾಜ
ನಿರ್ಮಾಣವಾಗುತ್ತದೆ, ಇತ್ತೀಚಿನ ದಿನಗಳಲ್ಲಿ ಮಾರಕ ಖಾಯಿಲೆಗಳಾದ ಡೆಂಗ್ಯೂ, ಚಿಕನ್ಗುನ್ಯ, ಮಲೇರಿಯಾ ಜ್ವರಗಳು ಎಲ್ಲಡೆ ಕಂಡು ಬರುತ್ತಿದ್ದ ಇದರ ಬಗ್ಗೆ
ನಾವು ಜಾಗೃತರಾಗಿರಬೇಕು, ಖಾಯಿಲೆಗಳು ಬರುವ ಮುನ್ನ ನಾವು ಎಚ್ಚರದಿಂದ ಇದ್ದು ಆರೋಗ್ಯ ಮಾಹಿತಿಗಳನ್ನು ಅನುಷ್ಟಾನ ಮಾಡಬೇಕು ಎಂದರು.
ಏಣಿತಡ್ಕ ವಿದ್ಯಾಶ್ರೀ ಸ್ವಸಹಾಯ ಸಂಘದ ಲಕ್ಷ್ಮೀ ಬಾಳೆಹಿತ್ಲು ಸಭೆಯ ಅಧ್ಯಕ್ಷತೆವಹಿಸಿದ್ದರು. ಯೋಜನೆಯ ಜ್ಞಾನವಿಕಾಸ ಉಪ್ಪಿನಂಗಡಿ ವಲಯ
ಸಮನ್ವಯ ಅಧಿಕಾರಿ ಸುಜಾತ, ಸೇವಾ ಪ್ರತಿನಿಧಿ ಜಯಶ್ರೀ, ರಾಣಿ ಅಬ್ಬಕ್ಕ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಮೀನಾಕ್ಷಿ ಬಿ.ಕೆ ವೇದಿಕೆಯಲ್ಲಿ
ಉಪಸ್ಥಿತರಿದ್ದರು.
ವಿದ್ಯಾಶ್ರೀ ಸ್ವಸಹಾಯ ಸಂಘದ ಪುಷ್ಪಾ ಸ್ವಾಗತಿಸಿದರು. ಹರಿಣಾಕ್ಷಿ ವಂದಿಸಿದರು. ವಿಜಯ ಸುಂದರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.