ಮಂಗಳೂರು: ರೈಲ್ವೇ ಕಾಮಗಾರಿಯ ವಿದ್ಯುತ್ ಕೇಬಲ್‌ ಕಳ್ಳತನ ► ಐವರು ಕುಖ್ಯಾತ ಡಕಾಯಿತರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.18. ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಗ್ರಾಮದಲ್ಲಿ ವಿದ್ಯುತ್ ಚಾಲಿತ ರೈಲ್ವೆ ಕಾಮಗಾರಿಗೆಂದು ತ್ರಿಮೂರ್ತಿ ಕಂಪೆನಿಯವರು ಕೆಂಜಾರು ಮೂಡಾಯಿ ಮಠ ಎಂಬಲ್ಲಿ ಶೇಖರಿಸಿಟ್ಟಿದ್ದಂತಹ ವಿದ್ಯುತ್ ಕೇಬಲ್ ನ್ನು ಕಳವುಗೈದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಐವರು ಕುಖ್ಯಾತ ಚೋರರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕಳವಾರು ನಿವಾಸಿ ಅಹಮ್ಮದ್ ಬಾವ ಎಂಬವರ ಪುತ್ರ ಆರೀಫ್ ಯಾನೆ ಮುನ್ನ(28), ಕಿನ್ನಿಪದವು‌ ನಿವಾಸಿ ಶೌಕತ್ ಅಲಿ‌ ಎಂಬವರ ಪುತ್ರ ರಮ್ಲಾನ್ ಇದ್ದಿನ್ ಯಾನೆ ಕಮಲ್(20), ಕಳವಾರು ಗ್ರಾಮದ ಆಶ್ರಯ ಕಾಲನಿ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಅಝರುದ್ದಿನ್(23), ತೆಂಕ ಎಕ್ಕಾರು ಗ್ರಾಮದ ಭಟ್ರಕೆರೆ‌ ನಿವಾಸಿ ಮಯ್ಯದಿ ಎಂಬವರ ಪುತ್ರ ಅಬ್ದುಲ್ ಹಮೀದ್(24), ಕೆಂಜಾರು ಗುಳಿತೋಟ ನಿವಾಸಿ ದಿ| ಅಬೂಬಕ್ಕರ್ ಎಂಬವರ ಪುತ್ರ ಮೊಹಮ್ಮದ್ ಹಕೀಂ ಯಾನೆ ಅಕ್ಕಿ(21) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು 2 ಲಕ್ಷ ಮೌಲ್ಯದ ಸ್ವತ್ತು ಹಾಗೂ ಕೃತ್ಯಕ್ಕೆ ಬಳಸಿದ ಓಮ್ನಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ದ ಮಂಗಳೂರು ನಗರದ ವಿವಿಧ ಠಾಣೆಗಳಲ್ಲಿ ದರೋಡೆ, ಕಳ್ಳತನ ಸೇರಿದಂತೆ ಹಲವಾರು ಪ್ರಕರಣಗಳು ದಾಖಲಾಗಿರುತ್ತದೆ.

Also Read  ಕೊಯಿಲ: ಜೀವನದಲ್ಲಿ ಜಿಗುಪ್ಸೆಯುಂಟಾಗಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಕಾರ್ಯಾಚರಣೆಯಲ್ಲಿ ಪೊಲೀಸ್ ಆಯುಕ್ತರಾದ ಟಿ.ಆರ್ ಸುರೇಶ್ ರವರ ನಿರ್ದೇಶನದಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಉಮಾ ಪ್ರಶಾಂತ್ ಮತ್ತು ಪಣಂಬೂರು ಸಹಾಯಕ ಪೊಲೀಸ್ ಆಯುಕ್ತರಾದ ರಾಜೇಂದ್ರ ಡಿ.ಎಸ್. ರವರ ಮಾರ್ಗದರ್ಶನದಲ್ಲಿ ಬಜಪೆ ಪೊಲೀಸ್ ಠಾಣಾ ನಿರೀಕ್ಷಕರಾದ ಎಸ್. ಪರಶಿವಮೂರ್ತಿ, ಉಪ ನಿರೀಕ್ಷಕ ಶಂಕರ ನಾಯರಿ, ಸಿಬ್ಬಂದಿಗಳಾದ ಪೂವಪ್ಪ, ರಾಮಚಂದ್ರ, ಜನಾರ್ಧನ ಗೌಡ, ಪ್ರಕಾಶ್ ಮೂರ್ತಿ, ಚಂದ್ರ ಮೋಹನ್, ರಾಜೇಶ್, ಭರತ್, ಶಶಿಧರ್, ಪ್ರೇಮಾನಂದ, ಲಕ್ಷ್ಮಣ ಕಾಂಬ್ಳೆ ಭಾಗವಹಿಸಿದ್ದರು.

Also Read  ಪುತ್ತೂರು: ಎಡನೀರು ಶ್ರೀಮದ್ ಶಂಕರಾಚಾರ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳು ಲಿಂಗೈಕ್ಯ

error: Content is protected !!
Scroll to Top