ವಿಟ್ಲ: ಯುವಕನನ್ನು ಅಟ್ಟಾಡಿಸಿ ರಾಡಿನಿಂದ ಹಲ್ಲೆ ► ನಾಲ್ವರ ತಂಡದಿಂದ ಕೃತ್ಯ



(ನ್ಯೂಸ್ ಕಡಬ) newskadaba.com ವಿಟ್ಲ, ಸೆ.14. ಯುವಕನೋರ್ವನನ್ನು ಅಟ್ಟಾಡಿಸಿ ರಾಡಿನಿಂದ ಬಡಿದು ಕೊಲೆಗೆ ಯತ್ನಿಸಿದ ಘಟನೆ ವಿಟ್ಲದ ಕನ್ಯಾನ ಕೆಳಗಿನ ಪೇಟೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.







ಮಿತ್ತನಡ್ಕ ನಿವಾಸಿ ನವಾಫ್(23), ಹಲ್ಲೆಗೊಳಗಾದ ಯುವಕ. ಕನ್ಯಾನದ ಕುಖ್ಯಾತ ಕ್ರಿಮಿನಲ್ ಇಕ್ಕು ಯಾನೆ ಇಕ್ಬಾಲ್ ಮತ್ತು ಹಾರೀಸ್ ಹಾಗೂ ಕೇರಳ ಮೂಲದ ಇಬ್ಬರು ಶುಕ್ರವಾರ ರಾತ್ರಿ ಆಲ್ಟೋ 800 ಕಾರಿನಲ್ಲಿ ಮಾರಕಾಸ್ತ್ರಗಳೊಂದಿಗೆ ಬಂದು ಹಲ್ಲೆ ನಡೆಸಿದ್ದಾರೆ. ಗಾಯಾಳುವನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






error: Content is protected !!
Scroll to Top