ಕೊಳೆ ರೋಗ ಅರ್ಜಿ ಸ್ವೀಕರಣೆಯಲ್ಲಿಯೂ ಲಂಚ ತಾಂಡವ..!! ► ಕಡಬ ಗ್ರಾಮ ಕರಣಿಕರ ಕಛೇರಿಯಲ್ಲಿ ಪ್ರತಿ ಅರ್ಜಿಗೆ 40 ರೂ. ವಸೂಲಿ..!!

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.13. ಈ ಬಾರಿ ಪ್ರಕೃತಿ ವಿಕೋಪದಲ್ಲಿ ರೈತರ ಕೃಷಿ ನಷ್ಟವುಂಟಾಗಿ ಜನರು ಸಂಕಷ್ಟದಲ್ಲಿದ್ದರೆ, ಕಂದಾಯ ಇಲಾಖೆಯವರು ಇದನ್ನು ಯಾವುದೇ ಗಣನೆಗೆ ತೆಗೆದುಕೊಂಡಿಲ್ಲ ಎನ್ನುವುದು ಕಾಣುತ್ತಿದೆ.

ವಿಪರೀತ ಮಳೆಯಿಂದಾಗಿ ಅಡಿಕೆ, ಕಾಳು ಮೆಣಸಿಗೆ ಕೊಳೆ ರೋಗ ಬಂದಿದ್ದು ಈ ಬಗ್ಗೆ ಸರಕಾರ ಈಗಾಗಲೇ ಅರ್ಜಿ ನೀಡಲು ಸೂಚಿಸಿದ್ದು ಜನತೆ ಸಿಕ್ಕಿದಷ್ಟದರೂ ಪುಣ್ಯ ಎಂಬಂತೆ ಬಹಳ ಕಷ್ಟಪಟ್ಟು ಅರ್ಜಿ ನೀಡುತ್ತಿದ್ದಾರೆ. ಆದರೆ ಜನರ ಕಷ್ಟ, ನಷ್ಟ ಯಾವುದನ್ನು ಗಣನೆಗೆ ತೆಗೆದುಕೊಳ್ಳದ ಕಡಬ ಗ್ರಾಮಕರಣಿಕರ ಕಚೇರಿಯ ಸಿಬ್ಬಂದಿಗಳು ಮಾತ್ರ ಪ್ರತಿ ಕೊಳೆ ರೋಗ ಅರ್ಜಿಗೆ 40 ರೂ. ವಸೂಲಿ ಮಾಡುತ್ತಿದ್ದಾರೆ. ಇದರಲ್ಲಿ ಎರಡು ವರ್ಷದ ಭೂ ತೆರಿಗೆ (ವರ್ಷಕ್ಕೆ 5 ರೂ. ನಂತೆ) 10 ರೂ.ನ ರಶೀದಿ ನೀಡಿ 30. ರೂ.ಗಳನ್ನು ಯಾವುದೇ ಕಾರಣವಿಲ್ಲದೆ ಹೆಚ್ಚುವರಿಯಾಗಿ ಪಡೆದುಕೊಳ್ಳುತ್ತಿದ್ದಾರೆ. ವಿಶೇಷವೇನೆಂದರೆ ಎಲ್ಲ ಅಗತ್ಯ ದಾಖಲೆಯೊಂದಿಗೆ ಅರ್ಜಿ ನೀಡಿದರೂ ಇಲ್ಲಿ 40 ರೂ. ಪಾವತಿಸಲೇ ಬೇಕು. ಜನರು ವಿಧಿ ಇಲ್ಲದೆ ಹಣ ನೀಡುತ್ತಿದ್ದಾರೆ. ಜನತೆ ಸಂಕಷ್ಟದಲ್ಲಿದ್ದರೂ ಮಾನವೀಯತೆ ಇಲ್ಲದೆ ಹಣ ಕೀಳುತ್ತಿರುವ ಇಂತವರ ವಿರುದ್ದ ಮೇಲಾಧಿಕಾರಿಗಳು ಕ್ರಮ ತೆಗೆದುಕೊಳ್ಳುವುದು ಸಾರ್ವಜನಿಕ ಹಿತದೃಷ್ಟಿಯಿಂದ ಒಳ್ಳೆಯದು.

error: Content is protected !!

Join the Group

Join WhatsApp Group