ಕಡಬ: ಕಾರು – ಬೈಕ್ ಢಿಕ್ಕಿ ► ಸವಾರ ಗಂಭೀರ



(ನ್ಯೂಸ್ ಕಡಬ) newskadaba.com ಕಡಬ, ಸೆ.11. ಬೈಕ್ ಹಾಗೂ ಕಾರು ನಡುವೆ ಢಿಕ್ಕಿಯುಂಟಾದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಳಾರ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.







ಮಾರುತಿ ಆಲ್ಟೋ ಕಾರೊಂದನ್ನು ಅದರ ಚಾಲಕ
ಕಾರ್ಕಳ-ಕನ್ವರೆ ರಸ್ತೆಯ ಕಡೆಯಿಂದ ಕಡಬ-ಉಪ್ಪಿನಂಗಡಿ ಮುಖ್ಯ ರಸ್ತೆಗೆ ಯಾವುದೇ ಸೂಚನೆ ನೀಡದೇ ಒಮ್ಮೆಲೇ ಬಲಬದಿಗೆ ಅತೀ ವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಟಿವಿಎಸ್ ಅಪಾಚಿ ಬೈಕ್ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಐತ್ತೂರು ಗ್ರಾಮದ ನೇಲ್ಯಡ್ಕ ನಿವಾಸಿ ಚೆನ್ನಯ್ಯ ಪರವ ಎಂಬವರ ಪುತ್ರ ದಯಾನಂದ(28) ಗಂಭೀರ ಗಾಯಗೊಂಡಿದ್ದು, ಕಡಬದ 108 ವಾಹನದ ಮೂಲಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






error: Content is protected !!
Scroll to Top